ಕಾಗದ ಬಂತು ಕಾಗದ

ಕಾಗದ ಬಂತು ಕಾಗದ

ತೀರ್ಥರೂಪರಿಗೆ, ಮಾತೃಶ್ರೀಯವರಿಗೆ, ತೀರ್ಥರೂಪ ಸಮಾನರಿಗೆ, ಮಾತೃಶ್ರೀ ಸಮಾನರಿಗೆ, ಶ್ರೀ, ಕ್ಷೇಮ, ಪ್ರೀತಿಯ ತಂಗಿಗೆ,

ಯಾಕ್ರೀ ನೆನಪು ಬರ್ತಾ ಇಲ್ವಾ , ಸಾಮಾನ್ಯವಾಗಿ ೧೯೯೫ ರ ನಂತರ ಹುಟ್ಟಿರುವವರಿಗೆ ಈ ಪದಗಳು ಲ್ಯಾಟಿನ್ ಪದಗಳ ತರಹ ಕೇಳಿಸ್ತವೆ. ಯಾಕಂದ್ರೆ ೯೦ ರ ಹೊತ್ತಿಗೆಲ್ಲ ಇಮೇಲ್ ಬಂದು ಕೂತಿತ್ತು, ಅಲ್ಲಿಂದ ಮುಂದಕ್ಕೆ ನಿಮಗೆಲ್ಲ ಗೊತ್ತೇ ಇದೆ. ಈ ಕಾಗದ ಅನ್ನೋದು ಎಷ್ಟೊಂದು ಹಳೆಯ ಸಂಸ್ಕೃತಿಯ ಪ್ರತೀಕವಾಗಿ ನಮ್ಮೊಂದಿಗಿತ್ತಲ್ವ? ಎಲ್ಲಿಗೆ ಹೋಯ್ತು ಆ ಚಡಪಡಿಕೆ, ಆ ಕಾತುರ , ಕಾಗದ ಬಂದೊಡನೆ ಯಾರಿಂದ ಬಂದಿದೆ ಅನ್ನೋ ಕುತೂಹಲ? ಇಂತಿ ನಿಮ್ಮ ಪ್ರೀತಿಯ, ಎಲ್ಲೋಯ್ತ್ರಿ ಈ ಪದಗಳೆಲ್ಲ? ನೀವು ಇವತ್ತು ಕಳಿಸೋ ಇಮೈಲ್ನಲ್ಲಿ ಇದ್ನೆಲ್ಲ ಬರೀತೀರೇನ್ರಿ? ಒಂದೇ ಒಂದು ಸಾರಿ ವಾಪಾಸ್ ಹೋಗೋಣ ಕಣ್ರೀ. ಒಂದೇ ಒಂದ್ಸಲ ಪ್ರಯತ್ನ ಪಡೋಣ. ಮರೆತುಬಿಡ್ರಿ ಈ ಇಮೇಲ್, ಎಸ್ಸೆಮ್ಮೆಸ್ ಎಲ್ಲ ಮರೆಯೋಣ. ಒಂದೇ ಒಂದು ವಾರಕ್ಕಾಗಿ ಮರೆಯೋಣ. ಪೋಸ್ಟ್ ಆಫೀಸೆಗೆ ಹೋಗಿ ಒಂದ್ ೫ ಇನ್ಲ್ಯಾಂಡ್ ಲೆಟರ್ಸ್ ತರೋಣ. ಆಗ ನೋಡ್ರಿ ಮಜಾ, ಯಾರಿಗೆ ಬರೀಬೇಕು ಅನ್ನೋದೇ ದೊಡ್ಡ ಧರ್ಮ ಸಂಕಟ. ಹಂಗೂ ಹಿಂಗೂ ಮಾಡಿ ಒಂದ್ ೫ ಜನರ ಲಿಸ್ಟ್ ಮಾಡಿದ್ರಿ ಅಂತ ಇಟ್ಕೊಳ್ಳಿ, ಅವ್ರ ಅಂಚೆ ವಿಳಾಸ ಇದೆಯೇನ್ರಿ? ಮತ್ತೆ ಕಾಗದ ಎಲ್ಲಿಗೆ ಕಳಿಸೋದು? ಒಮ್ಮೆ ಯೋಚನೆ ಮಾಡಿ ಸ್ನೇಹಿತರೇ. ಓಡುವ ಆತುರದಲ್ಲಿ ನಾವೆಷ್ಟು ಮರೀತಿದ್ದೇವೆ. ಬೇಡ ಸ್ವಲ್ಪ ನಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳೋಣ. ಏನಾದ್ರು ಅಂದ್ಕೊಳ್ಳಿ ಈ ವಾರ ಗ್ಯಾರಂಟಿ ೫ ಪತ್ರ ಬರ್ದೇ ಬರೀತೀನಿ. ಒಮ್ಮೆ ಯೋಚಿಸಿ ನೋಡಿ ರಿಸೀವ್ ಮಾಡಿದವರ ಕುತೂಹಲ ಹೆಂಗಿರುತ್ತೇ ಅಂತ.

ಇಂತಿ ನಿಮ್ಮ ಶ್ರೇಯೋಭಿಲಾಶಿ.

 

"ವಿಹಾರಿ"

Rating
No votes yet

Comments