ನೀ ಮುಖ್ಯಮಂತ್ರಿಯಾದರೆ

ನೀ ಮುಖ್ಯಮಂತ್ರಿಯಾದರೆ

ಗೌಡಪ್ಪ ಮನೇಲ್ಲಿ ಯಾರೋ ಸತ್ತು ಹೋಗಿರೋ ತರಾ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದ. ಯಾಕ್ರೀ ಗೌಡ್ರೆ. ನಿಮ್ಮ ಹೆಂಡರು ಸತ್ತಲಾ ಅಂದೆ. ಬುಡ್ತು ಅನ್ನು. ಅಲ್ಲಾ ಕಲಾ ನಮ್ಮೂರು ಚೆರಂಡಿಯಲ್ಲಿ ನೀರು ಸರಿಯಾಗಿ ಹೋಗಕ್ಕಿಲ್ಲ, ಸಾನೇ ಸೊಳ್ಳೆ ಆಗೈತೆ ಅಂತಾ ಮುಕ್ಕಮಂತ್ರಿ ಯಡಿಯೂರಪ್ಪಂಗೆ ಅರ್ಜಿ ಕೊಡೋವಾ ಅಂತಾ ಹೋಗಿದ್ದೆ. ಸೊಳ್ಳೆ ಪರದೆ ಐತಲ್ಲಾ. ಅದು ಇಲಿ ತಿಂದು ಹರಿದು ಹೋಗೈತಲಾ ಅದಕ್ಕೆ ಹೋಗಿದ್ದೆ. ಅಂಗ ರಕ್ಸಕರು ನಾಯಿ ತರಾ ತಳ್ಳಿ ಬಿಟ್ಟರು ಕಲಾ ಅಂದ. ಏ ನಿಮ್ಮ ಹೆಂಡರನ್ನ ಕಳಿಸಿದ್ರೆ ಕರೆದು ಅರ್ಜಿ ಇಸ್ಕಂತಿದ್ರು ಅಂದೆ. ನನ್ನ ಹೆಂಡರು ಏನು ಶೋ.... ತಂಗಿನಾ. ಅಲ್ಲಾ ಕಲಾ, ಮುಕ್ಕಮಂತ್ರಿ ಅಂದ್ರೆ ಅಟ್ಟೊಂದು ಬೆಲೆಯಾ ಅಂದಾ ಗೌಡಪ್ಪ. ನೀವೇನಾದರೂ ಮುಕ್ಕಮಂತ್ರಿಯಾಗಿದ್ದರೆ ಏನ್ಮಾಡ್ತಿದ್ರಿ.

ನೋಡಲಾ ನಾನು ನಮ್ಮ ಹಳ್ಯಾಗೆ ಒಂದು 100X100 ಜಾಗ ತಗೋತಾ ಇದ್ದೆ. ಅದಕ್ಕೆ ಮುಕ್ಕಮಂತ್ರಿಯಾಗಬೇಕಾ. ಗ್ರಾ.ಪಂ ಮೆಂಬರ್ ಆದ್ರೆ ಸಾಕು. ನೋಡಲಾ ಒಂದು ನಾಕು ಹೆಂಡರನ್ನ ಮಡಿಕಂತಿದ್ದೆ. ಅದೇನು ಹೊಸಾದಾ. ಎಲ್ಲಾ ಮುಕ್ಕಮಂತ್ರಿಗಳು ಮಾಡದು ಅದನ್ನೇ. ನೋಡಲಾ ಮನೆ ಇಲ್ಲದೋರಿಗೆ ಮನೆ ಕೊಡಿಸ್ತೀನಿ. ಮಕ್ಕಳು ಇಲ್ದೋರಿಗೆ ಮಕ್ಕಳು ಕೊಡಿಸ್ತೀನಿ ಅಂದ. ಅದಕ್ಕೆ ನಿತ್ಯಾನಂದ ಅವ್ನೆ ನೀವೇನೂ ಬೇಡ ಬುಡಿ ಅಂದೆ. ಸರಿ ಬುಡಲಾ. ಅಂದಾ ಅಟ್ಟೊತ್ತಿಗೆ ಅವನ ಹೆಂಡರು ಸುಗರ್ ಲೆಸ್ ಚಾನ್ನ ಪ್ಲಾಸ್ಟಿಕ್ ಕಪ್ ನಾಗೆ ತಂದು ಕೊಟ್ಟಲು. ಯಾಕವಾ ಲೋಟ ಇಲ್ವಾ. ಯಾವನೋ ಕುಡಿದಿದ್ದು ತೊಳಯೋಕೆ ನಮಗೇನು ಗ್ರಹಸಾರ ಅಂದು ಒಳ ಹೋತು.

ಇದಾಗಿ 4 ತಿಂಗಳಿಗೆ ಹಳಸೋದು ಫಲಾವು ವಾಸ್ನೆ ಗೌಡಪ್ಪ ಮುಕ್ಕಮಂತ್ರಿ ಅಂತಾ ಪೇಪರ್ನಾಗೆ ಬಂತು.ರಿನ್ ಸೋಪ್ ನೋರು ಸುಭ ಕೋರಿದ್ರು. ನೋಡಿದ್ರೆ ನಮ್ಮ ಗಬ್ಬುನಾಥ ಗೌಡಪ್ಪನ ಮೇಲೆ ಸೋಪು . ಸರಿ ಗೌಡಪ್ಪ ಮುಂದೆ ಬತ್ತಾ ಇದ್ರೆ. ಕಾರ್ಯದರ್ಸಿ, ಅಂಗ ರಕ್ಸಕರು ಒಂದು ಹತ್ತು ಮಾರು ಹಿಂದೆ ಬತ್ತಾ ಇದ್ವು. ಯಾಕ್ರಲಾ ಹಿಂಗೆ ಹಿಂದೆ ಬತ್ತಾ ಇದೀರಿ ಅಂದಾ ಸುಬ್ಬ. ರೀ ಅದೇನ್ ವಾಸ್ನೇರಿ. ಹೊಟ್ಟೆ ತೊಳಸದಂಗೆ ಆಗುತ್ತೆ. ಏ ಥೂ. ದರಿದ್ರ ವಾಸನೆಗೆ ಒಂದಷ್ಟು ಬೆಂಕಿಹಾಕ ಅಂದ್ವು. ಗೌಡಪ್ಪನ ಪಕ್ಕದಾಗೆ ಬಸಮ್ಮ. ಚೋಟುದ್ದ ಜಡೆಗೆ ಸೂರ್ಯಕಾಂತಿ ಹೂವು ಮಡಗಿದ್ಲು. ಸಾನೇ ಎಣ್ದೆ. ೊಂದು 50ಗ್ರಾಂ ಎಣ್ಣೆ ಗೌಡಪ್ಪನ ಸಲ್ಟು ಮೇಲೆ ಇತ್ತು ಸಂಜೆ ಆಗ್ತಿದ್ದಂಗೆನೇ ಹೂವು ನೆಲ ನೋಡೋದು. ನಮ್ಮ ಗೌಡಪ್ಪನ ಕಾರ್ ಡ್ರೇವರ್ ಇಸ್ಮಾಯಿಲ್. ಗೌಡಪ್ಪನ ಕಾರ್ ಬತ್ತಾ ಇದೆ ಅಂದ್ರೆ. ಎಲ್ಲವೂ ಕಟ್ಟೆ ಮೇಲೆ ಇರೋವು. ಬಡ್ಡೆ ಹೈದ ಇಸ್ಮಾಯಿಲ್ ಎಲ್ಲಿ ಕಾಲು ಮೇಲೆ ಕಾರ್ ಹತ್ತಿಸ್ತಾನೇ ಅಂತಾ. ಬಂದ್ ನಿಂತ ಸ್ಪೀಡಿಗೆ ಗೌಡಪ್ಪ ತೂರಾಡ್ ಕೊಂಡು ಇಳಿಯೋನು. ನಮ್ಮೂರು ಹೊಸಾ ಶಾಲೆ ಶಂಕುಸ್ಥಾಪನೆಗೆ ಗೌಡಪ್ಪ ಬಂದಿದ್ದ. ಎರಡು ಇಟ್ಟಿಗೆ ಇಟ್ಟು ಶಂಕುಸ್ಥಾಪನೆ ಮಾಡ್ಬೇಕಿತ್ತು. ಚಡ್ಯಾಗೆ ಬಂದ ಗೌಡಪ್ಪ ಒಂದು ಹತ್ತು ಲೈನ್ ಕಟ್ಟಿದ್ದು ಅಲ್ಲದೇ, ಅಲ್ಲಿನ ಹೈಕ್ಳಿಗೆ ಮಡ್ಡಿ ಇನ್ನೂ ಬೇಕು ಬೇಗ ಕಲಸ್ರಲಾ ಅಂದ. ಗೌಡ್ರೆ ನೀವೇನು ಮೇಸ್ತ್ರಿ ಗಂಗಪ್ಪನಾ. ಬನ್ರೀ ಈ ಕಡೆಗೆ. ಹಳೇ ಕ್ಯಾಮೆ ಅಂಗೇ ಜ್ಞಾಪಕ ಬಂದು ಹಿಂಗೆ ಮಾಡದೆ ಕಲಾ. ಸರಿ ಈಗ ಗೌಡಪ್ಪರಿಂದ ಚೆರಂಡಿ ಉದ್ಘಾಟನೆ. ಅಲ್ಲೂ ಅಟೆಯಾ. ಒಂದು ಕೋಲು ತಗೊಂಡು ಚೆರಂಡಿ ಕಿಲೀನ್ ಮಾಡಕ್ಕೆ ಸುರು ಹಚ್ಕೊಂಡ. ರಸ್ತೆ ಸಂಕುಸ್ಥಾಪನೆಗೆ ರಬ್ಬರ್ ಸೂ ಹಾಕ್ಕೊಂಡು ಡಾಂಬಾರ್ ಹುಯ್ತಾ ಇದ್ದ.  ಏ ಥೂ. ಬಸಮ್ಮ ಮಾತ್ರ ಪಕ್ಕದಾಗೆ ಇದ್ದು ನುಲೀತಾನೇ ಇದ್ಲು. ಗೌಡರ ಹೆಂಡರು ನೋಡಿದರೆ ಮನೆಗೆ ವಿರೋಧ ಪಕ್ಷ ಹೆಂಗೆ ಅನ್ನೋದು ಗೌಡಪ್ಪಂಗೆ ಗೊತ್ತಾಯ್ತದೆ ಅಂದಾ ಸುಬ್ಬ.

ಸಿದ್ದೇಸನ ಗುಡಿಗೆ ಹೋಗಿ ಅಂಗೇ ಅಡ್ಡ ಬಿದ್ದ. ನೆಲದ ಮೇಲೆ ಚೆಲ್ಲಿದ್ದ ಗಮಟು ಎಣ್ಣೆ.ಕುಂಕುಮ, ಅರಿಸಿನ ಗೌಡಪ್ಪನ ಸಲ್ಟಿಗೆ. ಹೊರಗೆ ಬಂದ್ರೆ ಅಂಗ ರಕ್ಸಕರು ಏ ಸೈಡ್ ಗೆ ಹೋಗಲಾ ಅಂದ್ವು. ನಾನ್ ಕಲಾ ಮುಕ್ಕಮಂತ್ರಿ.  ಸಿದ್ದೇಸಂಗೆ 50ಲಕ್ಸ ಸಾಂಕ್ಸನ್ ಅಂದ. ಪೂಜಾರಿ ನನಗೆ. ಸಂಧ್ಯಾವಂದನೆ ಮಂತ್ರ ಬಿಟ್ಟು ಪೂಜೆ ಮಂತ್ರ ಕಲಿ ಬಡ್ಡೆ ಹೈದನೆ. ಮದುವೆ,ತಿಥಿ ಎಲ್ಲಾನೂ ಇದ್ರಾಗೆ ಮುಗಿಸ್ತಾನೆ. ನಿನಗೆ ತಿಂಗಳಿಗೆ 10ರೂ ಜಾಸ್ತಿ ಹೋಗಲಾ. ಅಟ್ಟೊತ್ತಿಗೆ ಕಟ್ಟಿಗೆ ಕಿಸ್ನ. ಅಣ್ಣಾ ಕಟ್ಟಿಗೆ ಒಡಿದು ಒಡಿದು ಬಲಗೈ ಡಿಸ್ ಲೊಕೇಟ್ ಆಗೈತೆ ಏನ್ ಮಾಡಲಿ ಅಂದಾ. ನೋಡಲಾ ಕಿಸ್ನ. ಕಟ್ಟಿಗೆ ಒಡೆಯೋರಿಗೆ  ಕಾಸು ಕೊಡೋಕ್ಕೆ ನಾವೇನು ಟಿಂಬರ್ ಡಿಪೋ ಮಡಿಗಿದೇನ್ಲಾ. ಇನ್ನು ಮ್ಯಾಕೆ ಹಸೀ ಕಟ್ಟಿಗೆ ಎಡಗೈನಾಗೆ ಒಡಿ ಏನು ಆಗಕ್ಕಿಲ್ಲ ಅಂದ. ಹೆಂಗಿದ್ರೂ ನಿನ್ನ ಹೆಂಡರು ಸತ್ತವ್ಳೆ. ವಿದುರ ಪೆನ್ಸನ್ ತಗೋ ಅಂದ. ಯಾರಲಾ ಈ ಇದುರ. ಸುಬ್ಬನ ತಮ್ಮ ಕಲಾ. ಯಾಕಲಾ ಎಂಗೈತೆ ಮೈಗೆ ಅಂದಾ ಸುಬ್ಬ.

ನೋಡ್ರೀ, ಈ ಬಜೆಟ್ ನಲ್ಲಿ ಕಟ್ಟಿಗೆ ಒಡೆಯೋರಿಗೆ ಅಂತಾ ಒಂದು ಕೊಡಲಿ ಯೋಜನೆ ಹಾಕ್ರೀ. ಅಂಗೇ ಅದನ್ನು ಮಸಿಯಕ್ಕೆ ಕಲ್ಲು ಕೊತ್ತೀವಿ ಅಂತಾ ಒಂದು ನೂರು ಕೋಟಿ ಇಡ್ರಿ ಅಂದ. ಸುಬ್ಬಿ ಗೌಡಪ್ಪಂಗೆ ನಮ್ಕಾರ ಮಾಡವಾ ಅಂತಾ ಬಂದು ಜಾರಿದ್ಲು ಅಟೆಯಾ. ಅವಳ ಮುಂದಿನ ಅಟ್ಟೂ ಹಲ್ಲು ಗೌಡಪ್ಪನ ಎದ್ಯಾಗೆ. ಏ ಥೂ ಅಂದಾ ಗೌಡಪ್ಪ. ಸಾನೇ ರಕ್ತ. ಹಚ್ರಲಾ ಅರಿಸಿನ. ಅರಿಸಿನ ಹಚ್ಚಿದ್ರೆ ಎದೆಗೆ ಒದ್ದು ಬಿಡ್ತೀನಿ. ಮಗನೇ ಮುಕ್ಕಮಂತ್ರಿ ಕಲಾ ನಾನು. ಮೈಲಾರಿ ಭಕ್ತ ಅಲ್ರಲಾ ಅಂದಾ. ಸರಿ ಸುಬ್ಬಿಗೆ ಒಂದು ನೂರು ರೂ ಕೊಟ್ಟು ಹಲ್ಲಿಗೆ ಕ್ಲಿಪ್ಸ್ ಹಾಕು ಅಂದ.

ಇಟ್ಟೆಲ್ಲಾ ಆಗೋ ಹೊತ್ತಿಗೆ ಸಂಜೆ 6 ಆಗಿತ್ತು. ಊರ್ನಾಗೆ ಅಭಿನಂದನಾ ಕಾರ್ಯಕ್ರಮ. ಎಲ್ಲಾವೂ ಚಂಡು ಹೂವು, ಗಂಟೆ ಹೂವು, ಸಿಗಲಿಲ್ಲಾ ಅಂತಾ ಹೂವು ಕೋಸಿಂದು ಹಾರ ಹಾಕದೆಯಾ. ಗೌಡಪ್ಪಂಗೆ ಖುಸಿನೋ ಖುಸಿ. ಗರಡ ಇದ್ದಂಗೆ ಇದ್ದೋನು ಭಾರಕ್ಕೆ ಬೀದಿ ನಾಯಿ ತರಾ ಆಗಿದ್ದ.  ಲೇ ಕೋಮಲಾ ಅರ್ಜೆಂಟಾಗಿ ಕೆರೆತಾವ ಹೋಗ್ಬೇಕು ಬೇಗ ಕಾರ್ಯಕ್ರಮ ಮುಗಿಸಲಾ ಅಂದ. ವಾಯ್ಸ್ ಮಾತ್ರ ಕೇಳಿಸ್ತಾ ಇತ್ತು ಮುಖಾನೇ ಕಾಣ್ತಾ ಇರ್ಲಿಲ್ಲ. ಅಟ್ಟೊಂದು ಹೂವು. ಮಗಾ ನಿಂಗ ಮಾವಿನ ಸೊಪ್ಪಿನ ಹಾರ ಹಾಕಿದ್ದ. ಲೇ ನಾನೇನು ಮಾರಿ ಹಬ್ಬದ ಕುರಿ ಏನ್ಲಾ. ರಾತ್ರಿ ಹತ್ತು ಗಂಟೆ ತನಕ ಹಾರ ಹಾಕೋ ಕಾರ್ಯಕ್ರಮನೇ ಐತೆ ಅಲ್ಲಿ ತನಕ ತಡ್ಕಳಿ ಅಂದೆ. ಮಗಾ ಸುಬ್ಬ ಗೌಡಪ್ಪನ ಮೇಲಿಸನ ಸಿಟ್ಟಿಗೆ ಒಂದು 50ಕೆಜಿ ಹಾರ ಮಾಡಿಸ್ಕಂಡ್ ಬಂದಿದ್ದ. 10ಜನ ಎತ್ತಕಂಡ್ ಬಂದ್ ಹಾಕಿದ್ರೆ. ಗೌಡಪ್ಪನ ಮುಖ ಟೇಬಲ್ ಗೆ ಹೊಡೆದಿತ್ತು. ಏನಲಾ ಇದು ಹಾರನೋ ಇಲ್ಲಾ ತೇರು ಎಳೆಯೋ ಹಗ್ಗನೋ ಅಂದಾ ಗೌಡಪ್ಪ. ಗೌಡಪ್ಪಂಗೆ ಸಾನೇ ಅರ್ಜೆಂಟು ಭಾಸಣ ಸುರು ಹಚ್ಕಂಡ. ಗಂಡಸರೆ, ಹೆಂಗಸರೆ ಮತ್ತು ಅಆ ಅಂದ. ಯಾಕೆ ಎಂಗೈತೆ ಅಂದ್ವು ಯಲ್ಲಮ್ಮನ ಭಕ್ತರು.

ನಾನು ಮುಕ್ಕಮಂತ್ರಿ ನಿಜ. ಸಾನೇ ಕೆಲಸ ಮಾಡಬೇಕು. ಭಾಸೆ, ದೇಸಕ್ಕೋಸ್ಕರ ದುಡೀಬೇಕು. ನಮ್ಮ ಹಳ್ಳಿನಾ ಸಾನೇ ಪೇಮಸ್ ಮಾತ್ತೀನಿ.   ಮೊದಲು ಸ್ನಾನ ಮಾಡಲೇ ಗೌಡ ಅಂದಾ ಹಿಂದಿಂದ. ಯಾರಲಾ ಅದು. ಇದೀಗ ಗೌಡರಿಗೆ ಬಹಳ ಅರ್ಜೆಂಟ್ ಕ್ಯಾಮೆ ಇರೋದ್ರಿಂದ ಭಾಸಣ ಮುಗಿಸ್ತಾ ಇದಾರೆ ಅಂದಿದ್ದೇ ತಡ. ಕುಡಿಯಕ್ಕೆ ಅಂತಾ ಒಂದು ಚೊಂಬ್ನಾಗೆ ನೀರು ಇಟ್ಟಿದ್ವಿ. ಅದನ್ನ ತಗೊಂಡೋನೆ, ತಲೆ ಮೇಲೆ ಪಂಚೆ ಹಾಕ್ಕೊಂಡು ಚೆಡ್ಯಾಗೆ ಊರು ಜನರ ಮಧ್ಯ ಓಡೋಕೆ ಸುರು ಮಾಡ್ದ. ಅವನು ಓಡೋ ಸ್ಪೀಡ್ ನೋಡಿ ಹಿಂದೆ ಅಂಗ ರಕ್ಸಕರು, ಕಾರ್ಯದರ್ಸಿ ಎಲ್ಲಾ ಹೊಂಟ್ವು. ಲೇ ನಾನೇನು ಪ್ಯಾರಾಚೂಟ್ ಹಾರಿಸಕ್ಕೆ ಹೋಗ್ತಾ ಇದೀನಿ ಏನ್ರಲಾ, ಹೋಗ್ರಲಾ ಆ ಕಡಿಗೆ ಅಂದಾ ಗೌಡಪ್ಪ. ಬೆಳಗ್ಗೆ ನೋತ್ತೀವಿ ಗೌಡಪ್ಪ ಮುಕ್ಕಮಂತ್ರಿ ಸ್ಥಾನಕ್ಕೆ ರಾಜೀನಾಮೆ. ಯಾಕ್ರೀ ಗೌಡ್ರೆ. ಅಲ್ಲಾ ಕಲಾ. ಕೆರೆತಾವ ಹೋಗಕ್ಕೂ ಬಿಡಲ್ವಲಾ ಇವ್ರು. ಯಾರಿಗಲಾ ಬೇಕು ಈ ಹುದ್ದೆ ಅಂದ.

 

 

Rating
No votes yet

Comments