ಬಡವ-ಸಿರಿವಂತ
ಬಡತನ ಎನ್ನುವುದು ಕೇವಲ ಶಬ್ದವೇ?
ಇಲ್ಲ, ಜೀವನದ ಒಂದು ಪರಿಧಿ
ಇದು ಕೆಲವರಿಗೆ ಮಾತ್ರ ಸ್ವಂತದ್ದು
ಮತ್ತಿತರರಿಗೆ ಅರಸಿ ಬಂದು
ಬಿಡಿಸಿಕೊಳ್ಳಲಾಗದಂತೆ ಬಾಚಿ ಅಪ್ಪಿಕೊಳ್ಳುತ್ತದೆ.
ಸಿರಿತನ ಬಡತನದ ಮಧ್ಯ ಇರುವ ಅಂತರ
ಅಹಂಕಾರ,ಸ್ವಾರ್ಥ,ಪ್ರೀತಿ, ಮದ, ಮಾತ್ಸರ್ಯ
ಹಣವಿದ್ದವರೆಲ್ಲಾ ಸಿರಿವಂತರಲ್ಲ
ಹಣವಿಲ್ಲದವರು ಬಡವರೂ ಅಲ್ಲ
ಹಾಗಿದ್ದರೂ ಇದಕ್ಕೊಂದು ಇದ್ದೇ ಇದೆ ಮಧ್ಯದ ಅಂತರ.
ಬಡವನಾದವನಿಗೆ ಎಲ್ಲವನ್ನೂ ಪಡೆಯುವ ಆಸೆ
ಸಿರಿವಂತನಿಗೆ ಇರುವುದನ್ನು ತ್ಯಜಿಸುವ ಆಸೆ
ಸಿರಿವಂತ ಬಡವ ಸೇರಿದರೆ
ಕೈಗೂಡುತ್ತದೆಯೆ ಇವರೀರ್ವರ ಮನದ ಆಸೆ
ಉತ್ತರವನ್ನು ಬಲ್ಲವನೇ ಬಲ್ಲ!
Rating
Comments
ಉ: ಬಡವ-ಸಿರವಂತ
In reply to ಉ: ಬಡವ-ಸಿರವಂತ by ksraghavendranavada
ಉ: ಬಡವ-ಸಿರವಂತ
In reply to ಉ: ಬಡವ-ಸಿರವಂತ by ksraghavendranavada
ಉ: ಬಡವ-ಸಿರಿವ೦ತ
In reply to ಉ: ಬಡವ-ಸಿರಿವ೦ತ by manju787
ಉ: ಬಡವ-ಸಿರಿವ೦ತ
ಉ: ಬಡವ-ಸಿರಿವಂತ
In reply to ಉ: ಬಡವ-ಸಿರಿವಂತ by santhosh_87
ಉ: ಬಡವ-ಸಿರಿವಂತ