ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
ಗೌಡಪ್ಪ ನೋಡಲಾ ಕೋಮಲ್, ಕಮಲ ಪಕ್ಸದೋರು ನನಗೆ ಹೋದ ಬಾರಿ ಸಾನೇ ಮೋಸ ಮಾಡರ್ವೆ ಅದಕ್ಕೆ ಕಾಂಗ್ರೆಸ್ ಸೇರ್ಕಂಡು ಪಾದಯಾತ್ರೆ ಹೋಯ್ತಾ ಇದೀನಿ ನೀನು ಬಾರ್ಲಾ ಅಂದ. ಅಲ್ಲಾ ಗೌಡ್ರೆ ನಾವಿಬ್ಬರೆಯಾ, ಇಲ್ಲಾ ಕಲಾ ಸುಬ್ಬ,ನಿಂಗ.ಬಡ್ಡಿ ಬಸಮ್ಮ, ಕಟ್ಟಿಗೆ ಕಿಸ್ನ. ಅಂಗಡಿ ಭೈರಮ್ಮ, ಪಾತ್ರೆ ಪದ್ಮ, ಬಯಲನಾಟಕದ ಸುಬ್ಬಿ, ಇಸ್ಮಾಯಿಲ್, ಗುಜರಿ ರಹಮತ್ ಎಲ್ಲಾ ಬತ್ತಾರ್ವೆ. ಬೆಳಗ್ಗೆ ಹೋಯ್ತಾ ಇದೀವಿ ಆಟೆಯಾ ಅಂದ. ಸರಿ ಬೆಳಗ್ಗೆನೇ ಬಿಳಿ ಸಲ್ಟು.ಪಂಚೆ, ಬಿಳಿ ಟೋಪಿ ಸಿಗಲಿಲ್ಲಾ ಅಂತಾ ತಲೆ ಮೇಲೆ ಬಿಳೀ ಕರ್ಚೀಫ್ ಹಾಕ್ಕಂಡ್ ಬಸ್ಟಾಂಡ್ ಗೆ ಬಂದ್ವಿ. ಯಾವುದೋ ಸಾಬರ ಹೆಣ ಹೊಂಟಿತ್ತು. ನಾವೆಲ್ಲಾ ಬಿಳೀ ಕರ್ಚೀಫ್ ಹಾಕಿದ್ದು ನೋಡಿ. ಬರ್ರಲಾ ಅಂದ್ವು. ಬರಕ್ಕಿಲ್ಲಾ, ಆರೆ ಸಾಲೇ ಅಂತಿದ್ದಾಗೆನೇ ಎಲ್ಲರೂ ಮಸಾಣ ತಂಕ ಹೆಗಲು ಕೊಟ್ಟು ಆಮ್ಯಾಕೆ ಹೊಂಟ್ವಿ. ಹಂಗೇ ಮಧ್ಯಾಹ್ನದ್ದು ನಮಾಜು ಮಾಡಿದ್ವಿ.
ಎಲ್ಲರ ಓಟು ಬೇಕಲಾ ಅಂದಾ ಗೌಡಪ್ಪ.
ನೆಲಮಂಗಲದ ಹತ್ರ ಪಾದಯಾತ್ರೆ ಹೊಂಟಿತ್ತು. ಗೌಡಪ್ಪ ಹೋಗ್ತಿದ್ದಂಗೆನೇ ಸಿದ್ದುಗೆ ಅಡ್ಡಬಿದ್ದ. ಏನಲಾ ಗೌಡ ಅಂತೂ ಪಕ್ಸ ಚೇಂಜ್ ಮಾಡಿ ನಮ್ಮಕಡೆ ಬಂದೆ ಅನ್ನೂ. ಹೂ ಸಿದ್ದೇಸ. ಗೌಡನ ಹೆಂಡರು ನಮಸ್ಕಾರ ಮಾಡಿದ್ಲು. ನೀನು ತೇಜಸ್ವಿನಿ ಜೊತೆಗೆ ಇರಮ್ಮಾ ಅಂತು ಸಿದ್ದು. ನೀ ಯಾಕೆ ಬರಕ್ಕೆ ಹೋದೆ. ಗೌಡಪ್ಪ ನಮ್ಮೂರಿಂದ ಸಾನೇ ಜನನ್ನ ಕರ್ಕೊಂಡು ಬಂದಿದೀನಿ ಅಂತಾ ನಮ್ಮೆಲ್ಲರನ್ನೂ ತೋರಿಸಿದ. ಏನಲಾ ಎಲ್ಲಾ ಕ್ಸಯದ್ದ ರೋಗಿಗಳ ತರಾ ಇದಾರೆ ಅಂತು ಸಿದ್ದು. ಎಲ್ಲಾ ಸೊಸೈಟಿ ಅಕ್ಕಿ ತಿಂದು ಇಂಗಾರ್ವೆ ಅಂದ ಗೌಡಪ್ಪ. ಅಟ್ಟೊತ್ತಿಗೆ ದೇಶಪಾಂಡೆ ಗೌಡ ಬಬಬಬಬಬ, ಗೌಡಬಬಬಬಬ ಅಂದ್ರ. ಏನಲಾ ದೇಸಪಾಂಡೆ ಅಂದಿದ್ದು, ಆ ವಯ್ಯ ಮಾತಾಡದು ಅರ್ಥ ಆಗಕ್ಕಿಲ್ಲ ಬುಡಿ. ಅಟ್ಟೊತ್ತಿಗೆ ಕಾಂಗ್ರೆಸ್ ಬಸವಣ್ಣ ಎದುರಿಗೆ ಸಿಕ್ತು. ಸಿ.ಎಂ. ಇಬ್ರಾಹಿಂ. ಇಸ್ಮಾಯಿಲ್ ಉರ್ದುನಾಗೆ, ಕ್ಯಾ ಭಯ್ಯಾ ನಿಮ್ದೂಗೆ ಆರಾಮು. ಯಾವನಲಾ ಇವನು. ಇವನಾರವ, ಇವನಾರವ ಎಂದೆನ್ನದಿರಯ್ಯ ಇವ ನಮ್ಮವ, ಇವ ನಮ್ಮವ ಎಂದೆನ್ನಿರಯ್ಯ" ಅಂತು ಇಬ್ಬು. ಬಾಯನಾಗೆ ಇದ್ದ ಉಗಳೆಲ್ಲಾ ಇಸ್ಮಾಯಿಲ್ ಮುಖದ ಮೇಲೆ ಇತ್ತು. ತಲೆ ಟೋಪ್ಯಾಗೆ ಮುಖ ವರ್ಸೊಕೊಂಡ. ಗೌಡಪ್ಪ ಸಾನೇ ಕುಸಿಯಾಗಿ ನಾವು ಕಾಂಗ್ರೆಸ್ ಎನ್ನಿರಯ್ಯಾ ಅಂದ. ಕೊಡಲಾ ಬಾವುಟ ಅಂತು ಇಬ್ಬು. ದೊಡ್ಡ ಬೊಂಬಿಗೆ ಸುಮಾರು 10ಮೀ ಇರೋ ಬಾವುಟ ಕೊಟ್ರು. ಗೌಡಪ್ಪ ಭಾರ ತಡೀಲಾರದೆ ರಸ್ತೆಯೆಲ್ಲಾ ವಾಲಾಡೋನು. ಸಾನೆ ಗಾಳಿ ಬೇರೆ. ನೆಲಕ್ಕೆ ಮುಟ್ಟಿಸಿದರೆ ಅಟೆಯಾ ಅಂದಿದ್ದಕ್ಕೆ. ನಂದಿ ಕೋಲು ಇಡ್ಕಂಡು ಡಾನ್ಸ್ ಮಾಡ್ದಂಗೆ ಮಾಡೋನು.
ಅಟ್ಟೊತ್ತಿಗೆ ಬಂದ ಮೋಟಮ್ಮನ ನೋಡಿ. ಏನಲಾ ಇದು ಮಾರಿಮುತ್ತು ಇಲ್ಲಿ ಬಂದೈತೆ. ಏ ಅದು ವಿಧಾನ ಪರಿಸತ್ ನಾಯಕಿ ಅಲ್ವರಾ. ರಾತ್ರಿ ಹೊತ್ತು ಈ ಯಮ್ಮನ ನೋಡಿದ್ರೆ ಸಣ್ಣ ಹೈಕ್ಳು ಎದುರೋದು ಅಂತು ಗ್ಯಾರೆಂಟಿಯಾ ಅಂದಾ ಗೌಡಪ್ಪ. ಆ ಯಮ್ಮ ಅಂಗೇ ಸ್ಮೈಲ್. ಟಿವಿ ಬ್ಲಾಕ್ ಅಂಡ್ ವೈಟ್ ಆದ್ರೆ ಈ ಯಮ್ಮ ನೆಗಟೀವ್ ತರಾ ಕಾಣ್ತದೆ ಕಲಾ, ಏ ಥೂ. ಅಟ್ಟೊತ್ತಿಗೆ ಸಿದ್ರಾಂ ಮುಖನ ಡಿಕೇಶಿ, ದೇಸಪಾಂಡೆ ಮುಖಾನ ಇಬ್ರಾಹಿಂ ನೋತ್ತಾ ಇದ್ರು.ಹಂಗೇ ಮೂಗು ಮುಚ್ಕಳೋರು. ಊಟದಾಗೆ ಏನೋ ವತ್ಯಾಸ ಆಗಿ ಭೂಪಾಲ್ ಅನಿಲ ಸೋರಿಕೆ ತರಾ ಆಗೈತಲಾ ಅಂತ. ನೋಡಿದ್ರೆ ಗೌಡಪ್ಪನ ಪೆಸೆಲ್. ಏ ಥೂ ಈಕಡೆ ಬನ್ನಿ ಅಂದೆ.
ಸರಿ ಪಾದಯಾತ್ರೆ ಸುರುವಾಯ್ತು. ಗೌಡಪ್ಪ ಹವಾಯಿ ಚಪ್ಪಲಿ ಹಾಕಿದ್ದ, ಕಾಲಿಗೆ ಗಾಳಿ ಆಡಲಿ ಅಂತಾ. ಮಗಾ ಸುಬ್ಬಾ ಚಪ್ಪಲಿ ತುಳಿಯೋನು. ಎರಡು ಕಿತಾ ಮುಗ್ಗರಿಸಿದ್ದ. ಗೌಡಪ್ಪ ಒಂದು ಕಡ್ಡಿ ತಗೊಂಡು ಬಾರ್ ಒಳಗೆ ಹಾಕೋನು. ಚಪ್ಪಲಿನೋ ನಾಯಿ ನಾಲಗೆ ಆದಂಗೆ ಆಗಿತ್ತು. ಲೇ ಸುಬ್ಬ ಆ ಕಡೆ ಹೋಗಲಾ. ಸಿದ್ದು ತೇಜಸ್ವಿನಿ ಮೇಲೆ ಕೈ ಹಾಕ್ತಿದಂಗೆನೇ, ನಮ್ಮ ಗೌಡಪ್ಪ ಬಡ್ಡಿ ಬಸಮ್ಮನ ಮೇಲೆ ಕೈ ಒಗೆದ. ಮಗನೇ ಹೆಂಗೈತೆ ಅಂತು ಅದು. ಏ ನಾವುಬ್ರೂ ಒಂದೇ ಪಕ್ಸದೋರು. ಪಕ್ಸ ಒಂದೇ ಲಿಂಗ ಬೇರೆ ಎತ್ತಲಾ ಕೈ ಯಾ ಅಂದ್ಲು ಬಸಮ್ಮ.
ಮೂರು ಕಿ.ಮೀ ಓಗ್ತಿದ್ದಂಗೆನೇ ಗೌಡಪ್ಪ ಕುಂಟಕ್ಕೆ ಸುರು ಮಾಡ್ದ. ಯಾಕ್ರೀ. ಮಂಡಿ ಸವದೈತೆ ಕಲಾ. ಓಡಾಡಕ್ಕೆ ಆಯ್ತಾ ಇಲ್ಲ. ಅಂದ. ಸರಿ ರಸ್ತೆ ಪಕ್ಕದಾಗೆ ಮಕ್ಕೊಂಡ. ನೋಡ್ದೋರು, ಬಡ್ಡೆ ಹತ್ತಾವು ಕುಡಿದು ಬಂದು ಕಾಂಗ್ರೆಸ್ ಮರ್ವಾದೆ ತೆಗಿತಾವೆ ಅಂತಿದ್ದಾಗೆನೇ ಗೌಡಪ್ಪ ಎದ್ದು ಕುಂತ. ಕಂಸಾಲೆ ಡಾನ್ಸ್ ಬಾಳ ಜೋರಾಗಿ ನಡೀತಾ ಇತ್ತು. ಹೋಗಿ ನಮ್ಮ ಗೌಡಪ್ಪನೂ ಸೇರ್ಕೊಂಡು ಕತ್ತಿ ಹಿಡಕೊಂಡು ಸುರು ಮಾಡ್ದ ನೋಡಿ. ಒಂದು 4 ಜನಕ್ಕೆ ಮೂಗು ಬಾಯ್ನಾಗೆ ರಕ್ತ. ಕುಣಿಯೋ ಗಾಲಟ್ಯಾಗೆ ಯಾರ್ಯಾರಿಗೋ ಚುಚ್ಚಿದ್ನೋ ಬಡ್ಡೆ ಹೈದ. ನೋತ್ತೀವಿ. ಮೆರವಣಿಗೆ ಮುಂದು ಹೋಗ್ಬಿಟ್ಟೈತೆ. ಮಗ ನಿಂಗ ಅಲ್ಲೂ ಚಾ,ಬೀಡಿ ಅಂಗಡಿ ಮಡಗಿದ್ದ. ನೋಡ್ಲಾ ಕೋಮಲಾ ಇವನ ದರ್ಬೇಸಿ ಬುದ್ದಿ ಎಲ್ಲಿ ಹೋಯ್ತದೆ ಅಂದಾ ಗೌಡಪ್ಪ. ಮಧ್ಯಾಹ್ನ ಊಟ ಭಿಕ್ಸುಕರು ತರಾ ಆಲದ ಎಲ್ಯಾಗೆ, ಮುದ್ದೆ ಕ್ಯಾಚ್ ಹಿಡಿದು ತಿಂದ್ವಿ. ಕೈ ತೊಳೆಯಕ್ಕೂ ನೀರು ಇಲ್ಷೆ ಪಂಚೆಗೆ ವರಸಿದ್ದೇ ಆತು. ಬಿಳಿ ಪಂಚೆ ಲುಂಗಿ ಆದಂಗೆ ಆಗಿತ್ತು.
ಈಗ ಭಾಸಣ ಗಬ್ಬುನಾಥ ಗೌಡಪ್ಪರಿಂದ, ನೋಡಿ ಮಹಾಜನಗಳೆ, ಈ ಗಣಿ ಧೂಳು ಎಷ್ಟರ ಮಟ್ಟಿಗೆ ಐತೆ ಅಂದ್ರೆ, ಬಳ್ಳಾರಿಗೆ ಹೋದ್ರೆ ಕ್ಸಯಾ, ಅಸ್ತಮಾ ಬತ್ತದೆ. ಅಂಗೇ ಮೈ ಧೂಳು ಆಗೋದ್ರಿಂದ ದಿನಾ ಮೂರು ಕಿತಾ ಸ್ನಾನ ಮಾಡಬೇಕು ಅಂದ ಗೌಡಪ್ಪ. ಅದಕ್ಕೆ ನಮ್ಮೂರ್ನಾಗೆ ಔಸಧಿ ಕೊತ್ತೀವಿ. ಲೇ ಬೇರೆ ಮಾತಾಡಲೇ ಅಂತೂ ಸಿದ್ದು. ನಮ್ಮೂರಿನ ರೆಡ್ಡಿ. ಅವನೂ ಗಣಿಗಾರಿಕೆ ಮಾತ್ತಾ ಇದ್ದಾನೆ. ದಿನಾ ಎರಡು ಟ್ರಾಕ್ಟರ್ ಜೆಲ್ಲಿ ಕಲ್ಲು ಹೊಡಿತಾನೆ. ನಮ್ಮ ಸಿದ್ದೇಸ ಗುಡ್ಡ ಹಾಳಾಗೈತೆ ಅಂದಾ. ಲೇ ಯಾವ ರೆಡ್ಡಿಲಾ. ಅಣ್ಣಾ ನಮ್ಮೂರಿನ ಪೆದ್ದಣ್ಣ ರೆಡ್ಡಿ. ಏ ಥೂ. ಜನಾರ್ದನ ರೆಡ್ಡಿ ಬಗ್ಗೆ ಹೇಳಲಾ. ಈ ರೆಡ್ಡಿ ಸಹೋದರರು. ಸಾನೆ ಕೆಟ್ಟೋರು. ಇವರು ಭೂಮಿಯಲ್ಲಿ ಗುಂಡಿ ಮಾಡಿದ್ದಾರೆ. ಇದರಿಂದಾಗಿ ಮಳೆ ಬಂದಾಗ ನೀರು ನಿಂತು ರೈತರಿಗೆ ಸಾನೇ ಉಪಕಾರ ಆಯ್ತದೆ ಅಂದಾ. ಧಪ್ ಅಂತಾ ಸವಂಡ್ ಬಂತು. ಹಿಂದಿಂದ ಡಿಕೇಶಿ ಒಂದು ತಲೆ ಮೇಲೆ ಬಿಟ್ಟಿತ್ತು. ಗೌಡಪ್ಪ ಏನೋ ತಲೆ ಮ್ಯಾಕೆ ಬಿದ್ದಂಗೆ ಆಯ್ತಲ್ಲಾ ಅಂದ.ಡಿಕೇಶಿ ಎಫೆಕ್ಟ್
ಸರಿ ಪೋನ್ ಬಂತು. ನೋಡಿದ್ರೆ ಮುಕ್ಕಮಂತ್ರಿ ಯಡ್ಡಿದು. ಲೇ ಗೌಡ ನಮ್ಕಡೆ ಬಾರಲಾ ಮುಂದಿನ ಚುನಾವಣೆಗೆ ಎಂ.ಎಲ್.ಎ ಮಾತ್ತೀವಿ. ಅಂತಿದ್ದಾಗೆನೇ. ನೋಡ್ರಲಾ ಎಲ್ಲಾ ಊರಿಗೆ ಹೋಗುವಾ ಅಂದ. ಯಾಕ್ರೀ, ಇಲ್ಲಿ ಪಾದಯಾತ್ರೆ ಮಾಡಿ ಮಂಡಿ ಸವಸ್ಕಳೋ ಬದಲು ಎಂ.ಎಲ್.ಎ ಆಗುವ ನಡೆಯಲಾ. ಬಸಮ್ಮಂಗೂ ಒಂದು ಮಂತ್ರಿ ಮಾಡಿದ್ರೆ ಆತು. ಹೆಂಗೂ ನನ್ನ ಮೂರನೇ ಹೆಂಡರು ಸತ್ತಾವ್ಳೆ ಅನ್ಬೇಕಾ.
ಗೌಡನ ಬುದ್ದಿಗೆ ಬೆಂಕಿ ಹಾಕ ಅಂದಾ ಸುಬ್ಬ. ಇನ್ನೊಂದಪ ನಂಗೆ ಕರೆದರೆ ಆಟೆಯಾ ಅಂದ ಕಿಸ್ನ. ಯಾಕಲಾ ಎಲ್ಡು ಮನೆ ಕಟ್ಟಿಗೆ ಒಡೆಯೋದು ಬಿಟ್ಟು ಬಂದಿದೀನಿ ಕಲಾ ಅಂದ.
Comments
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
In reply to ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ by gopinatha
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
In reply to ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ by komal kumar1231
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
In reply to ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ by VeerendraC
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
In reply to ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ by manju787
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
In reply to ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ by Chikku123
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
In reply to ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ by prasannasp
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ
In reply to ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ by kavinagaraj
ಉ: ಪಾದಯಾತ್ರೆಯಲ್ಲಿ ಮಿ.ಗೌಡಪ್ಪ