ಕೆಂಪು ಕುಡಿಗಳು ಧರೆಗೆ

ಕೆಂಪು ಕುಡಿಗಳು ಧರೆಗೆ

 

ಸಮಾನತೆಯ ಯುಗದಲ್ಲೂ

ಆಯ್ಕೆಗಿಲ್ಲದ ಸ್ವಾತಂತ್ರ್ಯ

ಮೂಕ ಮೊಗ್ಗುಗಳ ಮಾರಣ ಹೋಮಕ್ಕೆ

ಹಸಿದ ಹೊಟ್ಟೆಗಳ ಪರದಾಟ

ತಾಯ ಉದರಕ್ಕೆ ಕತ್ತರಿ

ಕೊಳೆತ ತರಕಾರಿಯ ಬಿಕರಿಗೂ

ಬರದ ಅನಾಥ ಸರಕು

ಸಾವಿರ ಸಂಖ್ಯೆಯಲ್ಲಿ

ಕಸದ ತೊಟ್ಟಿಗೆ ರವಾನೆ

ಚೀರಿ ಬಗೆದು ತಿನ್ನಲು

ನಾಯಿ ಕಾಗೆಗಳ ಕಸಿದಾಟ

ಇನ್ನೂ ಬಲಿಯದ ಅಮಾಯಕತೆ

ಹಾಡ ಹಗಲೇ ಬಿಕರಿಗೆ

ಸ್ವಾರ್ಥದ ಅಮಿಷಕ್ಕೆ

ಬೀಜಕ್ಕಿಲ್ಲ ಕುಡಿಯೊಡೆವ ದೆಸೆ

ಹಲವೆಡೆ ಅತಿವೃಷ್ಟಿ

ಕೆಲವೆಡೆ ಅನಾವೃಷ್ಟಿ

ಪ್ರಕೃತಿಯ ಜತೆಯಲ್ಲೇ

ಹೊಸಜೀವಿಯ ಮರುಸೃಷ್ಟಿ

ಕುಡುಗೋಲ ತುಂಬಾ

ಹುಸಿನೆತ್ತರ ಅಭಿಷೇಕ

ಕತ್ತಲ ಬಸಿರನ್ನೇ ಚಿವುಟಿ

ಬಿಸುಡಿದ ಸೃಷ್ಟಿ

ಸೂಜಿಯಲ್ಲೇ ಸೆಳೆದೆಳೆದು

ಜೀವರಸದ ಲೂಟಿ

ಕಂದ ಪೂರ್ವ ಸಂತತಿಯ

ಹಾಡ ಹಗಲೇ ನಿರ್ನಾಮ

ಮಿಟ್ಟೆ*ಯಾಗುವ ಮೊದಲೇ

ಕೆಂಪು ಕುಡಿಗಳು ಧರೆಗೆ

Rating
No votes yet

Comments