ಕ್ರಿಕೆಟ್
ಮುರಲೀಧರನ್ ೮೦೦ ಟೆಸ್ಟ್ ವಿಕೆಟ್ಗಳನ್ನು ಪಡೆದು ವಿರಮಿಸಿದ್ದಾರೆ. ಅವರ ಬೌಲಿಂಗ್ ಶೈಲಿ ಬಗ್ಗೆ ಅನೇಕ ವಿವಾದಗಳು ಆಗಿದ್ದವು.ಆಸ್ಟ್ರೇಲಿಯದ ಅಂಪೈರ್ ಒಬ್ಬರು ಅವರ ಚೆಂಡುಗಳನ್ನು ನೋಬಾಲ್ ಎಂದು ಘೋಷಿಸಿದ್ದು ಶ್ರೀಲಂಕನ್ನರ ಕೋಪಕ್ಕೆ ಕಾರಣವಾಗಿತ್ತು.ಅವರ ವಿವಾದಿತ ಬೌಲಿಂಗ್ ಶೈಲಿಯನ್ನು ಮ್ಯಾಚಿನಲ್ಲಿ ವೀಡಿಯೋ ಮಾಡಿ ಪರೀಕ್ಷಿಸುವ ಬದಲು ಅದರದ್ದೇ ಪ್ರತ್ಯೇಕ ಪರೀಕ್ಷೆ ಇಟ್ಟದ್ದು ಹೇಗೆ ಸರಿಯಾಗುತ್ತೆ? ಅಂಥ ಪರೀಕ್ಷೆಯಲ್ಲಿ ನಿಯಮದ ಪ್ರಕಾರ ಬಾಲ್ ಮಾಡಿ ಸುಲಭವಾಗಿ ತಪ್ಪಿಸಿಕೊಳ್ಲಬಹುದು. ಆಸ್ಟ್ರೇಲಿಯದವರಿಗೆ ಕರಿಯರನ್ನು ಕಂಡರಾಗುವುದಿಲ್ಲ ಎಂದು ಅವರ ಮೇಲೆ ಆರೋಪವು ಅಲ್ಲಲ್ಲಿ ಕೇಳಿ ಬಂದುದುಂಟು. ಹೀಗಾಗಿ ಆಸ್ಟ್ರೇಲಿಯನ್ನರಿಗೆ ಆಗ ಯಾವ ದೇಶದ ಬೆಂಬಲವೂ ಸಿಗಲಿಲ್ಲ. ಆದರೂ ಮುರಲಿ ಬಾಲ್ ಎಸೆಯಲು ಕ್ರೀಸಿಗೆ ಬಂದು ಎಡಗಾಲನ್ನು ನೆಲಕ್ಕೆ ಊರಿದ ಚಿತ್ರವನ್ನು ಸರಿಯಾಗಿ ನೋಡಿದರೆ ಅವರ ಮೊಣಕೈ ಎಷ್ಟು ಬಾಗಿದೆ ಎನ್ನುವುದು ಸರಿಯಾಗಿ ಗೊತ್ತಾಗುತ್ತೆ. ಆನಂತರ ಅವರು ಬಾಲನ್ನು ರಿಲೀಸ್ ಮಾಡುತ್ತಿರುವ ಚಿತ್ರ ನೋಡಬೇಕು. ಆಗ ಮೊಣಕೈ ಎಷ್ಟು ನೇರವಾಗಿದೆ ಅಂತಲೂ ನೋಡಬೇಕು. ಅಂಥ ಚಿತ್ರಗಳನ್ನು ದಯವಿಟ್ತು ಸರಿಯಾಗಿ ನೋಡಿದರೆ ಮುರಲಿಯ ೮೦೦ ವಿಕೆಟುಗಳ ಗುಟ್ಟು ಗೊತ್ತಾಗುತ್ತದೆ. ಅದಕ್ಕೆ ಹೋಲಿಸಿದಾಗ ಶೇನ್ ವಾರ್ನ್ ಮತ್ತು ನಮ್ಮ ಅನಿಲ್ ಕುಂಬ್ಲೆ ಎಷ್ಟು ಉತ್ತಮ ಮತ್ತು ರೂಲ್ಸ್ ಪ್ರಕಾರ ಬಾಲ್ ಎಸೆಯುವ ಬೌಲರುಗಳು ಎಂದು ಗೊತ್ತಾಗುತ್ತದೆ. ಮೊನ್ನೆ ಮುರಲಿ ೮೦೦ ವಿಕೆಟ್ ಪಡೆದಾಗ ಕುಂಬ್ಲೆ, ವಾರ್ನ್ ಎಲ್ಲಾ ಹೊಗಳಿದ್ದು ಅವರ ದೊಡ್ದತನ ಬಿಡಿ.