ಬೀದಿ ನಾಯಿ

ಬೀದಿ ನಾಯಿ

ಮಗನಿಗೆ ನಾಯಿ ಮರಿ ಸಾಕುವ ಹುಚ್ಚು

ತಂದ ಬೀದಿಯ ಕಪ್ಪು ನಾಯಿಮರಿಯೊಂದನ್ನ

ಅದಕ್ಕೆ ಇನ್ನಿಲ್ಲದ ಉಪಚಾರ

ಇನ್ನಿಲ್ಲದ ಆರೈಕೆ

ಸಸ್ಯಹಾರಿ ಮನೆಯಲ್ಲಿ ಕೋಳಿಯ ಮಾಂಸ

ಅಜ್ಜಿಯ ಹಿಡಿ ಶಾಪ

ಆದರೂ ಬಿಡನು ನಾಯಿಯ ವ್ಯಾಮೋಹ

 

ಶಾಲೆಯಿಂದ ಬಂದ ಮಗ

ತಂದೆ ತಾಯಿಯ ಬದಲಾಗಿ ನೋಡುವನು ನಾಯಿಯನ್ನು

ಅದು ಕುಯ್ಯಿ ಅಂದರೆ ಬಂದೆ ಎನ್ನುವ ಸನ್ಹೆ

ಕುಯ್ಯೋ ಅಂದರೆ ಅಪ್ಪಾ ಎನ್ನುತ್ತಾನೆ

ಮಗನಿಗೆ ಏನನ್ನೂ ಮಾಡಿಸದ ನನಗೆ

ನಾಯಿಯ ಕರ್ಮವನ್ನು ತೆಗೆಯುವ ದಿನ ನಿತ್ಯದ ಕಾಯಕ

 

ಪ್ರೀತಿಗೆ ಮಾತ್ರ ಮಗ

ಸ್ವಚ್ಛತೆಗೆ ಅಪ್ಪ

ಎಲ್ಲೋ ಕೆಟ್ಟ ವಾಸನೆ ಬಡಿದರೆ

ರೀ ನಾಯಿ ಏನು ಮಾಡಿದೆ ನೋಡಿ

ಮಡದಿಯ ಪ್ರೀತಿಯ ಮಾತಿಗೆ

ನಾಯಿ ಕಂಕುಳಲ್ಲಿ ಗೋಣಿ ಚೀಲ ಕೈಯಲ್ಲಿ

ಏನೂ ಇಲ್ವೆ, ಸರಿ ಬಿಡಿ.

 

ಕಂಬ ಕಂಡರೆ ಕಾಲೆತ್ತುವುದು ನಾಯಿಯ ಅಭ್ಯಾಸ

ಬಾಗಿಲೇ ನಾಯಿಗೆ ಕಂಬ

ಬೇಸತ್ತ ಮಡದಿ

ಬಿಡಬಾರದೆ ನಾಯಿಯನ್ನ

ಮಗ ಅಳುತ್ತಾನಲ್ಲಾ

ಇರವುದೊಂದನ್ನು ಸಾಕುವುದೇ ಕಷ್ಟ

ಈಗ ಮತ್ತೊಂದೇ

 

ಸ್ವಚ್ಛತೆಗೆ ಅಪ್ಪ

ಪ್ರೀತಿಗೆ ಮಗ

ಬೀದಿ ನಾಯಿಗೆ ಬಯಸದೆ ಬಂದ ಭಾಗ್ಯ

 

Rating
No votes yet

Comments