ಒಂದು ಸಣ್ಣ ಸುಳ್ಳು ನೀನು
ಬರಹ
ಬ್ರಹ್ಮ ನನ್ನ ಎದೆಯ ಮೇಲೆ ಬರೆದು
ಮರೆತ ಒಂದು ಸಣ್ಣ ಸುಳ್ಳು ನೀನು
ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ
ಮರೆಯಾದ ಒಂದು ಸಣ್ಣ ಗುರುತು ನಾನು
ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ
ಒಂದು ಸಣ್ಣ ಎಳೆಯು ನನ್ನ ಪ್ರೀತಿ
ತಂಗಾಳಿಗೆ ನಿನ್ನ ಮುಂಗುರುಳು ಹಾರಿ ನನ್ನ
ಹೃದಯ ಸೇರಿದ ಒಂದು ಸಣ್ಣ ಗಾಯ ನಿನ್ನ ನೆನಪು
ಬೆಳದಿಂಗಳ ರಾತ್ರಿಯಲಿ ಮೌನದ
ಮರೆಯಲಿ ಸ್ತಬ್ದ ಅಲೆಗಳ ಮೇಲೆ
ನಿ ಒಮ್ಮೆ ಸುಮ್ಮನೆ ಕುಳಿತು
ಬಿಡಿಸಿದ ಕಾಮನಬಿಲ್ಲು ಈ ಕನಸು