ಓಡಿ ಬಂದು ಅಂಪೈರನ್ನು ದಾಟಿ

ಓಡಿ ಬಂದು ಅಂಪೈರನ್ನು ದಾಟಿ

ಈ ಬಾರಿ ಗಣಪತಿ ಹಬ್ಬಕ್ಕೆ ನಮ್ಮ ಹಳ್ಳಿಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಇಡಲಾಗಿದೆ. ಆಸಕ್ತರು "ಗಬ್ಬುನಾಥ ಗೌಡಪ್ಪ, ಸಂತೇ ಬೀದಿ. ಇಲ್ಲಿ ನೊಂದಾಯಿಸಬಹುದಾಗಿದೆ ಅಂತಾ ಎಲ್ಲಾ ಸುತ್ತಮುತ್ತಲಿನ ಹಳ್ಳಿಗೆಲ್ಲಾ ಸಾರಿಸಿದ್ವಿ. ಆದ್ರೆ ನಮ್ಮ ಹಳ್ಯಾಗೆ ಟೀಂ ಇಲ್ಲ. ಅಂದು ನಮ್ಮ ಹಳ್ಳಿಯ ಪೇಮಸ್ ಗೌಡಪ್ಪ ಅಲಿಯಾಸ್ ಹಳಸೋದು ಫಲಾವು ವಾಸ್ನೆ ಗೌಡಪ್ಪನ ಕ್ಯಾಪ್ಟನ್ ಷಿಪ್ ನಲ್ಲಿ ಒಂದು ಟೀಮ್ ಮಾಡಿದ್ವಿ. ಗೊತ್ತಲ್ಲಾ ನಮ್ಮ ಟೀಮ್. ಸಿರ್ ಪಕಡು ರಾಜ, ತಂತಿ ಪಕಡು ಸೀತು, ಚಾ ಅಂಗಡಿ ನಿಂಗ, ಸನ್ಯಾಸಿ ಸುಬ್ಬ, ಬಸಮ್ಮನ ಮಗ ಮೈಲಾರಿ,ಕಿಸ್ನ ಅಂತೂ ಒಂದು ಟೀಮ್ ರೆಡಿ ಆತು. ಪ್ರಾಕ್ಟೀಸ್ ಕೊಡಕ್ಕೆ ಅಂತಾ ರಿಕಿ ಪಾಂಟಿಂಗ್ ಕರಿಸಿದ್ವಿ. ನಮ್ಮ ಹೆಣ್ಣು ಐಕ್ಳು, ಏನೇ ತೊನ್ನು ಬಂದೋರು ತರಾ ಇದಾನೆ ಅನ್ನೋವು. ಹೆಂಗಿದ್ರೂ ಅವನಗೂ ಏನು ಕ್ಯಾಮೆ ಇಲ್ಲಾ. ಇಲ್ಲಿ ಬಂದ್ರೆ ಸ್ವಲ್ಪ ಕಾಸಾದ್ರೂ ಆಯ್ತದೆ ಅಂತ.

ಸರಿ ಗೌಡಪ್ಪನ ಅಡಿಕೆ ತೋಟದ ಪಕ್ಕದಾಗೆ ಇರೋ ಜಾಗದಾಗೆ ಪಿಚ್ ರೆಡಿ ಮಾಡಿದ್ವಿ. ಬಾಯ್ಸ್ ಮೊದಲನೆ ದಿನಾನೆ ಲೆದರ್ ಬಾಲ್  ಅಂದ್ರೆ ದೇಹದ ಅಂಗಾಂಗಳು ಊನವಾಗುತ್ತದೆ. ಎಲ್ಲಾ ಸ್ಕ್ರಾಪ್. ಊಟಕ್ಕೆ, ತೊಳಕಳಕ್ಕೆ ಇರಲ್ಲ. ಏನು. ಹ್ಯಾಂಡ್. ಹಾಗಾಗಿ ಮೊದಲು ಟೆನ್ನಿಸ್ ಬಾಲಲ್ಲಿ ಆಡೋಣ. ಆಯ್ತು ಸಾ. ಏ ಥೂ. ಸರಿ ಗೌಡಪ್ಪನ ಬೋಲಿಂಗ್, ಸೀತು ಬ್ಯಾಟಿಂಗ್. ಹಲ್ಲಿಲ್ಲ. ಡೇವಿಡ್ ಬೂನ್ ತರಾ ಕಾಣೋನು. ಬಿಸಿಲಿಗೆ ಮುಖ ಹಾಳಾಗಬಾರದು ಅಂತಾ ಸಿಮೆಂಡ್ಸ್ ಹಚ್ಕಂಡಂಗೆ ಅರಿಸಿನ ಹಚ್ಕಂಡಿದ್ದ. ಲೇ ಗಡ್ಡ ಮೀಸೆ ಬರಲ್ಲ ಕಣಲೇ ಇವನಿಗೆ ಅನ್ನೋವು ಎಲ್ರೂನೆ. ಗೌಡ ಬಂದು ಬೋಲಿಂಗ್ ಮಾಡ್ತಿದ್ದಾಗೆನೇ ಅಂಪೈರ್ ದಪ್ ಅಂತಾ ಬಿದ್ದು ಹೋಗೋನು.  ಯಾಕಲಾ ಅಂಪೈರ್  ಬೀಳ್ತಾನೆ ಸುಬ್ಬ ಅಂದ. ನೋಡಿದ್ರೆ ಗೌಡಪ್ಪ ಬೌಲಿಂಗ್ ಮಾಡೋ ಬೇಕಾದ್ರೆ ಅಡ್ಡ ಕೈ ಮಾಡೋನು. ಸರಿ ಫೀಲ್ಡರ್ಸ್ ಎಲ್ರಲಾ ಅಂದ್ರೆ. ಬಡ್ಡೆ ಹತ್ತಾವು ಗೌಡನ ತೋಟದಾಗೆ ನಿಂತಿದ್ವು. ಯಾಕ್ರಲಾ. ಅಣ್ಣಾ ಬಾಲ್ ಇಲ್ಲೇ ಬತ್ತದೆ ಅಂತಾ. ಏ ಥೂ ಹತ್ತಿರ ಬರ್ರಲಾ. ನೋಡಿ ಬಾಯ್ಸ್ ಹೊಟ್ಟೆ ತುಂಬಾ ಅಡವಾಗಿ ಹಳಸಿದ್ದು ಪಳಸಿದ್ದು ತಿಂದು ಬಂದ್ರೆ ಆಡಕ್ಕೆ ಆಗಲ್ಲಾ. ನಿದ್ದೆ ಬತ್ತದೆ. ಕಡಿಮೆ ತಿಂದು ಬರ್ರಿ ಅಂದ ಪಾಂಟಿಂಗ್. ನಂಗೆ ಸುಗರ್ ಐತೆ ಅಂದ ಗೌಡಪ್ಪ. ಲೇ ಗೌಡ ನಿನಗೆ ಯಾರು ಹೇಳಿದ್ದು.

 ಅದಕ್ಕೆ ಕನ್ರಲಾ ನಮ್ಮಂಗಡೀದು ಬೈಟು ಚಾ ಸಾಕು ಅಂದಿದ್ದು ಅಂದಾ ನಿಂಗ. ಏ ಥು.

ಸರಿ ಲೆದರ್ ಬಾಲ್. ಕೆಂಪಗೆ ಕಲ್ಲಿದ್ದಂಗೆ ಇತ್ತು. ನೋಡಲೇ ಗೌಡ ಈ ಬಾಲನ್ನು ನಿನ್ನ ಚೆಡ್ಡಿಗೆ ಉಜ್ಜಿ ಹಾಕಬೇಕು. ಏನ್ಲಾ ಇವನು ಏಕವಚನದಾಗೆ ಮಾತಾಸ್ತಾನೆ. ಏ ಕನ್ನಡ ಬರಕ್ಕಿಲ್ಲಾ ಬುಡಿ ಅಂದೆ. ಲೇ ಗೌಡ ನೀನು ಹತ್ತಿರ ಬಂದ್ರೆ ಒಂದು ವಾರದ ಹಿಂದೆ ಮಾಡಿದ ಬರ್ಗರ್ ವಾಸ್ನೆ ಬತ್ತದೆ ಯಾಕೆ ಅಂದಾ ಪಾಂಟಿಂಗ್. ಅದು ನಮ್ಮೂರು ಪೆಸೆಲ್ ಬುಡಿ. ಸರಿ ಗೌಡಪ್ಪ ಹಗ್ಗ ಹೊಸೆಯೋರು ತರಾ ಉಜ್ಜಿದ್ದೇ ಉಜ್ಜಿದ್ದು. ಕ್ಯಾಕರಸಿ ಉಗಳೋದು ಉಜ್ಜೋದು. ಬಿಳಿ ಚೆಡ್ಡಿ ಕೆಂಪಗೆ ಆಗಿತ್ತು. ಬಾಲಿಂದು ಒಂದು ಕಡೆ ಬಣ್ಣಾನೇ ಹೋಗಿತ್ತು. ಓಡಿ ಬಂದು ಅಂಪೈರ್ನ್ನು ದಾಟಿ ಅಂತಿದ್ದಾಗೇನೇ ಅಂಪೈರ್  ಅಮ್ಮಾ ಅಂದ. ಗೌಡ ಬಾಲ್ ತಂದು ಅಂಪೈರ್ ತಲೆಗೆ ಮಡಗಿದ್ದ. ಸೀತು ಮುಖದ ಅರಿಸಿನಾನೇ ಅವನಿಗೆ ಹಚ್ಚಿದ್ವಿ. ಸುಬ್ಬ ಬ್ಯಾಟಿಂಗ್. ಬಾಲು ಎಲ್ಲೆಲ್ಲೋ ಹೋಗೋದು. ಏ ಗೌಡ ಪಿಚ್ ಸರಿ ಇಲ್ವಲ್ಲೇ ಅಂದ ಪಾಂಟಿಂಗ್. ಲೇ ಇವನು ಊರಿಗೆ ಹೋಗೋದ್ರೋಳಗೆ ಮಗಾ ತಿಂತಾನಲೇ ಅಂದ ಗೌಡಪ್ಪ. ಒಂದು ಕಿತ ಬಾಲ್ ಸುಬ್ಬಂಗೆ ಬೀಳಬಾರದ ಜಾಗಕ್ಕೆ ಬಿತ್ತು. ಲೇ ಕೋಮಲಾ ನಾನು ಮದುವೆನೇ ಆಗೋಂಗೆ ಇಲ್ವಲೇ ಅಂದ. ಅದಕ್ಕೆ ಕರಟ ಇಟ್ಕೋ ಅಂತಾ ಹೇಳಿದ್ದು. ಸರಿ ನೆಕ್ಸ್ಟ್ ಬೌಲಿಂಗ್ ಮಿ.ಚಾ ಅಂಗಡಿ ಮಂಗ ಅಲ್ಲಾ ನಿಂಗ. ನಾನು ಬಾಲ್ ಮುಟ್ಟಕ್ಕಿಲ್ಲಾ ಅಂದ ನಿಂಗ. ಯಾಕಲಾ ಗೌಡ ಮಗಾ ಎಂಜಲು ಹಾಕಿದಾನೆ. ಸರಿ ಬಾಲನ್ನು ತೊಳೆದು ಕೊಟ್ಟಿದ್ದು ಆತು. ಬ್ರಸ್ ಹಾಕಿ ಯಾವ ರೀತಿ ನಿಂಗ ತೊಳೆದಿದ್ದ ಅಂದರೆ ಬಾಲಿನ ಹಗ್ಗ ಹೊರಗೆ ಇತ್ತು.

ಮ್ಯಾಚ್ ಸುರುವಾತು. ಕಾಮೆಂಟ್ರಿ. ಕಿಸ್ನ. ಈಗ ವಾಸನೆಯಲ್ಲೇ ಪ್ರಸಿದ್ದರಾದ ಗೌಡರು ಕೆರೆತಾವದಿಂದ ಓಡಿ ಬಂದು ಅಂಪೈರನ್ನು ದಾಟಿ ಬಾಲು ಹಾಕುತ್ತಿದ್ದಾರೆ. ಹಾಕೇ ಬಿಟ್ಟರು. ಬ್ಯಾಟಿಂಗ್ ಮಾಡುತ್ತಿರುವ ಪಟೇಲರು. ಗಾರ್ಡ್ ಹಾಕಿದಂಗೆ ಕಾಣುವುದಿಲ್ಲ. ಹಾಗಾಗಿ ಬ್ಯಾಟ್  ಅಡ್ಡ ಹಿಡಿಯುತ್ತಿರುವಂತೆ ಕಾಣುತ್ತಿದೆ. ಅಂತೂ ಬಾಲು ಬಂತು. ಗೌಡರು ಜೋರಾಗೆ ಎಸೆಯದ ಕಾರಣ ಬಾಲ್ ಅರ್ಧ ಪಿಚ್ ನಲ್ಲೇ ಉಳಿದಿದೆ. ಅಲ್ಲಿಗೆ ಹೋಗಿ ಪಟೇಲಪ್ಪ ಹೊಡಿಬೇಕಾಗಿ ವಿನಂತಿ. ಪಟೇಲ ಪಂಚೆ ಎತ್ಕಂಡು ಬಂದು ಅಲ್ಲೇ ಹೊಡೆದು ಮತ್ತೆ ಸ್ಕ್ರೀಸ್ ಹೋಗಿ ನಿಂತ. ಈಗ ಪ್ರಸಿದ್ದ ಬೌಲರ್ ಸುಬ್ಬ ಬೌಲಿಂಗ್. ಹೇಳಿ ಅರ್ಧ ಗಂಟೆಯಾದರೂ ಸುಬ್ಬ ಕಾಣಲೇ ಇಲ್ಲ. ಮಗಾ ಫಾಸ್ಟ್ ಬೌಲಿಂಗ್ ಮಾತ್ತೀನಿ ಅಂತಾ ಮ್ಯಾಚ್ ಸುರುವಾಗೋ ಮುಂಚೆನೇ ಒಂದು ಕಿ.ಮೀ ದೂರು ಇದ್ದ. ಇದೀಗ ಸುಬ್ಬ ಬರುತ್ತಿದ್ದಾರೆ. ಹೇಳಿ ಹತ್ತು ನಿಮಿಷ ಆದ್ ಮ್ಯಾಕೆ ಬಂದು ಬಾಲ್ ಹಾಕಿದ್ದ. ಲೇ ಇವನದೊಂದು ಓವರ್ ಗೆ ಒಂದು ಗಂಟೆ ಬೇಕಾಯ್ತದೆ ಅಂದಾ ನಿಂಗ. ವಿಡಿಯೋ ಮಡಗಿದ್ವಿ. ಒಂದು ಸಿಡಿ ಫುಲ್ ಸುಬ್ಬ ಓಡಿಬರೋದೆ ಇತ್ತು. ಇವನು ಬರೋ ತನಕ ಎಲ್ಲಾ ಬೀಡಿ ಸೇದೋವು. ನೀರು ಕುಡಿದು ಮತ್ತೆ ಹೋಗೋನು ಸುಬ್ಬ, ನಿಂಗ ಹಿಂದೆ ಬುಟ್ಟಿ ಮಡಗಿದ್ದ. ಯಾಕಲಾ. ಸುಬ್ಬ ಬರೋದು ಲೇಟ್ ಆಯ್ತದೆ. ಆ ಸಮಯದಾಗೆ ವ್ಯಾಪಾರ ಮಾಡುವಾ ಅಂತಾ, ಹಂಗೇ ಕ್ಯಾಚ್ ಹಿಡಿಯಕ್ಕೆ ಅಂದಾ. ಏ ಥೂ ಅಂದಾ ಗೌಡಪ್ಪ. ಸರಿ ಪಟೇಲನ ಕಡೆಯವರು 100ರನ್ನು ಹೊಡೆದ್ರು.

ಲೇ ಗೌಡ ನೀನು 101ರನ್ನು ಹೊಡೆಯಬೇಕಲೇ ಅಂದ ಪಾಂಟಿಂಗ್. ಲೇ ಅವನಿಗೆ ಸುಮ್ಕಿರಕ್ಕೆ ಹೇಳಲೇ. ಸರಿ ಗೌಡಪ್ಪನ ಬ್ಯಾಟಿಂಗ್. ವಿಕೆಟ್ ಕಾಣ್ತಾನೇ ಇರ್ಲಿಲ್ಲ. ಅಂತಾ ದೊಡ್ಡ ಚೆಡ್ಡಿ ಹಾಕಿದ್ದ ಮಗ. 50ರನ್ನು ಗೌಡಪ್ಪ ಒಬ್ಬನೇ ಹೊಡೆದಿದ್ದ. ಹೆಂಗೆ ಗೌಡ್ರೆ. ಏ ನಮ್ಮನಾಗೆ ಜಗಳವಾದಾಗ, ನನ್ನ ಹೆಂಡರು ಪಾತ್ರೆ ಎಸೆದಾಗ ಹಿಂಗೆ ಹೊಡೆದು ಸಾನೆ ಅಭ್ಯಾಸ ಆಗೈತೆ ಕಲಾ. ಬಾಲು ಏನಾದ್ರೂ ಮಿಸ್ ಆದ್ರೆ, ಗೌಡಪ್ಪ ಕೀಪರ್ ಕೈಗೆ ಬ್ಯಾಟ್ನಾಗೆ ಹೊಡೆಯೋನು. ನಮ್ದೂ ಬಾಲು. ಯಾಕಲಾ ಮುಟ್ತೀಯಾ ಅಂತ. ಅಂಪೈರ್ ಹೊಡೆತ ತಿಂದು ತಿಂದು ತಲೆ ಊದ್ಕಂಡಿತ್ತು. ಅಂತೂ ಗೆದ್ವಿ. ಪಾಂಟಿಂಗ್ನ ಎಲ್ರೂ ತಬ್ಗೊಂಡಿದ್ದೇಯಾ. ಲೇ ಗೌಡ ನಾನು ಬಂದಿದ್ದಕ್ಕೆ ನೀನು ಗೆದ್ದಿದ್ದು ಕಣಲೇ ಅಂದ ಪಾಂಟಿಂಗ್. ಗೌಡಪ್ಪ ಪಾಂಟಿಂಗ್ ಗೆ ಕೊಡೋ ಹಣದಾಗೆ ಚೌಕಾಸಿ ಮಾಡಿದ್ದಕ್ಕೆ, ಗೌಡಪ್ಪನ ಮೂರನೇ ಹೆಂಡರನ್ನ ಪಾಂಟಿಂಗ್ ಇಸ್ಮಾಯಿಲ್ ಬಸ್ನಾಗೆ ಕರ್ಕಂಡು ಹೋಗಿದ್ದ. ಈಗ ಇಸ್ಮಾಯಿಲ್ ಎಲ್ಲಿ ಕಂಡ್ರು ಗೌಡಪ್ಪ ಹಂಗೇ ದಪಾ ದಪಾ ಅಂತಾ ಹೊಡೆಯೋದೆ.

 

 

Rating
No votes yet

Comments