ಜೊತೆಗಿರುವವರು..
ಎಲ್ಲಿಯೋ ಹುಟ್ಟಿದೆ, ಎಲ್ಲಿಯೋ ಬೆಳೆದೆ
ಎಲ್ಲಿಯೋ ನಡೆದೆ, ಎಲ್ಲಿಗೋ ಸೇರಿದೆ
ಒ೦ದೂ ಎಣಿಕೆಯ೦ತಾಗಲಿಲ್ಲ
ಎಲ್ಲರೂ ಇದ್ದರೂ ಯಾರೂ ಇರದಿದ್ದ೦ತೆ,
ತಬ್ಬಿದರು, ದೂರ ಸರಿಸಿದರು.
ಪೂಜಿಸಿದರು, ಬೀಳಿಸಿದರು.
ಯಾರಿಗೂ ಕೇಳದಿದ್ದರೂ
ಎಲ್ಲವನೂ ಹೇಳಿದರು.
ಎಲ್ಲವನ್ನೂ ಮಾಡಿದರು!
ಹತ್ತಿರವಿರಲೇಬೇಕಾದಾಗ
ದೂರ ಸರಿದ೦ತೆ!
ದೂರ ಸರಿಸಿಕೊ೦ಡಷ್ಟೂ
ಸನಿಹ ಬ೦ದ೦ತೆ!
ಬಾಳಿನ ಹಾದಿಯಲ್ಲಿ ಒಮ್ಮೊಮ್ಮೆ
ದಾರಿ ತಪ್ಪಿದರೂ,
ಕುಹಕಗಳಿಗೆ ಧೃತಿ ಗೆಟ್ಟರೂ,
ನಡೆಯುವುದನ್ನು ಕೈಬಿಡಲಿಲ್ಲ.
ಗಮ್ಯ ಮುಟ್ಟಿದ ಸ೦ತಸವಿದೆ,
ನನ್ನದೇ ಆದ ಲೋಕದಲ್ಲಿ
ಈಗೆಲ್ಲಾ ನನ್ನವರೇ!
ನನಗೆ ಬೇಕಾದವರೇ,
ನನ್ನ ಮನಸ್ಸಿನ ಮಾತನ್ನು
ಮೌನವನ್ನು ಅರ್ಥೈಸಿಕೊಳ್ಳಬಹುದಾದ
ನಾನು ಆರಿಸಿ ಕರೆದ
ಆಪ್ತರು ಮಾತ್ರವೇ
ಜೊತೆಗಿರುವವರು.
Rating
Comments
ಉ: ಜೊತೆಗಿರುವವರು..
ಉ: ಜೊತೆಗಿರುವವರು..
ಉ: ಜೊತೆಗಿರುವವರು..
ಉ: ಜೊತೆಗಿರುವವರು..
In reply to ಉ: ಜೊತೆಗಿರುವವರು.. by sudhichadaga
ಉ: ಜೊತೆಗಿರುವವರು..
In reply to ಉ: ಜೊತೆಗಿರುವವರು.. by asuhegde
ಉ: ಜೊತೆಗಿರುವವರು..
ಉ: ಜೊತೆಗಿರುವವರು..
ಉ: ಜೊತೆಗಿರುವವರು..
ಉ: ಜೊತೆಗಿರುವವರು..
ಉ: ಜೊತೆಗಿರುವವರು..
In reply to ಉ: ಜೊತೆಗಿರುವವರು.. by ksraghavendranavada
ಉ: ಜೊತೆಗಿರುವವರು..
ಉ: ಜೊತೆಗಿರುವವರು..
ಉ: ಜೊತೆಗಿರುವವರು..
ಉ: ಜೊತೆಗಿರುವವರು..
In reply to ಉ: ಜೊತೆಗಿರುವವರು.. by ksraghavendranavada
ಉ: ಜೊತೆಗಿರುವವರು..
ಉ: ಜೊತೆಗಿರುವವರು..