ಮಡದಿಯ ಆಸೆ

ಮಡದಿಯ ಆಸೆ

ರೀ, ಇವತ್ತು ಮೈಸೂರಿಗೆ ಹೋಗೋಣವೇ?

ಧಾರಾಕಾರ ಮಳೆಯಲ್ಲಿ ಪ್ರಯಾಣವೆ

ಕಾರಿನ ವೈಪರ್ ಸರಿಯಿಲ್ಲ, ಟೈರಿನಲ್ಲಿ ಗಾಳಿಯಿಲ್ಲ

ಇದೊಂದು ನೆಪ. ಸತ್ಯ ಚಿನ್ನ.

 

ಅಲ್ಲಿ ನೋಡುವುದಾದರೂ ಏನು

ಅದೇ ಅರಮನೆ, ಪ್ರಾಣಿಗಳಿಲ್ಲದ ಜೂ

ಅದಕ್ಕಾಗಿ ಅಲ್ಲಿಗೆ ಹೋಗಬೇಕೇ?

 

ಎನ್ನ ಮನಯೇ ಅರಮನೆ, 

ನೀನೇ ಎನಗೆ ವಿಚಿತ್ರ ಪ್ರಾಣಿ

ಮತ್ಯಾಕೆ ಚಿನ್ನ ಮೈಸೂರು.

 

ನೆಂಟರ ಮನೆಗೆ ಹೋಗೋಣವೇ?

ಚಿನ್ನ ಅವರಿಗೂ ಇಂದು ರಜೆ

ಅವರಲ್ಲೂ ಕೆಲವರು ರಜಾ

ಅವರಿಗ್ಯಾಕೆ ತೊಂದರೆ

ಇದು ಸರಿಯೇ.

 

ಚಲನಚಿತ್ರಕ್ಕೆ ಹೋಗೋಣವೇ?

ಅದೇ ಗೋಳು, ಅದೇ ಯುದ್ದ, ಅದೇ ಕಥೆ

ಮನೆಯಲ್ಲೇ ದಿನ ನಿತ್ಯ ವಿವಿಧ ಚಲನಚಿತ್ರ ಪ್ರದರ್ಶನ

ಮತ್ಯಾಕೆ ಮತ್ತೊಂದು ಚಿತ್ರ ಚಿನ್ನ.

 

ಮತ್ತೆಲ್ಲಿಗೆ ಹೋಗುವುದು?

ಎಲ್ಲಿಗೂ ಹೋಗದೆ

ಮನೆಯಲ್ಲೇ ತಯಾರಿಸಿದ ಭೂರಿ ಭೋಜನ ಸ್ವೀಕರಿಸಿ

ಟಿವಿ ಮುಂದೆ ಕೂತು

ಪ್ರಪಂಚವನ್ನೇ ನೋಡಬಹುದಲ್ಲವೆ ನನ್ನ ಚಿನ್ನ!

 

ಹೌದು, ತಮ್ಮನ್ನು ವರಿಸಿದ ದಿನದಿಂದ

ನೋಡಿದ್ದು ತವರು ಬಿಟ್ಟರೆ ಗಂಡನ ಮನೆ.

ಪ್ರಪಂಚವನ್ನು ನೋಡಿದ್ದೆಲ್ಲಾ ಟಿವಿಯಲ್ಲಿ

ಮನೆಯಲ್ಲಿ ಇರುವುದು ಡೈನೋಸಾರಸ್

ಮೂತಿ ತಿವಿದು ಎದ್ದಳು ಮಡದಿ.

ಇಂದು ಚಿತ್ರಾನ್ನವೇ ಗತಿ.!

 

 

 

 

 

 

 

Rating
No votes yet

Comments