ಅಪ್ಪಾ .....ಈಗಾದರೂ ದಾರಿ ಬಿಡುವೆಯಾ ?

ಅಪ್ಪಾ .....ಈಗಾದರೂ ದಾರಿ ಬಿಡುವೆಯಾ ?

 ಅಪ್ಪಾ.....

 

  'ಹೋಗದಿರು ಅಲ್ಲಿ ನೋಡದಿರು ಇಲ್ಲಿ"

  ಎಂಬುದೇ......

  ಇದುವರೆಗೆ ನೀನನಗಿತ್ತ ಸ್ವಾತಂತ್ರ್ಯ ಪರಿಧಿ !

 

   'ಬೆಳೆದ ಮಕ್ಕಳ ನೀನು ಗೆಳೆಯನಂತೆ ಕಾಣು"

    ನೀನೇ  ಇನ್ನಾರಿಗೋ ಹೇಳಿದ ಮಾತು

 

   ನಿನ್ನ ಕಂದಾಚಾರದ ಬೇಲಿಯೊಳಗೆ

   ನಾನು ಮಾತ್ರ ಮುಕ್ತತೆಯ ಕಾಣಬೇಕೆಂಬ

   ಅಹಮ್ಮು....ನಿನ್ನದೇ ?

 

   ನೆನಪಿದೆಯೇ ನಿನಗೆ...

   ಈ ವಯದ  ಆಸೆ ಆಕಾಂಕ್ಷೆ, ಕನಸು

   ನೀನೇ ಎಡವುತ್ತ  ದಾಟಿ ಬಂದಿಹೆ ಎಂದು.

   ನಿನ್ನ ಹದಿಹರೆಯದ ತುಂಟಾಟ..

   ಅಮ್ಮ...ಗುಟ್ಟಾಗಿ  ಹೇಳಿಹಳು.!

   ಅದನೆಲ್ಲ  ಮರೆತು ಎದೆಯಲಿ

   ಬಚ್ಚಿಟ್ಟುಕೊಂಡ ಕ್ಷಮಾಶೀಲೆ !

 

    ಈಗ ನಿನಗೆ ನಾ..ಬೆತ್ತಲಾಗುವ ಭಯವೇ?

 

   ನಿನ್ನ  ಇಂದಿನ ... !

   ಅಭಿಮಾನಕ್ಕೆ  ಕುಂದು ತರದೆ

   ಸ್ವಚ್ಛಮನದಲಿ  ನನ್ನ

   ಕನಸಿಗೆ  ರೆಕ್ಕೆ ಕಟ್ಟುವೆ.

    ಈಗಾದರೂ ...ದಾರಿ  ಬಿಡುವೆಯಾ ?

 

 

 

 

 

Rating
No votes yet

Comments