ಇನ್ನೂ ನೀನನ್ನ ಕೊರಗಿಸದಿರು ಸಖಿ!

ಇನ್ನೂ ನೀನನ್ನ ಕೊರಗಿಸದಿರು ಸಖಿ!

ಸಿರಿಗಂಧದ ದೇಹ, ಚಂಚಲ ಚಿತ್ತ
ಕುಡಿನೋಟದ ಜೊತೆಗೇ ಆ ಮುಗುಳ್ನಗು
ನಾನೊಮ್ಮೆ ಹುಚ್ಚನಾದರೂ,
ಜನರೇ ನನ್ನದಲ್ಲವೇ ಅಲ್ಲ ಅಪರಾಧ


ನೀಲಾಕಾಶದಂತಿರುವ ನಿನ್ನ ಈ ಕಂಗಳಲ್ಲಿ
ಪಕ್ಷಿಯಾಗಿ ಕಳೆದುಹೋಗಲೇ ನಾನು
ನಿನ್ನ ಬಾಹುಗಳ ಆಸರೆ ಇದ್ದರೆ ನನಗೆ
ಬೆಂಕಿಯ ಮೇಲೂ ಮಲಗುವೆ ನಾನು
ನನ್ನ ವಿರಕ್ತ ಮನವೂ ಕಲುಕಿದೆ ಇಂದು
ನಿನ್ನೀ ಶೃಂಗಾರಮಯ ಒನಪಿಗೆ ಸಖಿ


ಸುಂದರ ತನುವು, ಸುಂದರ ಮನವು
ನೀ ಸುಂದರವಾದ ಮೂರುತಿಯು
ಅನ್ಯರಿಗೆ ಇಲ್ಲದೇ ಇರಬಹುದು
ನನಗಿದೆ ನಿನ್ನ ಅವಶ್ಯಕತೆಯೂ
ಮೊದಲೇ ನಿನಗಾಗಿ ನಾ ಕೊರಗಿರುವೆ
ಇನ್ನೂ ನೀನನ್ನ ಕೊರಗಿಸದಿರು ಸಖಿ
****************
ಆತ್ರಾಡಿ ಸುರ‍ೇಶ ಹೆಗ್ಡೆ


ಹಳೆಯ ಹಿಂದಿ ಚಿತ್ರಗೀತೆಯನ್ನು ನೆನಪಿಸಿಕೊಂಡು ಬರೆದದ್ದು.
ಮೂಲ ಗೀತೆ: ಚಂದನ್ ಸ ಬದನ್, ಚಂಚಲ್ ಚಿತುವನ್
ಚಿತ್ರ: ಸರಸ್ವತಿ ಚಂದ್ರ
ಗಾಯನ: ದಿ. ಮುಕೇಶ್

Rating
No votes yet

Comments