ನೋಡಿದ್ರಾ ಅವನ ಗಟ್ಸ್?

ನೋಡಿದ್ರಾ ಅವನ ಗಟ್ಸ್?

ಒಂದು ಸಮುದ್ರದ ಮಧ್ಯದಲ್ಲಿ ದೊಡ್ಡ ಹಡಗೊಂದರಲ್ಲಿ ಮೂರು ಬೇರೆ ಬೇರೆ ಕಂಪೆನಿಗಳ ಪ್ರಾಜೆಕ್ಟ್ ಮ್ಯಾನೇಜರ್‌ಗಳು ಪ್ರಯಾಣಿಸುತ್ತಿರುತ್ತಾರೆ. ಆಗ ಅವರಲ್ಲಿ ಯಾರ ಕಂಪೆನಿಯ ಉದ್ಯೋಗಿಗಳಿಗೆ ಹೆಚ್ಚು ಗಟ್ಸ್ ಇದೆ ಎಂಬ ಚರ್ಚೆ ಪ್ರಾರಂಭವಾಗುತ್ತದೆ.

ಮೊದಲ ಕಂಪೆನಿಯ ಮ್ಯಾನೇಜರ್‍ ತನ್ನ ಟ್ರೈನಿಯನ್ನು ಕರೆದು ’ಸಮುದ್ರಕ್ಕೆ ಹಾರಿ ಚಲಿಸುತ್ತಿರುವ ಹಡಗಿನ ಸುತ್ತ ಒಂದು ಸುತ್ತು ಈಜಿ ಬಾ’ ಎಂದು ಹೇಳುತ್ತಾನೆ. ಆತ ಅದನ್ನು ಪೂರೈಸಿದಾಗ ಆ ಮ್ಯಾನೇಜರ್ ಉಳಿದವರಿಗೆ ಕೇಳುತ್ತಾನೆ‍, "ನೋಡಿದ್ರಾ ಅವನ ಗಟ್ಸ್?"

ನಂತರ ಎರಡನೇ ಕಂಪೆನಿಯ ಮ್ಯಾನೇಜರ್‍ ತನ್ನ ಟ್ರೈನಿಯನ್ನು ಕರೆದು ’ನೀನು ಎರಡು ಸುತ್ತು ಈಜಿ ಬಾ’ ಎನ್ನುತ್ತಾನೆ. ಆತ ಎರಡು ಸುತ್ತು ಈಜಿ ಬಂದಾಗ ಆ ಮ್ಯಾನೇಜರ್‍ ಉಳಿದವರಿಗೆ ಕೇಳುತ್ತಾನೆ, "ನೋಡಿದ್ರಾ ಅವನ ಗಟ್ಸ್?"

ಇದನ್ನೆಲ್ಲಾ ನೋಡುತ್ತಿದ್ದ ಮೂರನೇ ಕಂಪೆನಿಯ ಮ್ಯಾನೇಜರ್‍ ತನ್ನ ಟ್ರೈನಿಯನ್ನು ಕರೆದು ’ಇದೇ ರೀತಿಯ ಐದು ಸುತ್ತು ಈಜಿ ಬಾ’ ಎನ್ನುತ್ತಾನೆ.

ಆಗ ಆ ಟ್ರೈನಿ ತನ್ನ ಮ್ಯಾನೇಜರ್‌ಗೆ ಹೇಳುತ್ತಾನೆ, "ಏಯ್ ಅದೆಲ್ಲ ಆಗಲ್ಲ, ನಾನ್ಯಾಕೆ ಈಜಲಿ?"

ಮೂರನೇ ಕಂಪೆನಿಯ ಮ್ಯಾನೇಜರ್‍ ಉಳಿದವರಿಗೆ ಕೇಳುತ್ತಾನೆ, "ನೋಡಿದ್ರಾ ಅವನ ಗಟ್ಸ್?"


(ಆಂಗ್ಲ ನಗೆಹನಿಯೊಂದರ ಕನ್ನಡ ಅನುವಾದ)

Rating
No votes yet

Comments