ಸ್ವರ ಕೇಳ್ತಾ ಇಲ್ಲ
೧. ಸ್ಮಾರ್ಟ್ ವಿದ್ಯಾರ್ಥಿ
ಮಾಸ್ತರ್: ದೊಡ್ದವನಾಗಿ ಏನು ಮಾಡ್ಕೋತೀಯಾ?
ಸ್ಮಾರ್ಟ್ ವಿದ್ಯಾರ್ಥಿ:ಮದುವೆ ಮಾಡ್ಕೋತೀನಿ
ಮಾಸ್ತರ್: ಹಾಗಲ್ಲ ನೀನು ದೊಡ್ದವನಾದ್ಮೇಲೆ ಏನು ಆಗ್ತೀಯಾ?
ಸ್ಮಾರ್ಟ್ ವಿದ್ಯಾರ್ಥಿ: ಮದು ಮಗ ಆಗ್ತೀನಿ.
ಮಾಸ್ತರ್: ಅಲ್ಲ , ನೀನು ದೊಡ್ಡವನಾಗಿ ಏನು ಪಡೆಯುವಿ?
ಸ್ಮಾರ್ಟ್ ವಿದ್ಯಾರ್ಥಿ: ವಧು!!
ಮಾಸ್ತರ್: ಏಯ್!!! ದೊಡ್ದವನಾಗಿ ತಂದೆ ತಾಯಿಯವರಿಗೆ ಏನು ಕೊಡ್ತೀಯಾ?
ಸ್ಮಾರ್ಟ್ ವಿದ್ಯಾರ್ಥಿ: ಸೊಸೆ
ಮಾಸ್ತರ್: ಥೂ.. ನಿನ್ನ ! ಅಲ್ಲಯ್ಯಾ ನಿನ್ನ ಅಪ್ಪ ಅಮ್ಮ ನಿನ್ನಿಂದ ಏನು ನಿರೀಕ್ಷೆ ಮಾಡ್ತಾರೆ?
ಸ್ಮಾರ್ಟ್ ವಿದ್ಯಾರ್ಥಿ: ಮೊಮ್ಮಗ.
ಮಾಸ್ತರ್: ಅಯ್ಯೋ ದೇವರೇ, ಸರಿ ಹಾಗಾದ್ರೆ ,ನಿನ್ನ ಜೀವನದ ಉದ್ದೇಶವೇನು?
ಸ್ಮಾರ್ಟ್ ವಿದ್ಯಾರ್ಥಿ: ನಾವಿಬ್ಬರು, ನಮಗೆ ಬರೇ ಮಕ್ಕಳು
೨ ಅವಳ ತಂದೆಯೂ...
ರಾಂಪನ ತಂದೆ ತೀರಿ ಹೋದರು, ಅವನು ಜೋರಾಗಿ ಅಳುತ್ತಿದ್ದ.
ಸ್ವಲ್ಪ ಸಮಯದ ನಂತರ ಇನ್ನೂ ಜೋರಾಗಿ ಅತ್ತ
ಯಾಕೋ ಈಗ ಪುನಹ ಯಾಕೆ ಅಳುತ್ತಾ ಇದ್ದೀ...? ಅವನ ಸ್ನೇಹಿತ ಕೇಳಿದ
ನನ್ನ ತಂಗಿ ಈಗ ಸ್ವಲ್ಪ ಸಮಯದ ಮೊದಲು ಹೇಳಿದಳು ಅವಳ ತಂದೆಯೂ ತೀರಿಕೊಂಡರಂತೆ..ಅದಕ್ಕೆ
೩ ಕೊರಿಯರ್ ಮಾಡಿ
ಅಂಚೆಯವ: ನಿಮಗೆ ಈ ಪತ್ರ ಕೊಡಲು ೫ ಮೈಲಿ ಬರಬೇಕಾಯ್ತು ಗೊತ್ತೇ?
ರಾಂಪ: ಹಾಗಿದ್ದಲ್ಲಿ ನೀವು ಅದನ್ನ ಕೊರಿಯರ್ ಮಾಡಬಹುದಿತ್ತಲ್ಲಾ?
೪ ಸ್ವರ ಕೇಳ್ತಾ ಇಲ್ಲ
ರಾಂಪ: ಮೊನ್ನೆ ನನ್ನ ಹ್ಹೆಂಡತಿ ಬಾವಿಗೆ ಬಿದ್ದಳು, ಜೋರಲ್ಲಿ ಕೂಗುತ್ತಿದ್ದಳು
ಗಾಂಪ: ಹೌದಾ ಹೇಗಿದ್ದಾಳೆ ಅವಳು?
ರಾಂಪ: ಸರಿ ಹೋಗಿರಬೇಕು, ಯಾಕೆಂದರೆ ನಿನ್ನೆಯಿಂದ ಸ್ವರ ಕೇಳ್ತಾ ಇಲ್ಲ
೫. ಮೂಕ ತ್ಯಾಂಪ
ತ್ಯಾಂಪನೊಮ್ಮೆ ತನ್ನ ನಾಯಿಯನ್ನು ಅಡ್ಡಾಡಲು ಕೊಂಡು ಹೋಗುತ್ತಿದ್ದ. ಬಿಳಿಯ ಚೆಂದದ ಚೂಟಿಯನ್ನು ಮುದ್ದು ಮಾಡಲು ಘಟಾಣಿಯೊಬ್ಬಳು ಹತ್ತಿರ ಬಂದಳು. ಅದನ್ನ ಮುಟ್ಟ ಬೇಡಿ ಕಚ್ಚುತ್ತೆ, ಅಂತ ಅವನು ಹೇಳುತ್ತಿರುವಾಗಲೇ, ಅದನ್ನು ಕೇಳದೇ ಕಚ್ಚಿಸಿಕೊಂಡಳು. ಲಬೋ ಲಬೋ ಅನ್ನುತ್ತಿದ್ದ ಅವಳ ಬಾಯಿಗೆ ಅಕ್ಕಪಕ್ಕದವರೆಲ್ಲಾ ಸೇರುವುದನ್ನು ನೋಡಿದ ತ್ಯಾಂಪ ಕೆಲಸ ಕೆಟ್ಟಿತೆಂದುಕೊಂಡ. ಅವರೆಲ್ಲಾ ಏನು ಕೇಳಿದರೂ ಉತ್ತರ ಕೊಡದೇ ಬ್ಯಾ ಬ್ಯಾ ಎಂತ ಮೂಕನ ಅಭಿನಯ ಮಾಡತೊಡಗಿದ. ಜನರೆಲ್ಲ "ಹೋ ಇವನೊಬ್ಬ ಮೂಕ ಪಾಪ "ಎನ್ನಲು ತೊಡಗಿದರು.
ಅದನ್ನ ನೋಡಿದ ಘಟಾಣಿ "ಇಲ್ಲ ಇಲ್ಲ ಇವರು ಚೆನ್ನಾಗಿಯೇ ಮಾತನಾಡುತ್ತಿದ್ದರು, ನನಗೆ ಹತ್ತಿರ ಬರಬೇಡಿ ನಾಯಿ ಕಚ್ಚುತ್ತೆ ಎಂದಿದ್ದರು" ಎಂದಳು.
"ಹಾಗಿದ್ದಲ್ಲಿ ಯಾಕೆ ನಾಯಿ ಮುಟ್ಟಲು ಹೋದಿರಿ" ಎಂದು ಹೇಳಿ ನಗುತ್ತಾ ಚದುರಿದರು. ತ್ಯಾಂಪ ಬದುಕಿದೆಯಾ ಬಡ ಜೀವವೇ ಎಂದುಕೊಂಡು ಹಿಂದಿರುಗಿದ.
Comments
ಉ: ಸ್ವರ ಕೇಳ್ತಾ ಇಲ್ಲ
In reply to ಉ: ಸ್ವರ ಕೇಳ್ತಾ ಇಲ್ಲ by P.Ashwini
ಉ: ಸ್ವರ ಕೇಳ್ತಾ ಇಲ್ಲ
ಉ: ಸ್ವರ ಕೇಳ್ತಾ ಇಲ್ಲ
In reply to ಉ: ಸ್ವರ ಕೇಳ್ತಾ ಇಲ್ಲ by prasannasp
ಉ: ಸ್ವರ ಕೇಳ್ತಾ ಇಲ್ಲ
ಉ: ಸ್ವರ ಕೇಳ್ತಾ ಇಲ್ಲ
In reply to ಉ: ಸ್ವರ ಕೇಳ್ತಾ ಇಲ್ಲ by santhosh_87
ಉ: ಸ್ವರ ಕೇಳ್ತಾ ಇಲ್ಲ
In reply to ಉ: ಸ್ವರ ಕೇಳ್ತಾ ಇಲ್ಲ by santhosh_87
ಉ: ಸ್ವರ ಕೇಳ್ತಾ ಇಲ್ಲ
In reply to ಉ: ಸ್ವರ ಕೇಳ್ತಾ ಇಲ್ಲ by santhosh_87
ಉ: ಸ್ವರ ಕೇಳ್ತಾ ಇಲ್ಲ
ಉ: ಸ್ವರ ಕೇಳ್ತಾ ಇಲ್ಲ
In reply to ಉ: ಸ್ವರ ಕೇಳ್ತಾ ಇಲ್ಲ by kavinagaraj
ಉ: ಸ್ವರ ಕೇಳ್ತಾ ಇಲ್ಲ
ಉ: ಸ್ವರ ಕೇಳ್ತಾ ಇಲ್ಲ
In reply to ಉ: ಸ್ವರ ಕೇಳ್ತಾ ಇಲ್ಲ by raghusp
ಉ: ಸ್ವರ ಕೇಳ್ತಾ ಇಲ್ಲ