ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
ನಿನ್ನ ರಾತ್ರಿ ಒಂದು ಗಂಟೆಯವರಿಗೆ ಎದ್ದು ಕುಳಿತಿದ್ದು ಲೇಖನವನ್ನು ಸಿದ್ಧಪಡಿಸುತ್ತಿದ್ದೆ.
ಇಂದು ಬೆಳಗಿನ ಜಾವ ಆರೂವರೆಗೆ ಏಳುವಾಗ ನನ್ನ ಹೆಂಡತಿ ವಿಜಯಕರ್ನಾಟಕ ಪತ್ರಿಕೆಯನ್ನು ಒಳತರುತ್ತಾ ’ಹರಿಹರೇಶ್ವರ ಅವರು ಇನ್ನಿಲ್ಲ’ ಎಂದಾಗ ಅಕ್ಷರಶಃ ನನಗೆ ಆಘಾತವಾಯಿತು.
ಹರಿಹರೇಶ್ವರ-ನಾಗಲಕ್ಷ್ಮಿ ಅವರನ್ನು ನಾನು ನೇರವಾಗಿ ಕಂಡವನಲ್ಲ. ಮಾತನಾಡಿಸಿದವನೂ ಅಲ್ಲ. ಅವರ ಆತಿಥ್ಯದ ಸವಿಯನ್ನು ಉಣ್ಣುವ ಭಾಗ್ಯವೂ ನನಗಿರಲಿಲ್ಲ.
‘ಅಮೆರಿಕನ್ನಡ’ ಎಂಬ ವಿಶಿಷ್ಟ ಕನ್ನಡ ಪತ್ರಿಕೆಯನ್ನು ಓದಿದಾಗ ಹರಿಹರೇಶ್ವರ ಅವರ ಹೆಸರನ್ನು ನಾನು ಮೊದಲ ಬಾರಿಗೆ ಕೇಳಿದ್ದೆ. ಆನಂತರ ಪತ್ರಿಕೆಗಳ ಮೂಲಕ, ಅಮೆರಿಕದಲ್ಲಿ ಅವರು ನಡೆಸುತ್ತಿದ್ದ ‘ಕನ್ನಡ ಪರಿಚಾರಕ ಸೇವೆಯ ಮೂಲಕ ಅವರ ಚಟುವಟಿಕೆಗಳ ಬಗ್ಗೆ ಸ್ವಲ್ಪ ತಿಳಿದಿದ್ದೆ. ಅಂತರ್ಜಾಲದಲ್ಲಿ ಅವರ ಲೇಖನಗಳನ್ನು ಓದಿದ್ದೆ. ಅಮೆರಿಕಕ್ಕೆ ಹೋದ ಯಾವುದೇ ಕನ್ನಡ ಸಾಹಿತಿ ಹರಿಹರೇಶ್ವರ ದಂಪತಿಗಳ ಆತಿಥ್ಯವನ್ನು ಸವಿಯದೇ ಬರುವುದು ಅಪರೂಪ. ಹರಿಹರೇಶ್ವರ ಅವರ ಮನೆ ಕನ್ನಡಿಗರಿಗೆ ’ನಮ್ಮ ಮನೆ’ ಯಾಗಿತ್ತು ಎಂಬ ಮಾತನ್ನು ಹಲವು ಸಾಹಿತಿಗಳು ಹೇಳುವುದು ಅತಿಶಯವಾಗಿರಲಿಲ್ಲ!
ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದ ಹರಿಹರೇಶ್ವರ ಅವರು ಮನೆಗಳನ್ನು, ಸೇತುವೆಗಳನ್ನು ಕಟ್ಟುವುದರ ಜೊತೆಗೆ ಕನ್ನಡ ಮನವನ್ನು ಕಟ್ಟಿದರು, ಕನ್ನಡಿಗರನ್ನು ಒಗ್ಗೂಡಿಸಿದರು. ಹಾಗೂ ಕನ್ನಡ ಕೆಲಸವನ್ನು ಮಾಡಿದರು. ಮಾಡಿಸಿದರು. ಬರಹ-ನುಡಿ ತಂತ್ರಾಂಶಗಳು ದೊರೆಯುವ ಮೊದಲೇ ‘ಅಮೆರಿಕನ್ನಡ’ವನ್ನು ಪ್ರಕಟಿಸಿದರು. ಕನ್ನಡದಲ್ಲಿ ಸುಮಾರು ೨೦ ಪುಸ್ತಕಗಳನ್ನು ಬರೆದಿರುವರು. ಅಂತರ್ಜಾಲದಲ್ಲಿ ಲೇಖನಗಳನ್ನು ಬರೆದರು. ಆಸಕ್ತರಿಂದ ಲೇಖನ / ಪುಸ್ತಕಗಳನ್ನು ಬರೆಯಿಸಿದರು. ೨೦೦೦ ಅಕ್ಕ ಸಮ್ಮೇಳನವನ್ನು ನಡೆಸಿದರು.
೭ ವರ್ಷಗಳ ಹಿಂದೆ ಅಮೆರಿಕವನ್ನು ಬಿಟ್ಟು ಮೈಸೂರಿನಲ್ಲಿ ನೆಲೆಸಿದರು. ಆದರೆ ಕನ್ನಡದ ಕೆಲಸವನ್ನು ಬಿಡಲಿಲ್ಲ. ಇಲ್ಲಿಯೂ ಮುಂದುವರೆಸಿದರು.
ಹರಿಹರೇಶ್ವರ ಅವರು
ಇದೇ ಸೆಪ್ಟೆಂಬರಿನಲ್ಲಿ ಅಕ್ಕ ಸಮ್ಮೇಳನ ಅಮೆರಿಕದ ನ್ಯೂಜರ್ಸಿಯಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಕನ್ನಡ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಆಗಿರುವ ಕೆಲಸವನ್ನು ಗುರುತಿಸುವ ಒಂದು ಗ್ರಂಥವನ್ನು ಸಂಪಾದಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ‘ಕನ್ನಡದಲ್ಲಿ ಆರೋಗ್ಯ ಸಾಹಿತ್ಯ’ ವನ್ನು ಕುರಿತಂತೆ ಲೇಖನವನ್ನು ಸಿದ್ಧಪಡಿಸಿ, ಇದೇ ೨೫ರೊಳಗೆ ಕಳುಹಿಸುವಂತೆ ನನಗೆ ಹೇಳಿದ್ದರು. ನಿನ್ನೆ ರಾತ್ರಿ ಅದೇ ಲೇಖನವನ್ನು ಸಿದ್ಧಪಡಿಸುತ್ತಿದ್ದೆ. ಲೇಖನವನ್ನು ಬರೆಯುವಂತೆ ದೂರವಾಣಿಸಿದಾಗ ನನ್ನನ್ನು ಮೈಸೂರಿಗೆ ತಮ್ಮ ಮನೆಗೆ ಆಹ್ವಾನಿಸಿದ್ದರು. ಬರುತ್ತೇನೆ ಸರ್ ಎಂದಿದ್ದೆ.
ನಾನು ಮೈಸೂರಿಗೆ ಹೋಗುವಷ್ಟರಲ್ಲಿ…..
ನತದೃಷ್ಟ ನಾನು.
ಶಿಕಾರಿಪುರದ ಹರಿಹರೇಶ್ವರ ಅವರು ಅಪರೂಪದ ಅಮೆರಿಕನ್ನಡಿಗ! ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ನಷ್ಟವನ್ನು ಸಹಿಸುವ ಶಕ್ತಿ ಅವರ ಮನೆಮಂದಿಗೆ ದೊರೆಯಲಿ.
- ಡಾ|ನಾ.ಸೋಮೇಶ್ವರ
www.yakshaprashne.org
http://i.ytimg.com/vi/my_AagDm_BQ/0.jpg
Comments
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
In reply to ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ by asuhegde
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
In reply to ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ by venkatesh
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
In reply to ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ by venkatesh
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
In reply to ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ by santhosh_87
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
In reply to ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ by kavinagaraj
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
In reply to ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ by asuhegde
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
In reply to ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ by asuhegde
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
ಉ: ತೇರನೆಳೆದವರು..
ಉ: ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ