ಮೂಢ ಉವಾಚ -24

ಮೂಢ ಉವಾಚ -24

        ಮೂಢ ಉವಾಚ -24


ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?|
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು|
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||

ಹೊನ್ನು ಕಾರಣವಲ್ಲ, ಹೆಣ್ಣು ಕಾರಣವಲ್ಲ|
ಮಣ್ಣು ಕಾರಣವಲ್ಲ, ಮನಸು ಕಾರಣವಲ್ಲ||
ಬೇಕು ಬೇಕು ಬೇಕೆಂಬ ಅನಂತ ಅತೃಪ್ತತೆಗೆ|
ಕಾಮ ಕಾರಣವಲ್ಲದೆ ಮತ್ತೊಂದಲ್ಲ ಮೂಢ||

Rating
No votes yet

Comments