ಸಂಜೆಯಾಗಸದಲ್ಲಿ ಒಂದು ಗ್ರಹ ಕೂಟ
ಸಂಜೆ ಹೊತ್ತಿನಲ್ಲಿ ನಿಮಗೆ ಪಶ್ಚಿಮದ ಆಕಾಶ ಕಾಣೋ ಹಾಗಿದ್ದರೆ, ಈ ದಿನಗಳಲ್ಲಿ ಸೂರ್ಯ ಮುಳುಗಿ ಕತ್ತಲಾಗ್ತಾ ಇದ್ದ ಹಾಗೆ ನೋಡೋದು ಮರೀಬೇಡಿ. ಒಂದಲ್ಲ, ಎರಡಲ್ಲ ಮೂರು ಗ್ರಹಗಳನ್ನ , ಅದೃಷ್ಟ ಇದ್ದರೆ ನಾಲ್ಕನೇದನ್ನೂ ನೋಡಬಹುದು.
ಸಿಕ್ಕಾಪಟ್ಟೆ ಬಿಳಿ ಬಣ್ಣದಲ್ಲಿ ಹೊಳೆಯೋದೇ ಬೆಳ್ಳಿ - ಅಂದರೆ ಶುಕ್ರ. ಅದಕ್ಕೆ ಸ್ವಲ್ಪ ಮೇಲೆ ಎಡಗಡೆ ಮೂಲೆಯಲ್ಲಿರೋದು ಮಂಗಳ. ಅದಕ್ಕೆ ಹತ್ತಿರವಾಗಿ ಸ್ವಲ್ಪ ಮೇಲಿರೋದು ಶನಿ.
ಶುಕ್ರನಿಗಿಂತ ಕೆಳಗೆ ಸ್ವಲ್ಪ ಬಲಕ್ಕೆ ಮೂಲೆಯಾಗಿ, ಸಿಂಹ ರಾಶಿಯ ಅತೀ ಪ್ರಕಾಶಮಾನವಾದ ತಾರೆ ಮಖಾ ನಕ್ಷತ್ರದ ಪಕ್ಕದಲ್ಲೇ ಬುಧನಿದ್ದಾನೆ. ಮುಳುಗಿದ ಸೂರ್ಯನಿಗೆ ಬಹಳ ಹತ್ತಿರದಲ್ಲಿರುವುದರಿಂದ, ಸಂಜೆ ಬೆಳಕಿನಲ್ಲಿ ಕಾಣುವುದು ಕಷ್ಟವೇ ಆಗಬಹುದು. ಒಂದು ವೇಳೆ ನಿಮಗೆ ಕಂಡರೆ, ನಾಲ್ಕು ಗ್ರಹಗಳನ್ನು ಒಟ್ಟಿಗೆ ಆಕಾಶದಲ್ಲಿ ನೋಡಿದ ಭಾಗ್ಯ ನಿಮ್ಮದಾಗುವುದು!
-ಹಂಸಾನಂದಿ
ಚಿತ್ರ ಕೃಪೆ: ಸ್ಟೆಲ್ಲೇರಿಯಂ ಬಳಸಿ ನಾನೇ ಹಿಡಿದ ತೆರೆಚಿತ್ರ. ಚಿತ್ರದ ಮೇಲೆ ಚಿಟಕಿದರೆ ದೊಡ್ಡದಾಗಿಸಿ ನೋಡಬಹುದು.
Rating
Comments
ಉ: ಸಂಜೆಯಾಗಸದಲ್ಲಿ ಒಂದು ಗ್ರಹ ಕೂಟ
ಉ: ಸಂಜೆಯಾಗಸದಲ್ಲಿ ಒಂದು ಗ್ರಹ ಕೂಟ
In reply to ಉ: ಸಂಜೆಯಾಗಸದಲ್ಲಿ ಒಂದು ಗ್ರಹ ಕೂಟ by santhosh_87
ಉ: ಸಂಜೆಯಾಗಸದಲ್ಲಿ ಒಂದು ಗ್ರಹ ಕೂಟ
ಉ: ಸಂಜೆಯಾಗಸದಲ್ಲಿ ಒಂದು ಗ್ರಹ ಕೂಟ
ಉ: ಸಂಜೆಯಾಗಸದಲ್ಲಿ ಒಂದು ಗ್ರಹ ಕೂಟ