ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
ಬೆಳಗ್ಗೆನೇ ಗೌಡಪ್ಪ ಹೆಗಲು ಮೇಲೊಂದು ಕೆಂಪನೇ ಟವಲ್, ಹಣೆಗೆ ವಿಭೂತಿ ಬಳ್ಕೊಂಡು, ಮನೇಲಿ ಆ ಕಡೆಯಿಂದ ಈ ಕಡೆ ಓಡಾಡ್ತಾ ಇದ್ದ. ಹಣೆಗೆ ಹಚ್ಚಿದ್ದ ವಿಭೂತಿ ಮೀಸೆ ಮೇಲೆ ಬಿದ್ದು, ಮೀಸೆ ಎಲ್ಲಾ ಬೆಳ್ಳಗೆ ಆಗೋಗಿತ್ತು. ಆಕ್ಷಿ ಅಂದರೆ ಅಂಗೇ ಸುಣ್ಣದ ಪುಡಿ ಉದಿರದಂಗೆ ಉದರೋದು. ಗೌಡರೆ ಏನ್ ಹಿಂಗ್ ಓಡಾಡ್ತಾ ಇದೀರಿ ಅಂದೆ. ಮೊನ್ನೆ ನಮ್ಮ ತೋಟದಾಗೆ ಕೆರೆ ಹಾವು ಹೊಡೆದೆ ಕಲಾ, ಅದಕ್ಕೆ ಸರ್ಪ ದೋಸ ಮಾಡಿಸ್ತಾ ಇದೀನಿ ಅಂದ. ಒಳಗೆ ಹೋದರೆ ಒಂದು ಜಡೆ ಬಿಟ್ಟ ಆಕೃತಿ ರಂಗೋಲಿ ಹಾಕ್ತಾ ಇತ್ತು. ಯಾವುದೋ ಫಿಗರ್ ಇರಬೇಕು ಅಂತಾ ಹತ್ತಿರ ಹೋದ್ರೆ. ಏ ಮುಟ್ಟ ಬೇಡ್ರಿ ಮಾರಾಯ್ರೆ. ಮಗ ಪೂಜಾರಿ. ಅಡುಗೆ ಮನೆಗೆ ಹೋದ್ರೆ. ಗೌಡನ ಹೆಂಡರು, ಫುಲ್ ಅಕ್ಕಮಹಾದೇವಿ ಮತ್ತು ಕಿತ್ತೂರು ಚನ್ನಮ್ಮನ ತರಾ ಮಿಕ್ಸ್ ಆಗಿದ್ವು. ಹಣೆಗೆ ವಿಭೂತಿ ಕಚ್ಚೆ ಸೀರೆ. ಅಟ್ಟೊತ್ತಿಗೆ ಸುಬ್ಬ ಬಂದು ಮನೆ ಮುಂದೆ ಬಾಳೆ ಕಂದು ತೋರಣ ಕಟ್ಟಿದ. ಕಟ್ಟಿಗೆ ಒಡೆಯೋ ಕಿಸ್ನಂಗೆ ತೋರಣ ದನ ತಿನ್ನಬಾರದು ಅಂತಾ ಎರಡು ಕಟ್ಟು ಬೀಡಿ ಕೊಟ್ಟು ಕೂರಿಸಿದ್ವಿ. ಅಲ್ಲೇ ಸಣ್ಣ ಹೋಮ ತರಾ ಆಗಿತ್ತು.
ಸರಿ ಮುಖ್ಯ ಜೋಯಿಸ ಬಂದು ಪೂಜೆ ಸುರು ಹಚ್ಕೊಂಡ. ಹೋಮಕ್ಕೆ ಹಸೀ ನೀಲಗಿರಿ ಕಟ್ಟಿಗೆ ಹಾಕಿದ್ರು ಅಂತ ಕಾಣ್ತದೆ. ಭಾರೀ ಹೊಗೆ. ಗೌಡಪ್ಪನ ಮನೆಗೆ ಬೆಂಕಿ ಬಿದ್ದಂಗೆ ಕಾಣೋದು. ಪೂಜಾರಿಗಳು ಹೊಗ್ಯಾಗೆ ಏನ್ಮಾಡಿದವೋ ದೇವ್ರಿಗೆ ಗೊತ್ತು. ಅವಾಗವಾಗ ಕೆನ್ನೆಗೆ ಹೊಡೆದಿದ್ದು ಸವಂಡ್ ಮಾತ್ರ ಕೇಳೋದು. ಗೌಡಪ್ಪನ ಕಣ್ಣು ಅನ್ನೋದು ಕೆಂಪು ಚೆಂಡಾದಂಗೆ ಆಗಿತ್ತು. ಮಗಾ ಜೋಯಿಸ ಹೆಲ್ಮೆಟ್ ಆಕ್ಕೊಂಡು ಪೂಜೆ ಮಾಡಿಸ್ತಾ ಇದ್ದ. ಹೋದ ವರ್ಸ ಅವನಿಗೆ ಬೈ ಪಾಸ್ ಸರ್ಜರಿ ಆಗೈತಂತೆ. ಹೊಗೆ ತಗೋಬ್ಯಾಡ್ರಿ ಅಂದ್ಯಾರಂತೆ ಡಾಕಟರು. ಬಂದ ಜೋಯಿಸರು, ಬೆಳಗ್ಗೆಯಿಂದ ಉಪವಾಸ ಇದೀವಿ ಅಂತಾ ಎರಡು ಗೊನೆ ಬಾಳೆಹಣ್ಣು, 2ಕೆಜಿ ಸೇಬು, ಒಂದು ನಾಕು ಚೊಂಬು ಹಾಲು ಕುಡಿದಿದ್ವು. ಊಟಕ್ಕೆ ಡೈರಿ ಹಾಲು ತರಿಸಿದ್ವಿ. ಸಾಕಾಗ್ಲಿಲ್ಲಾ ಅಂತಾ ಅದಕ್ಕೆ ಒಂದು ಕೊಡ ನೀರು ಬೇರೆ. ಮಗಂದು ಕಾಯಕ್ಕೆ ಇಟ್ರೆ ಉಕ್ಕತಾನೇ ಇರ್ಲಿಲ್ಲ. ದೊಡ್ಡ ಜೋಯಿಸಂಗೆ ಸುಗರ್ ಅಂತಾ ಅವಾಗವಾಗ ಬಿಸ್ಕತ್ತು, ಎಳ್ಳೀರು. ಕುಡಿದು ಗೌಡಪ್ಪನ ಮುಖಕ್ಕೆ ತೇಗೋನು, ಕಟ್ಟಿಸಿದ ಹಲ್ಲು ಒಂದ್ ಕಿತ ಹೊರ ಬಂದು ಒಳ ಹೋಗೋದು. ಏ ಥೂ ತೆಗೀರಿ ಅನ್ನೋನು ಗೌಡಪ್ಪ.
ಸರಿ, ಈಗ ಎಲ್ಲಾ ಎದ್ದು ನಿಂತುಕೊಂಡು ಹೋಮಕ್ಕೆ ತಟ್ಯಾಗಿರೋ ಹಣ್ಣು,ಕಾಯಿ,ಸೀರೆ ಹಾಕ್ರಿ ಅಂದ ಜೋಯಿಸ. ಹೇಳಿ ಸ್ವಲ್ಪ ಹೊತ್ತಿಗೇನೆ. ಠಣ್ ಅಂತು, ಅಮ್ಮಾ ಅಂದ್ರು ಜೋಯಿಸರು. ನಿಮ್ಮ ಅವ್ವ ಬಂದಿದಾರಾ, ನಿನ್ನ ಪಿಂಡ ನಾಯಿ ತಿನ್ನ. ನೋಡಿದ್ರೆ ಗೌಡಪ್ಪ ಮತ್ತು ಹೆಂಡರು ಹೊಗ್ಯಾಗೆ ಕಣ್ಣು ಕಾಣಿಸ್ಲಿಲ್ಲಾ ಅಂತಾ ಹಿತ್ತಾಳೆ ತಟ್ಟೇ ಸಮೇತ ಜೋಯಿಸಪ್ಪನ ತಲೆ ಮೇಲೆ ಸುಮಾರು 6ಅಡಿ ಎತ್ತರದಿಂದ ಎಸ್ದಿದಾವೆ. ಜೋಯಿಸನ ತಲೆ ಮ್ಯಾಕೆ ಸಣ್ಣ ತೂರ್ ಚೆಂಡ್ ಆದಂಗೆ ಆಗಿತ್ತು. ಜಕಣಾಚಾರಿ ಆದಂಗೆ ಆಗಿದ್ದ. ಸುಬ್ಬ ಅರಿಸಿನ ಅಂದ, ಏ ಇದಕ್ಕೆ ಒಂದು ಬಾಟ್ಲ್ ಜಂಡು ಬಾಮ್ ಹಾಕ್ರಲಾ. ಮೂಗ್ನಾಗೆ ಬಂದಿದ್ದು ಗೌಡಪ್ಪ ಅವನ ಹೆಂಡರು ಸೀರೆಗೆ ಒರೆಸೋನು. ಹೋಮ ಮುಗೀತು. ಎಲ್ಲಾ ಊಟಕ್ಕೆ ಏಳ್ರಿ. ಗೌಡಪ್ಪನ ಹೆಂಡರು ತಾನು ಉಟ್ಟಿದ್ದ ಸೀರೆನೂ ಹೋಮಕ್ಕೆ ಹಾಕಿದ್ಲು. ಯಾಕವ್ವಾ. ಏ ಥು. ನನ್ನ ಗಂಡ ಮೂಗ್ನಾಗಿಂದೆಲ್ಲಾ ವರಸಿದ್ದಾನೆ. ಏ ಥ. ಗಬ್ಬು ಮುಂಡೇವು ಅಂದಾ ಜೋಯಿಸ. ಊರ್ ಹೈಕ್ಳೆಲ್ಲಾ ಊಟಕ್ಕೆ ಕುಂತ್ವು. ಒಂದು ದೊಡ್ಡ ಪಾತ್ರೆ, ಸೌಟು ಹಿಡುಕೊಂಡು ಜೋಯಿಸ ಬಂದ. ತುಪ್ಪಾ ಅನ್ಕೊಂಡು ಎರಡು ಸೌಟು ಹಾಕ್ರಿ ಜೋಯಿಸರೆ. ಐಕ್ಳು ಕುಡಿಯೋವು ಥೂ ಅನ್ನೋವು. ಕೆಲವು ಅನ್ನಕ್ಕೂ ಹಾಕಿ ಅಂದ್ವು. ಲೇ ಕೋಮಲಾ ಏನಲಾ ಅದು ಕುಡಿದ್ ಮ್ಯಾಕೆ ಬಾಯಿ ಬಚ್ಚಲು ಆಗೈತೆ ಅಂದ ಸುಬ್ಬ, ಮಗನೇ ಅದು ಗೋ ಮೂತ್ರ ಕನ್ಲಾ. ಸಾಕಾಗ್ಲಿಲ್ಲ ಅಂತಾ ಬೀದಿಲ್ಲಿ ಇರೋ ಹಸುವಿನಿಂದು ತಂದು ಹಾಕಿದ್ವಿ. ಫುಲ್ ಪ್ಯೂರ್. ಎಲ್ಲಾವೂ ದನ ತಿಂದಂದಂಗೆ ತಿಂದು ಬೀಡಿ ಇಲ್ವಾ ಗೌಡ್ರೆ. ಲೇ ಇದೇನ್ ನಮ್ಮಪ್ಪನ ತಿಥಿನಾ, ಎಣ್ಣೆ, ಬೀಡಿ ಕೊಡಕ್ಕೆ. ಇದು ಒಂಥರಾ ಸಣ್ಣ ತಿಥಿ ಇದ್ದಂಗೆ ಐತೆ ಗೌಡ್ರೆ.
ಜೋಯಿಸಂಗೆ ಪೆಸೆಲ್ ಸೊಸೈಟಿ ಅಕ್ಕಿ ಅಡಿಗೆ. ಬ್ರಾಹ್ಮಣರು ಸಿಗಲಿಲ್ಲಾ ಅಂತಾ ಯಾರ್ಯೋಗೋ ಜನಿವಾರ ಹಾಕಿಸ್ಕಂಡ್ ಬಂದಿದ್ದ ಅಂತಾ ಕಾಣ್ತದೆ. ಊಟ ಆದ್ ಮ್ಯಾಕೆ ಜನಿವಾರ ಎಲ್ಲಾ ಕೊಟ್ಟ್ಯಾಗಿನ ಗೂಟದಲ್ಲಿ ಇದ್ವು. ಅದನ್ನೇ ನಮ್ಮ ಐಕ್ಳು ಗಟ್ಟಿ ಐತೆ ಅಂತಾ ಗುಂಡಿ ಹೊಲೆಯೋಕ್ಕೆ ಆಯ್ತದೆ ಅಂತಾ ಮಡಿಕ್ಕಂಡಿದ್ವು. ಜೋಯಿನ ದಕ್ಷಿಣೆ ಕೇಳಿ ಗೌಡಪ್ಪಂಗೆ ಅಂಗೇ ಸಣ್ಣ ಹಾಲ್ಟ್ ಅಟ್ಯಾಕ್ ಆಗಿತ್ತು. 50ಸಾವಿರ ಕೇಳಿದ್ದ. ಜೊತೆಗೆ ತಲೆಗೆ ಹೊಡ್ತಾ ಬಿದ್ದಿದ್ದಕ್ಕೆ ಎಕ್ಸಟ್ರಾ ಚಾರ್ಜ್ ಬೇರೆ. ಅಲ್ಲಲಾ ಕೋಮಲ್, ಈ ಜೋಯಿಸಂಗೆ 50ಸಾವಿರ ಕೊಡೋ ಬದ್ಲು. ಒಂದು ಹಾವಿನ ಸಂತತಿನೇ ಸಾಕುಬುದಿತ್ತು ಅಲ್ವೇನ್ಲಾ. ಈಗ ಹಾವು ಹೊಡದ್ರೆ ಗೌಡಪ್ಪ ಯಾರಿಗೂ ಹೇಳಕ್ಕಿಲ್ಲ. ಬದಲು ಆ ಹಾವು ಯಾವ ಜಾತಿಗೆ ಸೇರಿದ್ದು ಅಂತಾ ಪಸು ವೈದ್ಯರನ್ನ ಕೇಳ್ತಾನೆ. ಮುಂದೆ ಸಾಕಕ್ಕೆ.
Comments
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by mpneerkaje
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by manju787
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by mpneerkaje
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by shreekant.mishrikoti
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by shreekant.mishrikoti
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by mpneerkaje
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by gopinatha
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by komal kumar1231
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by modmani
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by gopaljsr
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by kavinagaraj
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by kpbolumbu
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by ಗಣೇಶ
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ
In reply to ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ by kpbolumbu
ಉ: ಗೌಡರ ಮನೆಯಲ್ಲಿ ಸರ್ಪ ದೋಷ ಹೋಮ