ಯಕ್ಷಯಾನ....ಯೋಗಿಗಾನ...

ಯಕ್ಷಯಾನ....ಯೋಗಿಗಾನ...

ಬರಹ

 "ಯೋಗಿ" ಅಲಿಯಾಸ್ ಲೂಸ್ ಮಾದ "ಯಕ್ಷ" ನಾಗಿ ಬಿಟ್ಟಿದ್ದಾನೆ. "ದುನಿಯಾ"ದಲ್ಲಿ ಲೂಸ್...ಲೂಸ್ ಥರವೇ ಆಡಿ ಗಮನ ಸೆಳೆದ . ಮುಂದಿನ ಬಹುತೇಕ ಚಿತ್ರಗಳು ಲೂಸ್ ಯೋಗಿಗೆ ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಹೆಸರು ತಂದಕೊಟ್ಟವು. ಆದ್ರೆ, ನಂತರ ಲೂಸ್ ಮಾದ ಬೋರ್ ಆದದ್ದು ಗೊತ್ತೇಯಿದೆ. ಈಗ ಹೊಸ ಅವತಾರ್ ದಲ್ಲಿ ಯೋಗಿ ಬರಲಿದ್ದಾನೆ. ತಂದೆ ಟಿ.ಪಿ.ಸಿದ್ಧರಾಜು ದುಡ್ಡು ಹಾಕಿರುವ ಚಿತ್ರಕ್ಕೆ ಈತನೆ ನಾಯಕ...ಈತೇನೆ ಯಕ್ಷ...


ಆದ್ರೆ, ರಮೇಶ್ ಭಾಗವತ್ ಅವರ ಕಥೆಯಲ್ಲಿ ಇನ್ನಷ್ಟು ಪ್ರಮುಖ ಪಾತ್ರಗಳಿವೆ. ಯೋಗರಾಜ್ ಪುಲಕೇಶಿ ರೋಲ್ ಗೆ ಮೊದಲೇ ಇವರೇ ಬೇಕು ಅಂದುಕೊಂಡಂತೇನೆ ಬಾಲಿವುಡ್ "ನಾನಾ ಪಾಟೇಕರ್" ಬಂದು ಪೋಲಿಸ್ ಅಧಿಕಾರಿ ಕೆಲಸ ಮಾಡಿ ಹೋಗಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಧ್ವನಿಯಾಗಿ ಜೀವತುಂಬಿದ್ದಾರೆ.



ಕೇವಲ ನಾನಾ ಪಾಟೇಕರ್ ಅಲ್ಲ. ಮುಂಬೈ ನಲ್ಲಿ ಮಿಂಚುತ್ತಿರುವ ಅತುಲ್ ಕುಲಕರ್ಣಿ ಬಂದಿದ್ದಾರೆ. ದಿನಗಳಲ್ಲಿ ನಟಿಸಿದ್ದು ಎಲ್ಲರಿಗೂ ಗೊತ್ತು. "ಯಕ್ಷ" ಚಿತ್ರದಲ್ಲಿ ಅತುಲ್ ಡಾನ್ ಪಾತ್ರದ ಮೂಲಕ ಮತ್ತೆ ಗಮನ ಸೆಳೆಯಲು ಸಜ್ಜಾಗಿದ್ದಾರೆ.



"ಯೋಗಿ" ಯಕ್ಷದಲ್ಲಿ ಹೊಸದನ್ನ ಟ್ರೈ ಮಾಡಿದ್ದಾನೆ. ಮೂವರು ಸಾಹಸ ನಿರ್ದೇಶಕರು ಹೇಳಿಕೊಟ್ಟ ಸಾಹಸವನ್ನ ಅಂಜು ಅಳುಕಿಲ್ಲದೇ ಮಾಡಿದ್ದಾನೆ. ಸ್ಕೂಬಾ ಡೈವಿಂಗ್ ನಂತಹ ಸಾಹಸಕ್ಕೂ ಕೈಹಾಕಿ ಯಶಸ್ವಿಯಾಗಿ ನಿರ್ವಹಿಸಿ ಮರಳಿದ್ದಾನೆ. ರಾಪ್ ಥರ ಹಾಡೊಂದರಲ್ಲಿ ಸಖತ್ ಡಾನ್ಸೂ ಮಾಡಿದ್ದಾನೆ. ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಿದ್ದ ಹಾಡು ಬೆಂಗಳೂರಲ್ಲಿ ಶೂಟ್ ಆಗಿದೆ. ಬ್ಯಾಂಕಾಕ್ ನಲ್ಲಿ ಒಂದು ಹಾಡು ಚಿತ್ರೀಕರಣವಾಗಿದೆ.



ಚಿತ್ರದ ಹಾಡುಗಳು ಲಂಡನ್ ನಲ್ಲಿ ಮಾಸ್ಟ್ರಿಂಗ್ ಆಗಿವೆ. ಇಂಗ್ಲೀಷ ಚಿತ್ರದ ಹಾಡೊಂದನ್ನ ನೋಡಿದಾಗ ಆಗುವ ಎಲ್ಲ ಫೀಲ್
"ಯಕ್ಷ" ಗೀತೆಯಲ್ಲಿರಲಿವೆಯಂತೆ. ಅನೂಪ್ ಸೀಳಿನ್ ನಂತಹ ಯುವ ಸಂಗೀತ ನಿದೇರ್ಶಕ ಇಂತಹದೊಂದು ಸಾಹಸವನ್ನ ಬರೊಬ್ಬರಿ ತಿಂಗಳವರೆಗೂ ಕುಳಿತು ಮಾಡಿದ್ದಾನೆ. ಮಾಸ್ಟರಿಂಗ್ ಆದ ಹಾಡುಗಳು ಈಗಾಗಲೇ ಎಫ್ ಎಂ ರೇಡಿಯೋದಲ್ಲಿ ಪ್ರಸಾರವಾಗ್ತಿವೆ.



ಯಕ್ಷನ ಚಿತ್ರದಲ್ಲಿ ಮ್ಯಾಜಿಕ್ ಇದೆ. ಅಘಾದ ಶಕ್ತಿ ಕೈಗೆ ಬಂದರೆ ಶ್ರೀಸಾಮಾನ್ಯನು ಅಡ್ಡದಾರಿ ಹಿಡಿಯಬಹುದೆಂಬ ಕಲ್ಪನೆಯ ಅನಾವರಣ ಇದರಲ್ಲಿದೆ ಅನಿಸುತ್ತದೆ. ಕಾರಣ ಸದ್ಯ ಲಭ್ಯವಿರುವ ಪ್ರಮೋಗಳು ಯಕ್ಷನ ಯಕ್ಷಗಾನ ತೆರೆದಿಟ್ಟಿವೆ. ಕೇವಲ ಸ್ಟೈಲಿಷ್ ಡ್ರೆಸ್ ಅಂಡ್ ಲುಕ್ ಅಲ್ಲದೇ, ಹುಲಿ ವೇಷದಲ್ಲೂ ಮಿಸ್ಟರ್ ಲೂಸು ಕಾಣಿಸಿಕೊಂಡಿದ್ದಾನೆ. ಹೆಗಲ ಮೇಲೆ ಹಾವನ್ನೂ ಹಾಕಿಕೊಂಡು ಮ್ಯಾಜಿಕ್ ಮಾಡಿದ್ದಾನೆ.



"ಯಕ್ಷ" ಚಿತ್ರ ತಂಡಕ್ಕೆ ರೋಚಕ ಅನುಭವ ನೀಡಿದೆ. ನಾನಾ ಜೊತೆಗಿನ ಅಭಿನಯ ಖುಷಿಕೊಟ್ಟಿದೆ. ಅತುಲ್ ಕುಲಕರ್ಣಿ ಯೋಗಿಗೆ ಡೆಡಿಕೇಷನ್ ಬಗ್ಗೆ ಪಾಠ ಮಾಡಿ ಹೋಗಿದ್ದಾರೆ. ಇದೇ ೩೦ ರಂದು ಚಿತ್ರ ತಂಡ "ಯಕ್ಷ" ಹಾಡನ್ನ ರಿಲೀಜ್ ಮಾಡಲಿದೆ. ಚಿತ್ರ ಬರುವ ಆಗಷ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ. ಅಲ್ಲಿವರೆಗೂ "ಯಕ್ಷ" ಹಾಡುಗಳು ಸದ್ದು ಮಾಡುವ ಹಾಗಿವೆ..



- ರೇವನ್ ಪಿ.ಜೇವೂರ್