ಇದ್ದಾರೆ ನಮ್ಮೊಳಗೆ..!.

ಇದ್ದಾರೆ ನಮ್ಮೊಳಗೆ..!.

ಇದ್ದಾರೆ ನಮ್ಮೊಳಗೆ

ಸ್ವಚ್ಚಂದವಾಗಿ ಬದುಕುವ ನವಿಲುಗಳನ್ನು ಕೊಂದು

ಅದರಿಂದ ಬಣ್ಣದ ಗರಿಗಳ ಕದ್ದು

ಜೇಡಿಮಣ್ಣಿಗೆ ನವಿಲಿನಂತೆ ರೂಪವಿಟ್ಟು

ರಸ್ತೆಯಲ್ಲಿ ಮಾರಿಕೊಂಡು ಹೋಗುವಂತಾ ಜನ.

 

ಇದ್ದಾರೆ ನಮ್ಮೊಳಗೆ

ಸತ್ಯವನ್ನು ಸುಳ್ಳನ್ನಾಗಿಸಿ

ಸುಳ್ಳಿನಿಂದಲೆ ರಮನೆಯ ನಿರ್ಮಿಸಿ

ಗುಂಡು ತುಂಡಿನ ಮಜದಲ್ಲಿ

ಅನುದಿನವು ತೇಲಾಡುತ್ತಿರುವ ಪುಣ್ಯವಂತರಂತಾ ಜನ.

 

ಇದ್ದಾರೆ ನಮ್ಮೊಳಗೆ

ಒಂದು ಹೊತ್ತಿನ ಕೂಳಿಗಾಗಿ

ತಮ್ಮ ಮಾನವನ್ನೆ ಮಾರಿಕೊಳ್ಳುತ್ತ

ಸಿಕ್ಕ ಸಿಕ್ಕವರಿಗೆ ಸೆರಗನ್ನು ಚಾಚುವಂತ

ಬದುಕಲು ಸಹ ಬವಣೆ ಪಡುವಂತ ಅಭಾಗ್ಯಶೀಲ ಜನ.

 

ಇದ್ದಾರೆ ನಮ್ಮೊಳಗೇ

ನಾಯಿಯ ಬಾಲಕ್ಕೆ ದಬ್ಬೆಯನ್ನು ಕಟ್ಟಿ

ಹಗಲು ರಾತ್ರಿ ನೆಟ್ಟಗಾಗುತ್ತದೆಂದು ಕಾಯುತ್ತ

ದಿಂಬಿನಡಿಯಲ್ಲಿ ಮಚ್ಚುಗಳನ್ನಿಟ್ಟುಕೊಂಡು

ತನ್ನ ಧನವನ್ನು ಹಾವು ಮಣಿಯನ್ನು ಕಾದಂತೆ ಕಾಯುವವರು

ಸುಳ್ಳಲ್ಲಿ ಸತ್ಯವನ್ನು ಅರಸುವವರಿವರು.

 

ಇನ್ನೂ ಸಾಕಷ್ಟು ಮಂದಿ ಇರಬಹುದು,

ಆದರೆ ಬರಯುವುದಕ್ಕೆ ತಾನೆ ಸಮಯವೆಲ್ಲಿದೆ  ಹೇಳಿ ?.

 

                                                                         ವಸಂತ್

 

Rating
No votes yet

Comments