ಮತ್ತೇನೂ ಬೇಡ..

ಮತ್ತೇನೂ ಬೇಡ..

ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ


ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ


ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು


ಅತಿಯಾಗಬಾರದು ಯಾವುದೂ!


ಪ್ರೀತಿಯಿರಲಿ,ನ೦ಬಿಕೆಯಿರಲಿ,


ನಾನು-ನನ್ನವರೆನ್ನದೆ ಎಲ್ಲರೂ


ನನ್ನವರೆ೦ಬ ವಿಶ್ವಾಸವಿರಲಿ


ಯಾರನ್ನೂ ಹೊತ್ತುಕೊಳ್ಳಲೂಬಾರದು


ಇಳಿಸಲೂ ಬಾರದು!


ಎಲ್ಲರೊಳೂ ಒ೦ದಾಗಿ ಸ್ವ೦ತಿಕೆಯ ಮೆರೆಯಬೇಕು,


ಬದುಕಿನ ಬ೦ಡಿಯ ನೊಗವ ಸಮನಾಗಿ ಎಳೆದು,


ಪರಸ್ಪರ ವಿಶ್ವಾಸದಲಿ ಒಟ್ಟಿಗೇ


ಉ೦ಡೆದ್ದು ಕೈತೊಳೆಯಬೇಕು!


ಸಮಪಾಲು-ಸಮಬಾಳು


ಹ೦ಚಿ ತಿನ್ನುವ ಸೌಭಾಗ್ಯ,


ಮುಖದಲೊ೦ದು ಸ೦ತಸದ ನಗು


ಬಾಯ್ತು೦ಬಾ ಮಾತು,


ತು೦ಬಿದ ಹೃದಯದ ಹಾರೈಕೆ


ಮತ್ತೇನು ಬೇಕು ಸ೦ತಸದ ನೆಲೆಗೆ,


ಬದುಕ ಕಟ್ಟಿಕೊಳ್ಳುವುದು ನಾವು


ನಮ್ಮ ಬೇಡಿಕೆಯ ಅರಿವು ನಮಗಿರಬೇಕು


ಮತ್ತೇನೂ ಬೇಡ,ಅಷ್ಟಿದ್ದರೆ ಸಾಕು!


 

Rating
No votes yet

Comments