ಇನ್ನು ನನಗೆಲ್ಲಿ ನಿದ್ರೆ ಸಖಿ?

ಇನ್ನು ನನಗೆಲ್ಲಿ ನಿದ್ರೆ ಸಖಿ?


ಇನ್ನು ನನಗೆಲ್ಲಿ ನಿದ್ರೆ ಸಖಿ?


ಬಿಟ್ಟಗಣ್ಣನ್ನು ಬಿಟ್ಟ ಹಾಗೆಯೇ


ಕಳೆಯುತ್ತಿದ್ದೇನೆ ರಾತ್ರಿಗಳನ್ನು


ಇನ್ನು ನನಗೆಲ್ಲಿ ನಿದ್ರೆ ಸಖಿ?


 


ಕೋಗಿಲೆ ದಾವೆಯನ್ನು ಹೂಡಿದೆ


ಬೆಳದಿಂಗಳ ನ್ಯಾಯಾಲಯದಲ್ಲಿ


ಇನ್ನು ನನಗೆಲ್ಲಿ ನಿದ್ರೆ ಸಖಿ?


 


ಶೀತಲಕಿರಣನೇ ನ್ಯಾಯಾಧಿಪತಿ


ಸಾಕ್ಷಿ ವಸಂತ ಹಾಗೂ ತಂಗಾಳಿ


ಇನ್ನು ನನಗೆಲ್ಲಿ ನಿದ್ರೆ ಸಖಿ?


 


ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಿದೆ


ನಿನ್ನ ಅಪರಾಧವು ಸಾಬೀತಾದರೆ!


ಇನ್ನು ನನಗೆಲ್ಲಿ ನಿದ್ರೆ ಸಖಿ?


 


ಜಗದ ಕಣ್ಣಲಿ ನೀನು ಕೃತಘ್ನಳಾದರೆ


ಹಳಿಯುವರೆಲ್ಲ! ನಾ ಹೇಗೆ ಸಹಿಸಲಿ


ಇನ್ನು ನನಗೆಲ್ಲಿ ನಿದ್ರೆ ಸಖಿ?


 


ಹೋಗು ಸಖಿ! ದೂರ ದೂರ ಹೊರಟು ಹೋಗು


ಜೊನ್ನ ಹರಿಯದಲ್ಲಿಗೆ, ಜೇನ್ ಗಾನವಿಲ್ಲದೆಡೆಗೆ


ಹಸುರು ಉಕ್ಕದೆಡೆಗೆ, ಮಳೆ ಬಿಲ್ ಮೂಡದೆಡೆಗೆ


ಹೊರಟು ಹೋಗು ಹೃದಯಗಳು ಮರುಗದೆಡೆಗೆ


 


ನೀನು ಅಪರಾಧಿಯಾಗುವುದ ಸಹಿಸೆ


ಕಾಲಕೊಳ್ಳಲಿ ಬಿಡು ಇಂದೇ ತನ್ನ ಹಿಸೆ


 


-ಡಾ|ನಾ.ಸೋಮೇಶ್ವರ


www.yakshaprashne.org


http://photogallery.canberrabirds.org.au/images/Koel_Common2_Dabb.jpg

Rating
No votes yet

Comments