ಅವರು..ನಾಯಕರು.! ಇವರು...ನಾಯಿ..ಕರು .
ಅವರು....ನಾಯಕರಂತೆ !
ಅವರ ಮಾತೆಂದರೆ..ಅಜ್ಜನ
ಹರಕು ಲಾಡಿಯಿಲ್ಲದ ಚಡ್ಡಿ
ಅನಕ್ಷರಿ ಹರಿದಿಟ್ಟ ಶಬ್ದಕೋಶ !
ವರ್ತನೆಯಂತೂ ....
ಹುಚ್ಚನ ಕೈಯಲ್ಲಿರುವ ಕಲ್ಲು
ಎಲ್ಲವೂ ಕಲಸುಮೇಲೋಗರ
ಅವರು..ಮನುಷ್ಯತ್ವಕ್ಕೆ
ರಾಜಿನಾಮೆ ಬಿಸಾಕಿ
ದಶಕಗಳುರುಳಿವೆ...!
ಐದುವರುಷಕ್ಕೊಮ್ಮೆ..ಕಾಂಚಾಣ
ಕುಣಿಸಿ..!
'ಹಸಿದವರ ಬಾಯ್ಗೆ
ಮೆತ್ತುವರು ಮುಸುರೆ'
ಮೆತ್ತಿಸಿಕೊಂಡವರಿಗಿಲ್ಲಿ....ತೊಳೆಯಲು
ಕಣ್ಣಂಚಿನಲ್ಲೂ.....ನೀರಿಲ್ಲ.!
ಮುರಿದ ಮನೆ ಬಾಗಿಲ ಮುಂದೆ
ಬಿಳಿಟಪ್ಪಿ ಧರಿಸಿದ
ಕಟ್ಟಿರುವೆಗಳ ಸಾಲು...ಸಾಗುತ್ತದೆ.!
ಮತ್ತೆ ಕಾಯಬೇಕಿವರು!
ಐದು ವರುಷ
ಮುತ್ತಿಕೊಳ್ಳಲು
'ಮುಸುರೆ ಮೆತ್ತಿಕೊಳ್ಳಲು !'
ಅಲ್ಲಿಯವರೆಗೆ ಅವರು 'ನಾಯಕರು'.
ಇವರು ನಾಯಿ.....ಕರು.!
Comments
ಉ: ಅವರು..ನಾಯಕರು.! ಇವರು...ನಾಯಿ..ಕರು .
In reply to ಉ: ಅವರು..ನಾಯಕರು.! ಇವರು...ನಾಯಿ..ಕರು . by gopinatha
ಉ: ಅವರು..ನಾಯಕರು.! ಇವರು...ನಾಯಿ..ಕರು .
ಉ: ಅವರು..ನಾಯಕರು.! ಇವರು...ನಾಯಿ..ಕರು .
In reply to ಉ: ಅವರು..ನಾಯಕರು.! ಇವರು...ನಾಯಿ..ಕರು . by ksraghavendranavada
ಉ: ಅವರು..ನಾಯಕರು.! ಇವರು...ನಾಯಿ..ಕರು .
ಉ: ಅವರು..ನಾಯಕರು.! ಇವರು...ನಾಯಿ..ಕರು .
In reply to ಉ: ಅವರು..ನಾಯಕರು.! ಇವರು...ನಾಯಿ..ಕರು . by gopaljsr
ಉ: ಅವರು..ನಾಯಕರು.! ಇವರು...ನಾಯಿ..ಕರು .
ಉ: ಅವರು..ನಾಯಕರು.! ಇವರು...ನಾಯಿ..ಕರು .
In reply to ಉ: ಅವರು..ನಾಯಕರು.! ಇವರು...ನಾಯಿ..ಕರು . by kavinagaraj
ಉ: ಅವರು..ನಾಯಕರು.! ಇವರು...ನಾಯಿ..ಕರು .