ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು
ಒಂದು ದಿನ ಪೇಪರ್ನಾಗೆ "ಕನ್ನಡದ ಕಂಪೆನಿಯೊಂದರಲ್ಲಿ ಕೆಲಸಗಾರರು ಬೇಕಾಗಿದ್ದಾರೆ" ಅಂತಾ ಜಾಹೀರಾತು ಬಂದಿತ್ತು. ಅರ್ಜಿ ಹಾಕಿದ್ದೆ. ಇಂಟರ್ ವ್ಯೂ ಬಂದಿತ್ತು. ನೋಡೆ ಈಗ ಇರೋ ಕೆಲಸ ಬಿಟ್ಟು ಹೊಸಾ ಕಂಪೆನ್ಯಾಗೆ ಕೆಲಸಕ್ಕೆ ಸೇರ್ಕೋತಾ ಇದೀನಿ ಅಂದೆ. ಬೇಡ ಕಲಾ, ಇರೋ ಕೆಲಸ ಹಾಳ್ ಮಾಡ್ಕೊಬೇಡ ಅಂದ್ಲು. ಆಮ್ಯಾಕೆ ಗಂಜಿ ಕುಡಿಬೇಕಾಯ್ತದೆ. ಆಗಕ್ಕಿಲ್ಲ. ನಾಳೆ ಹಳ್ಳಿಗೆ ಹೋಗಿ ಸಿದ್ದೇಸನ ದರ್ಸನ ಮಾಡ್ಕಂಡ್ ಬರವಾ ಅಂದೆ. ಸರೀ ಹೋದ್ರೆ ಎದುರಿಗೆ ಗೌಡಪ್ಪ. ಏನಲಾ ಸಾನೆ ದಿನಾ ಆದ್ ಮ್ಯಾಕೆ ಬತ್ತಾ ಇದೀಯಾ. ಅದೇ ಗೌಡ್ರೆ ಹೊಸಾ ಕೆಲಸ ಸಿಕ್ಕೈತೆ ಅಂದೆ. ಕನ್ನಡದವರದ್ದು ಕಂಪೆನಿ. ಬೇಡ ಲಾ. ಭಾಸೆ, ವೇಸ, ದೋಸೆ ಅಂತಾ ಹೋದ್ರೆ ನನ್ನಂಗೆ ಚಿತ್ರಾನ್ನ ಆಯ್ತಿಯಾ ಅಂದ. ಅಟ್ಟೊತ್ತಿಗೆ ನನ್ನ ಹೆಂಡರು ಏನ್ ಹಂದಿ ಸತ್ತ ವಾಸನೆ ಬತ್ತಾ ಐತಲ್ಲಾ ಅಂದ್ಲು. ಏ ಅದು ನಮ್ಮ ಗೌಡಪ್ಪನ ಪೆಸೆಲ್ ಅಂದೆ.
ಸರಿ ದೇವಸ್ಥಾನಕ್ಕೆ ಹೋದ್ರೆ ಕರೆಂಟ್ ಇರ್ಲಿಲ್ಲ. ಒಳಗೆ ಹೋಗ್ತಿದ್ದಾಗೆನೇ ಗಂಟೆ ಸಬ್ದ ಸಾನೇ ಜೋರಾಗೆ ಬಂತು. ಹೊಸದಾಗಿ ಕಟ್ಟಿದ್ದ ಗಂಟೆಗೆ ನನ್ನ ಹೆಂಡರು ತಲೆ ಬಡಿಸಿಕೊಂಡಿದ್ಲು. ನಾನು ಹೇಳದೊರಳಗೆ ಪೂಜಾರಪ್ಪ ಅರಿಸಿನ ಬಳಿದಿದ್ದ.
ಸಿದ್ದೇಸಂದು ಬಲಗಡೆ ಪ್ರಸಾದ ಆತು ಅಂತಾ ಹೆಂಡರು ಖುಸಿ ಪಟ್ಟಳು. ಆದರೆ ಅದು ಇಲಿ ಬಂದು ತಾಕಿಸಿದ್ದಕ್ಕೆ ಹೂವು ಬಿದ್ದಿದ್ದು ಅಂತಾ ಆಮ್ಯಾಕೆ ಗೊತ್ತಾದದ್ದು. ಸರಿ ನಿಂಗನ ಚಾ ಅಂಗಡೀಲಿ. ಮಂಡಕ್ಕಿ ಚಾ ಕುಡಿದ್ವು, ಚಿಲ್ಲರೆ ಇಲ್ಲಾ ಅಂತಾ ಹೊಂಟ್ವಿ. ಏ ಥು ಅಂದಾ ನಿಂಗ.
ಇಸ್ಮಾಯಿಲ್ ಬಸ್ಗೆ ಬೆಂಗಳೂರಿಗೆ ಹೊಂಟ್ವಿ. ಕ್ಯಾ ಭಯ್ಯಾ ಸಿದ್ದೇಸನ್ನ ನೋಡಕ್ಕೆ ಬಂದಿದ್ರಿ. ಹೂ ಕಲಾ. ಆಸೀರ್ವಾದ ಮಾಡ್ದ ಸಿದ್ದೇಸ ಅಂದ. ಮುಂದು ನೋಡ್ಕಂಡು ಓಡ್ಸಲಾ. ನೀ ನಮ್ಮನ್ನ ಸಿದ್ದೇಸನ ಪಾದ ಸೇರ್ಸಿ ಬಿಟ್ಟಿಯಾ ಬಡ್ಡೆ ಐದ್ನೆ, ನನ್ನ ಹೆಂಡರಿಗೆ ಅಂದೆ. ಈ ಬಡ್ಡೆ ಐದ ಎಲ್ಲಿ ತಗೊಂಡು ಹೋಗಿ ಬಸ್ ಗುದ್ದುತಾನೆ ಅಂತಾ ಗೊತ್ತಿಲ್ಲ. ಯಾವುದಕ್ಕೂ ಹಾರಕ್ಕೆ ರೆಡಿಯಾಗಿರು ಅಂದೆ. ಅವಳು ಕಚ್ಚೆ ಸೀರೆ ಹಾಕಿ. ಒನಕೆ ಓಬವ್ವನ ತರಾ ರೆಡಿಯಾಗಿದ್ಲು. ಸದ್ಯ ಬಡ್ಡೆ ಐದ ಸರಿಯಾಗೇ ಮಾರ್ಕೆಟ್ಗೆ ಬಂದ.
ಸರಿ ಬೆಳಗ್ಗೆ ಇಂಟರ್ ವ್ಯೂಗೆ ಬಿಳಿ ಪ್ಯಾಂಟು, ಬಿಳಿ ಸಲ್ಟು, ಅಂಗೇ ಕನ್ನಡದ ಟವಲ್ ಹಾಕ್ಕೊಂಡು ಆಫೀಸಿಗೆ ಹೋದೆ. ಯಾರೋ ಕನ್ನಡ ಹೋರಾಟಗಾರರು ಬಂದಿದಾರೆ ಅಂತಾ ತಿಂಡಿ, ಚಾ ಎಲ್ಲಾ ಬಂತು. ಇಂಟರ್ ವ್ಯೂಗೆ ಬಂದಿದಾನೆ ಅಂತಾ ಗೊತ್ತಾದ ಮ್ಯಾಕೆ. ತಿಂಡಿ,ಚಾದ್ದು 20ರೂ ಇಸ್ಕಂಡಿದ್ರು. ನೋಡ್ರಿ. ಒಳಗೆ ನಿಮಗೆ ಕರೀತಿದಾರೆ ಅಂದ್ರು. ನಮಸ್ಕಾರ ಸಾ, ಕನ್ನಡಮ್ಮನಿಗೆ ಜೈ ಅಂದು ಕುಂತೆ. ಯೋ ಇದೇನ್ ರಕ್ಸಣಾ ವೇದಿಕೆ ಆಫೀಸ್ ಅಂದುಕೊಂಡ್ಯಾ ಅಂದ. ಪಕ್ಕದಾಗೆ ನೋಡಿದ್ರೆ ಸುಬ್ಬ. ನೀ ಎನ್ಲಾ ಇಲ್ಲಿ. ನಾನೂ ಪರೀಕ್ಸೆಗೆ ಬಂದಿದೀನಿ ಅಂದಾ. ಇಬ್ಬರನ್ನೂ ಕೂರಿಸಿದ್ರು. ಇಂಟರ್ ವ್ಯೂ ಸುರುವಾಯ್ತು. ದಿನಕ್ಕೆ ಎಷ್ಟು ಬಾರಿ ಮನೆ ಕಸ ಹೊಡೆಯುತ್ತೀರಾ. ಇದೆಲ್ಲಾ ಯಾಕಲಾ ಅಂದಾ ಸುಬ್ಬ. ಹೇಳಲಾ. ಒಂದು ಮೂರು ಸಾರಿ. ಡಸ್ಟ್ ಅಲರ್ಜಿ ಇಲ್ಲಾ ತಾನೆ. ಯಾಕೇಂದ್ರೆ ನಾವು ಎಕ್ಸಟ್ರಾ ಪೇಮೆಂಟ್ ಕೊಡಕ್ಕಿಲ್ಲಾ ಅಂದ್ರು. ಅದೆಲ್ಲಾ ಇಲ್ಲಾ ಬುಡಿ. ನಮ್ಮನೆ ಕೊಟ್ಟಿಗೆ ಸಗಣಿ ನಾನೇ ಬಾಚೋದು ಅಂದಾ ಸುಬ್ಬ. ಕೈ ತೊಳಿದಿನೇ ಊಟನೂ ಮಾತ್ತೀನಿ ಅಂದ. ಏ ಥೂ. ಸರಿ ನಿಮಗೆ ಅಂದ್ರು. ಸ್ವಲ್ಪ ಐತೆ. ಅವಾಗವಾಗ ಸೀನ್ ಬತ್ತದೆ. ಕಣ್ಣು ಕೆಂಪಗೆ, ಮೂಗು ದಪ್ಪ ಆಯ್ತದೆ ಅಂದೆ.
ಸರಿ 20ಕಪ್ ಕಾಫಿ ತರೋಬೇಕಾದ್ರೆ ಕೈ ನಡುಗುತ್ತಾ. ಪಿಂಗಾಣಿ ಗ್ಲಾಸ್ ಆದ್ರೆ ನಡಗ್ತದೆ. ಅದೇ ಪ್ಲಾಸ್ಟಿಕ್ ಗ್ಲಾಸ್ಗೆ ನಡಗಿಕಿಲ್ಲಾ. ಇದೆಲ್ಲಾ ಯಾಕಲಾ. ಇಲ್ಲಾ ಸಾ. ಸಬೀನಾ ಬಳಸಿದರೆ ಅಲರ್ಜಿ ಆಗ್ತದಾ. ವಿಮ್ ಆದ್ರೆ ಆಗಕ್ಕಿಲ್ಲಾ ಅಂದ. ನಿಮಗೆ ನನಗೆ ಲಿರಿಲ್ ಕೊಡಿ ಅಂದೆ. ಏನ್ ಸ್ನಾನಕ್ಕಾ. ಕಡ್ಡಿ ಪರಕೆಯಿಂದ ಏನಾದ್ರೂ ಅಲರ್ಜಿ ಇದೆಯಾ. ಅವಾಗವಾಗ ತುರಿಕೆ ಬತ್ತದೆ. ಆಮ್ಯಾಕೆ. ಏಣಿ ಹತ್ತಿದರೆ ಕಾಲು ನಡುಗುತ್ತಾ. ಇಳಿದ್ ಮ್ಯಾಕೆ ಅಂಗೇ ವೈಬ್ರೇಟ್ ಆಯ್ತದೆ ಅಂದ. ದಿನಾ ಸಾನ ಮಾತ್ತೀರಾ, ಹೂಂ ಸಾ. ಲೈಫ್ ಬಾಯ್ ಸೋಪು. ಎಲ್ಲಾ ಆತು ಸುಬ್ಬರವರೆ ನಾಳೆಯಿಂದ ನೀವು ಡ್ಯೂಟಿಗೆ ಬನ್ನಿ ಅಂತಾ ಕಾಕಿ ಪ್ಯಾಂಟು. ಕಾಕಿ ಸಲ್ಟು ಕೊಟ್ರು. ಕೋಮಲ್ ನಿಮಗೆ ಅಲರ್ಜಿ ಇರೋದ್ರಿಂದ ಮುಂದಿನ ಗ್ರಾನೈಟ್ ಆಫಿಸಿಗೆ ತಗೊಂತೀವಿ ಅಂದ್ರು. ಇಂಟರ್ ವ್ಯೂ ಮಾಡ್ದೋನು ಕಾರ್ಪೊರೇಸನ್ ಕಸಾ ಹೊಡೆಯೋರು ಸಂಘದ ಅಧ್ಯಕ್ಸನಂತೆ. ಅದಕ್ಕೆ ಡೀಟೇಲ್ ಆಗಿ ಪ್ರಸ್ನೆ ಕೇಳಿದ್ದ. ಅಂಗೇ ಈ ಕಂಪೆನಿಗೆ ಕ್ಲೀನಿಂಗ್ ಅಡ್ವೈಸರ್ ಅಂತೆ. ಏನ್ಲಾ ಇದು. ಅವರಿಗೆ ಪಿವನ್ ಬೇಕಾಗಿತ್ತಂತೆ ಕಲಾ ಅಂದೆ. ಫಾರಿನಾಗೆ ಕೆಲಸದಾಗೆ ಇರೋ ನಮ್ಮ ಹಳ್ಳೀವು ಇದನ್ನೇ ಕಲಾ ಮಾಡೋದು ಅಂದೆ. ಅದಕ್ಕೆ ಸುಬ್ಬ ಇಲ್ಲಿ ಟ್ರೇನಿಂಗ್ ತಗೊಂಡು ನಾನು ದುಬೈ ಹೋಯ್ತೀನ್ಲಾ ಅಂದ. ತಿಂಗಳಿಗೆ 2ಸಾವಿರ ಸಂಬಳ, ೂಟ,ತಿಂಡಿ ಫ್ರೀ. ಕಾಫಿ ಅವಾಗವಾಗ. 6ತಿಂಗಳಿಗೆ ಒಂದು ಸಾರಿ ಕಾಕಿ ಡ್ರೆಸ್ಸು. ಮನೆಗೆ ಬಂದ್ ಮ್ಯಾಕೆ ಎರಡು ದಪಾ ಸ್ನಾನ.
Comments
ಉ: ಸಂದಪದಲ್ಲಿ ಕೆಲಸ ಸಿಕ್ಕಿತು
In reply to ಉ: ಸಂದಪದಲ್ಲಿ ಕೆಲಸ ಸಿಕ್ಕಿತು by prasannasp
ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು
In reply to ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು by komal kumar1231
ಉ: ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು
ಉ: ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು
ಉ: ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು
In reply to ಉ: ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು by gopinatha
ಉ: ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು
ಉ: ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು
In reply to ಉ: ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು by kavinagaraj
ಉ: ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು
In reply to ಉ: ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು by suresh nadig
ಉ: ಸುಬ್ಬಂಗೆ ಹೊಸ ಕೆಲಸ ಸಿಕ್ಕಿತು