ಪಾದಯಾತ್ರೆಯ ಹನಿಗಳು!

ಪಾದಯಾತ್ರೆಯ ಹನಿಗಳು!

ಅಂದು
ಮಹಾತ್ಮ
ಬೆನ್ನಿಗಂಟಿದ್ದ
ಹೊಟ್ಟೆಯೊಂದಿಗೆ
ನಡೆಸಿದ್ದರು
ಪಾದಯಾತ್ರೆ


ಇಂದು
ಗಡದ್ದಾಗಿ
ತುಂಬಿಸಿರುವ
ಹೊಟ್ಟೆಯೊಂದಿಗೆ
ನಡೆಸಿದ್ದಾರೆ
ಪಾದಯಾತ್ರೆ


*****


ಮಹಾತ್ಮ
ನಡೆಸಿದ್ದ
ಪಾದಯಾತ್ರೆ
ನಮ್ಮ ನಾಡನ್ನು
ವಿದೇಶಿಯರಿಂದ
ರಕ್ಷಿಸಲು


ಈ ಮಂದಿ
ನಡೆಸಿಹರು
ಪಾದಯಾತ್ರೆ
ನಮ್ಮ ನಾಡನ್ನು
ನಮ್ಮವರಿಂದಲೇ
ರಕ್ಷಿಸಲು


*****


ಅಂದು
ದಾರಿಯುದ್ದಕ್ಕೂ
ಎಲ್ಲೆಲ್ಲೂ
ದೇಶ ಭಕ್ತಿಯ
ಪ್ರದರ್ಶನ


ಇಂದು
ದಾರಿಯುದ್ದಕ್ಕೂ
ವಿವಿಧ ನೃತ್ಯ
ಡಂಬಾಚಾರದ
ಪ್ರದರ್ಶನ



*****


ಮಹಾತ್ಮನ
ಹಿಂದೆ
ನಡೆದವರು
ಎಲ್ಲರೂ ಅವರನ್ನು
ನಾಯಕನೆಂದು
ಒಪ್ಪಿಕೊಂಡಿದ್ದವರು


ಇಂದಿಲ್ಲಿ
ಕೈ ಕೈ ಹಿಡಿದು
ನಡೆದಿರುವವರು
ಹಾವು
ಮುಂಗುಸಿಯಂತೆ
ಬುಸುಗುಟ್ಟುತಿರುವವರು


*****


ಅಂದು
ಎಲ್ಲರ ಮನಗಳಲ್ಲೂ
ಮನೆ ಮಾಡಿದ್ದವು
ತ್ಯಾಗ ಬಲಿದಾನದ
ಮಹತ್ತರ
ವಿಚಾರಗಳು


ಇಂದು
ಎಲ್ಲರ ಮನಗಳಲ್ಲೂ
ಮನೆಮಾಡಿವೆ
ಭರ್ಜರಿ
ಪ್ರಚಾರದ
ಮಹದಾಸೆಗಳು


*****


ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments