ಗಿಡದಡಿ ಬಿದ್ದ ಪಕಳೆಗಳು.....!
ಹೂವಿನ ಗಿಡದಡಿ ಬಿದ್ದ...
ಪಕಳೆಗಳ ನೋಡಿ
ಮೆಲಕು ಹಾಕಿದಳು....ಅಜ್ಜಿ
ಕಳೆದು ಹೋದ ನೆನಪುಗಳ....!
ತನ್ನ ತವರು ಮನೆಯಿಂದ
ಮುರಿದು ತಂದಿದ್ದ ಈ .....ಟೊಂಗೆ
ಈ ಮನೆಯ ಅಂಗಳದಿ ನೆಟ್ಟು ಸಿಂಗರಿಸಲು !
ನೆಟ್ಟಿದ್ದು ಗಿಡವಾಗಿ..
ಮೈ ತುಂಬ ಮೊಗ್ಗು !
ನೋಡಿದವರಿಗೆಲ್ಲ ಹಿಗ್ಗು
ಅವಳ ಪತಿಗೆ ಈ ಗಿಡದ
ಹೂವೇ ಪೂಜೆಗೆ ಬೇಕು..
ಮಕ್ಕಳಿಗೆ ಮಾತ್ರ ಈಗ ಎರಡೂ ಬೇಡ !
ಕಳೆದವೆಷ್ಟೋ ವರುಷ..!
ಗಿಡವೀಗ ಹಳತಾಗಿದೆ..
ಟೊಂಗೆ ಎಷ್ಟೋ ಸಲ ಮುರಿಸಿಕೊಂಡಿದೆ !
ಈಗ ಒಂದೋ ಎರಡೋ
ಹೂವುಗಳರಳಿ ಪಕಳೆಗಳುರುಳುತ್ತವೆ
ಅಜ್ಜಿ...ತನ್ನ ಕೈ ಮೇಲೆ ಕೈ ಇಟ್ಟು
ಚರ್ಮದ ನಿರಿಗೆಗಳ ಮೇಲೆ ಬೆರಳನಿಟ್ಟು
ಆಸೆಗಣ್ಣಿನಿಂದೊಮ್ಮೆ ಗಿಡದೆಡೆಗೆ ನೋಟ
"ಮುದಿಜೀವದೆಡೆಗೊಂದು
ಇರಲಿ ಕರುಣೆಯ ಕಣ್ಣು...
ಸಾಕಿ ಸಲುಹಿದ ಋಣವ ತೀರಿಸುವ ದಾರಿ"
ಬಿದ್ದ ಪಕಳೆ ಮಾತಾಡಿದಂತೆ ಅಜ್ಜಿಗನಿಸಿ
ನಸು ನಕ್ಕಳು...!
ಚಿಗುರುವುದೆ ಮತ್ತೆ ಗಿಡ ...!
ಮಾಡಬೇಕಾದವರಾರು ಕಾಳಜಿ ?
Comments
ಉ: ಗಿಡದಡಿ ಬಿದ್ದ ಪಕಳೆಗಳು.....!
In reply to ಉ: ಗಿಡದಡಿ ಬಿದ್ದ ಪಕಳೆಗಳು.....! by gopaljsr
ಉ: ಗಿಡದಡಿ ಬಿದ್ದ ಪಕಳೆಗಳು.....!
ಉ: ಗಿಡದಡಿ ಬಿದ್ದ ಪಕಳೆಗಳು.....!
In reply to ಉ: ಗಿಡದಡಿ ಬಿದ್ದ ಪಕಳೆಗಳು.....! by kavinagaraj
ಉ: ಗಿಡದಡಿ ಬಿದ್ದ ಪಕಳೆಗಳು.....!
ಉ: ಗಿಡದಡಿ ಬಿದ್ದ ಪಕಳೆಗಳು.....!
In reply to ಉ: ಗಿಡದಡಿ ಬಿದ್ದ ಪಕಳೆಗಳು.....! by santhosh_87
ಉ: ಗಿಡದಡಿ ಬಿದ್ದ ಪಕಳೆಗಳು.....!