ನಾನೋ , ಕಾಲವೋ , ಅಲ್ಲ ಭಾವವೋ ಬದಲಾದದ್ದು ?
೨೫ ವರುಷಗಳ ಹಿಂದೆ ಒಂದು ದಿನ
ನನಗ ಭೂಮಿಗೆ ಬಂದ ದಿನ
ಮನೆಯಲ್ಲಿ ಹಬ್ಬದ ಕಾಮನ ಬಿಲ್ಲು
ಅಪ್ಪನ ಆ ನಗು ತುಂಬಾ ಸುಂದರ
ಅಮ್ಮನ ನೆಮ್ಮದಿಯ ಮುಖ ನೋಡಬೇಕು ಇನ್ನೊಮ್ಮೆ
ನೆಂಟರಿಷ್ಟರ ಅಪರಿಚಿತ ನಗು ಮುಖ !
೨೦ ವರುಷಗಳ ಹಿಂದೆ ಒಂದು ದಿನ ,
ಅಪ್ಪ ಅಮ್ಮ ನ ಆ ನಗು ಮುಖ
ಶಾಲೆಯ ಅಪರಿಚಿತ ಮುಖ
೧೫ ವರುಷಗಳ ಹಿಂದೆ ಒಂದು ದಿನ
ಸ್ನೇಹಿತರ ಪರಿಚಯದ ನಗು ಮುಖ
ಶಾಲೆಯೂ ನೆಂಟರೂ ಈಗ ಹತ್ತಿರ
೧೦ ವರ್ಷಗಳ ಹಿಂದೆ ಆ ದಿನ
ಅಪ್ಪ ನೆಂಟ ಗೆಳೆಯರೆಲ್ಲ ಖುಷಿ
ಜೀವನ ಕಾಮನ ಬಿಲ್ಲು
೫ ವರ್ಷಗಳ ಹಿಂದೆ ಆ ದಿನ
ಅಮ್ಮ ತಮ್ಮ ಗೆಳೆಯರೆಲ್ಲ ಒಟ್ಟಿಗೆ
ನೆಂಟರ್ಯಾಕಿಲ್ಲ ಇವರ ಜೊತೆ ? ಮನದ ದುಗುಡ !
ಈ ಕಳೆದ ವರ್ಷಗಳೆಲ್ಲ ಪರೀಕ್ಷಾ ಸಮಯ
ಅಪ್ಪ ಅಮ್ಮ ಗೆಳೆಯರೆಲ್ಲ ಅದೇ ಮುಗುಳು ನಗೆ
ನೆಂಟರ್ಯಾಕಿಲ್ಲ ಇವರ ಜೊತೆ ? ಮನಸಿಗದೇ ದುಗುಡ !
ತಪ್ಪು ಮಾಡಿದ್ದಲ್ಲಿ ಗೆಳೆಯರೂ ಇರಿಯಬೇಕಿತ್ತಲ್ಲ
ಅಪ್ಪನೂ ಅರಿಯಬೇಕಿತ್ತಲ್ಲ
ನೆಂಟರ್ಯಾಕಿಲ್ಲ ಇವರ ಜೊತೆ ? ಮನಸು ಮುಗಿಲ ಬಿಲ್ಲು . . .
(ಒಂದು ದ್ವಂದ್ವ ದ ಮೇಲೆ ಬೆಳಕು ಚೆಲ್ಲಿ ಬರೆಯುವ ಪ್ರಯತ್ನ . ತಪ್ಪಿದ್ದಲ್ಲಿ ತಿದ್ದುವ ಹಕ್ಕು ಸಂಪದಿಗರಿಗಿದೆ . ಬರೆಯುವುದು ಒಂದು ಲೇಖನಿ ,ತಿದ್ದಿ ತೀಡುವುದು ಕಲಿಕೆಯ ಎರಡನೇ ಲೇಖನಿ ! )
ಪ್ರವೀಣ ಸಾಯ
Rating
Comments
ಉ: ನಾನೋ , ಕಾಲವೋ , ಅಲ್ಲ ಭಾವವೋ ಬದಲಾದದ್ದು ?
In reply to ಉ: ನಾನೋ , ಕಾಲವೋ , ಅಲ್ಲ ಭಾವವೋ ಬದಲಾದದ್ದು ? by gopinatha
ಉ: ನಾನೋ , ಕಾಲವೋ , ಅಲ್ಲ ಭಾವವೋ ಬದಲಾದದ್ದು ?
ಉ: ನಾನೋ , ಕಾಲವೋ , ಅಲ್ಲ ಭಾವವೋ ಬದಲಾದದ್ದು ?
In reply to ಉ: ನಾನೋ , ಕಾಲವೋ , ಅಲ್ಲ ಭಾವವೋ ಬದಲಾದದ್ದು ? by Harish Athreya
ಉ: ನಾನೋ , ಕಾಲವೋ , ಅಲ್ಲ ಭಾವವೋ ಬದಲಾದದ್ದು ?