ಮೊಬೈಲಾಯಣ - ಹಲೋ
ನಮ್ಮೂರು ಗೌಡಪ್ಪಂಗೆ ಬರೀ ಲ್ಯಾಂಡ್ ಲೈನಾಗೆ ಮಾತಾಡೀ ಅಭ್ಯಾಸ. ಹಳ್ಳಿ ಕಡೆ ಲೈನ್ ಸರಿ ಇಲ್ದೇ ಇರೋದ್ರಿಂದ ಜೋರಾಗಿ ಕೂಗ್ತಿದ್ದ. ಕೆಲವೊಂದು ಸಾರಿ ಅವನ ಮನೆಗೆ ಏನೋ ಗಲಾಟೆ ನಡೀತಾ ಐತೆ ಅಂತಾ ಮನೆ ಮುಂದೆ ಜನ ಸೇರಿದ್ದು ಐತೆ. ಅವನ ಹೆಂಡರು, ಏ ಥೂ ಅದೇನ್ ಬಡ್ಕತ್ತಿ. ಅಲ್ಲೇ ಹೋಗಿ ಹೇಳ್ ಬರ್ ಬಾರದಾ ಅಂದಿದ್ದೂ ಐತೆ. ಮಗಂಗೆ ಹಿಂಗೆ ಕೂಗಿ ಕೂಗಿ ಎರಡು ದಪ ಎದೆ ನೋವು ಬಂದು ಆಸ್ಪತ್ರಗೆ ಸೇರಿದ್ದ. ಇವನ ಪರಿಸ್ಥಿತಿ ನೋಡಲಾರದೆ ಟೆಲಿಪೋನ್ ಎಕ್ಸ್ ಚೇಂಜ್ನೋರೆ ಟೆಲಿಪೋನ್ ಡಿಸ್ ಕನೆಕ್ಟ್ ಮಾಡವ್ರೆ. ತೆಗಿಯಕ್ಕೆ 500ರೂಪಾಯಿ ಬೇರೆ ಕೊಟ್ಟಿದ್ದ. ಈಗ ಗೌಡನ ಮಗಳನ್ನ ಬೆಂಗಳೂರಿಗೆ ಕೊಟ್ಟು ಮದುವೆ ಮಾಡವ್ನೆ.
ಯಾವಾಗಲೂ ಈಗ ಜೋಬನಾಗೆ ಒಂದು ಮೊಬೈಲ್. ಅದು ಯಾವಾಗ ಬಡ್ಕಂತತೋ ಇವನು ಯಾವಾಗ ಎತ್ತುತಾನೋ ಆ ದೇವರಿಗೇ ಗೊತ್ತು.ನಿಂಗನ ಅಂಗಡೀಲಿ ಎಲ್ಲಾ ಚಾ ಕುಡೀತಾ ಕೂತಿದ್ವಿ. ಇದ್ದಕ್ಕಿದ್ದಂಗೆ ಗೌಡಪ್ಪ ನಡುಗುತ್ತಾ ಟೀ ನಾ ಸುಬ್ಬನ ಮ್ಯಾಕೆ ಚೆಲ್ಲಿದ. ಯಾಕ್ರೀ ಗೌಡ್ರೆ ಅಂದ್ರೆ. ಒಳಗಿರೋ ಮೊಬೈಲ್ ವೈಬ್ರೇಟಿಂಗ್ ಮೋಡ್ ನಲ್ಲಿತ್ತು. ಏ ಥೂ ಅಂದಾ ಸುಬ್ಬ. ಸರಿ ಗೌಡಪ್ಪ ಎತ್ಕಂಡು. ನಮ್ಮೆದುರಿಗೆ ಮಗಂದು ಪೋಸ್ ಬೇರೆ.
ಗೌಡಪ್ಪ : ಹಲೋ, ಯಾರಲಾ ಅದು
ಆ ಕಡೆಯಿಂದ : ಸರ್ ನಾವು ಐ.ಸಿ.ಐ.ಸಿ. ಬ್ಯಾಂಕ್ ನವರು ಲೋನ್ ಏನಾದ್ರೂ ಬೇಕಾಗಿತ್ತಾ (ಸಿಗ್ನಲ್ ವೀಕ್)
ಗೌಡಪ್ಪ : ಏನಲಾ ಸೀನ. ಹೆಂಗಿದಿಯಲಾ, ಬೆಳಗ್ಗೆ ಕೆರೆತಾವ ಹೋಗಿದ್ದೇಯನಲಾ. ಸರಿ ಹೆಂಗವ್ಳೆ ನಿನ್ನ ಹೆಂಡರು.
ಆ ಕಡೆಯಿಂದ : ಸರ್ ನಾವು ಬ್ಯಾಂಕಿನವರು, ಸೀನ ಅಲ್ಲಾ
ಗೌಡಪ್ಪ : ಅಯ್ಯೋ ಬಡ್ಡೆ ಐದ್ನೆ. ಯಾವಾಗ ಬತ್ತೀಯಲಾ ಊರಿಗೆ
ಆ ಕಡೆಯಿಂದ : ಅಯ್ಯೋ ನಿನ್ ಮುಖಕ್ಕೆ ದೋಸೆ ಹುಯ್ಯಾ. ತಮಾಸೆ ಮಾಡ್ತೀಯಾ. ಮಗನೆ ನಿಮ್ಮ ಹಳ್ಳಿಗೆ ಬಂದು ನೋಡ್ಕೊತೀನಿ ಮಗನೆ.
ಗೌಡಪ್ಪ ಪೋನ್ ಕಟ್ ಮಾಡಿ. ಆ ಕಡೆ ಈ ಕಡೆ ನೋಡಿ ಜೋಬ್ನಾಗೆ ಮಡಿಕಂಡ. ಅಟ್ಟೊತ್ತಿಗೆ ಸುಬ್ಬ, ಗೌಡ್ರೆ ನಾನೊಂದು ಪೋನ್ ಮಾತ್ತೀನಿ ಕೊಡ್ರಿ ಅಂದ. ಕೊಟ್ಟ ಮ್ಯಾಕೆ. ಮೊಬೈಲನ್ನು ಪೇಪರ್ನಾಗೆ ಒರೆಸಿ. ಅದಕ್ಕೆ ಊದಬತ್ತಿ ಹೊಗೆ ಹಿಡಿದ. ಯಾಕಲಾ ಸುಬ್ಬ. ಕೆಟ್ಟ ವಾಸನೆ ಕಲಾ. ಒಂದ್ ಕಡೆ ಬಾಯಿಂದು ಮತ್ತೊಂದು ಕಡೆ ಕಿವಿದು ದರಿದ್ರ ವಾಸನೆ. ಮಗಾ ಸತ್ತರೆ ಒಂದು ಲೋಡ್ ವಾಸು ಅಗರಬ್ಬತ್ತಾಗೆ ಸುಡಬೇಕು ಅಂದ. ನಿಂಗನ ಅಂಗಡಿ ಹಿತ್ತಲೆ ಕಡೆ ಹೋದೋನು ಅರ್ಧ ಗಂಟೆ ಆದ್ ಮ್ಯಾಕೆ ಬಂದ. ನೋಡಿದ್ರೆ 200ರೂ ಇದ್ದಿದ್ದು ಬ್ಯಾಲೆನ್ಸ್ ಸೊನ್ನೆ ಆಗಿತ್ತು. ಸುಬ್ಬ ಯಾರಿಗಲಾ ಇಟ್ಟೊಂದು ಮಾತಾಡೀಯಾ ಅಂದೆ. ಮಗಾ ಬಾಂಬೆಗೆ ಪೋನ್ ಮಾಡಿ ಜ್ಯೋತಿಷ್ಯ ಕೇಳವ್ನೆ. ಗೌಡಪ್ಪಂಗೆ ಇಂಗ್ಲೀಷ್ ಬರದೇ ಹೋದರೂ ಸ್ಟೈಲಾಗಿ ಇಟ್ಕಂಡು, ಹಲೋ ಹೇಳಿ ಸರ್ ಅನ್ನೋನು.
ಗೌಡರೆ ಪೋನ್ ಬಂತು.ಹಲೋ. ಸಾರ್ ಇದು ದೋಬಿ ಅಂಗಡಿನಾ. ಯಾಕಪ್ಪಾ, ಮನ್ಯಾಗಿನ ಹೆಂಡರು ಷಾಮಿಯಾನ ತಂದು ಕೊಡಬೇಕಾಗಿತ್ತು. ಹೆಂಡರು ಷಾಮಿಯಾನ. ಅಂಗಡಿ ಹೆಸರಾ. ಅಲ್ಲಾ ನನ್ನ ಹೆಂಡರು ದಪ್ಪ ಇದ್ದಾಳೆ, ಲಂಗ ಅಷ್ಟು ಅಗಲ ಐತೆ ಸರ್. ಮಡಗಲಾ ಪೋನ್. ಮತ್ತೆ ಇನ್ನೊಂದು ಪೋನ್. ಹಲೋ ಸಾರ್ ಇದು ಮುನ್ಸಿಪಾಲ್ಟಿನಾ. ಯಾಕವ್ವಾ, ನಮ್ಮ ಮನೆ ಮುಂದೆ ಚೆರಂಡಿ ಕಟ್ಟಿದೆ ಬರ್ತೀರಾ. ಇಡವ್ವಾ ಪೋನ್. ಹಲೋ ಸರ್. ಇದು ವೈನ್ ಷಾಪ. ಯಾಕಪ್ಪಾ. ಒಂದು ನಾಕು ಬೀರ್ ಮನೆಗೆ ಕಳಿಸ್ತೀರಾ. ಮಡಗಲಾ ಅಂದ ಗೌಡಪ್ಪ. ಏನಲಾ ಕೋಮಲ್ ಬರೇ ರಾಂಗ್ ನಂಬರೇ ಬತ್ತದಲ್ಲೋ ಅಂದಾ. ಅದು ಅಂಗೇ ಗೌಡ್ರೆ, ಅವರು ಬಿಸಿ ಇದ್ದರೆ ನಿಮಗೆ ಬತ್ತದೆ ಅಂದೆ. ಓಹ್ ಅಂಗಾ. ಅಟ್ಟೊತ್ತಿಗೆ ಮತ್ತೊಂದು ಪೋನ್. ಹಲೋ ಲೇ ನಿನ್ನ ಹೆಂಡರನ್ನ ಬೇಗ ಕಳಿಸು. ಇಲ್ಲಾ ಅಂದ್ರೆ ಸಂಬಳ ಕಟ್ ಮಾತ್ತೀನಿ. ಲೇ ಮಗನೇ ಯಾವನಲಾ ನೀನು. ನಮ್ಮ ಮನೆ ಕೆಲದೋಳು ರಂಗಿ ಮನೆ ಪೋನ್ ಅಲ್ವಾ. ಇಡಲಾ ಪೋನ್ ಅಂದಿ ಸಿಟ್ಟಿಗೆ ಎಸ್ದ. ಅದು ನಿಂಗನ ಟೀನಾಗೆ ಬಿತ್ತು. ಅದನ್ನು ಒಣಗಿಸಿ ಮತ್ತೆ ಗೌಡಪ್ಪಂಗೆ ಕೊಟ್ವಿ. ಈಗ ಮಾತಾಡಬೇಕಾದ್ರೆ ಮೊಬೂಲ್ ನಿಂದ ಇರುವೆ ಬತ್ತದೆ. ಟೀ ಸಕ್ಕರೆಗೆ. ಗೌಡಪ್ಪಂಗೆ ಪೋನ್ ಬಂದ್ರೆ ಜನಾ ಎಲ್ಲಾ ಬೈಯ್ಯೋವು. ಮಗಾ ಮೈಕ್ ನಾಗೆ ಮಾತನಾಡಿದಂಗೆ ಮಾತಾಡೋನು. ಇಡೀ ಊರಿಗೆ ಕೇಳೋದು. ಟಾಕೀಸ್ನಾಗೆ ಹಿಂಗೆ ಮಾತಾಡಿ. ಧರ್ಮದೇಟು ತಿಂದು ಬಂದಿದ್ದ.
ರಾತ್ರಿ ಚಾರ್ಜಿಗೆ ಹಾಕಿದರೆ ಬೆಳಗ್ಗೆ ಎಟ್ಟೊತ್ತಿಗೋ ತೆಗೆಯೋನು. ವಾರಕ್ಕೆ ಮೂರು ದಪ ಬ್ಯಾಟರಿ ಚೇಂಜ್. ಮೊಬೈಲ್ನಾಗೆ ಇದ್ದಿದ್ದೆಲ್ಲಾ ಬರೀ ಕೆಟ್ಟ ಚಿತ್ರಗಳೆ. ಸ್ಕ್ರೀನ್ ಟಚ್ ಅಂತಾ ಚಕ್ಕೆಲ್ಲಿ ಚುಚ್ಚೋನು. ಮೊಬೈಲ್ ಫುಲ್ ಸ್ಕ್ರಾಚ್ ಆಗಿತ್ತು. ಯಾರಾದರೂ ನೋಡಿದರೆ ಸಾಕು. ಮೊಬೈಲ್ ಎತ್ತಿ ಕಿವಿಗೆ ಮಡಗೋನು. ಸಣ್ಣ ಐಕ್ಳು, ನೋಡಲಾ ನಮ್ಮ ಗೌಡಪ್ಪನ ಕಿವ್ಯಾಗೆ ಬಾಳ ಗುಗ್ಗೆ ಇರಬೇಕು ಅದಕ್ಕೆ ಅವಾಗವಾಗ ಕೈ ಮಡಿಕಂತಾನೆ ಅನ್ನೋವು.
ಒಂದು ದಿನ ಅವನ ಮಗಳು ಪೋನ್ ಮಾಡಿ. ಅಪ್ಪಾ ನಮ್ಮ ಯಜಮಾನರು ಗಾಂಜಾ ಮಾರಾಟ ಮಾಡಿ. ಜೈಲಿಗೆ ಹೋಗಿದಾರೆ. ಯಾರಿಗೂ ಹೇಳಬೇಡ ಅಂದ್ಲು. ಏನು ನಿನ್ನ ಗಂಡ ಜೈಲಿಗೆ ಹೋಗಿದಾನಾ ಅಂತಾ ಪೋನಾಗೆ ಬೊಂಬಡಿ ಹೊಡ್ಕಂಡ. ಇಡೀ ಮೂರು ಕೇರಿಗೂ ಈ ವಿಸಯ ಗೊತ್ತಾಗಿದ್ದೇ ತಡ. ಗೌಡಪ್ಪನ ಅಳಿಯ ಜೈಲಿಗೆ ಹೋಗವ್ನಂತೆ. ಬೆಳಗ್ಗೆ ಗೌಡಪ್ಪ ಡಲ್ ಆಗಿದ್ದ. ಯಾಕ್ರೀ ಗೌಡರೆ. ಮೊಬೈಲ್ಗೆ ಒಂದಿಷ್ಟು ಬೆಂಕಿಹಾಕ. ನನ್ನ ಮಗಳು ಜೀವನ ನಾನೇ ಹಾಳು ಮಾಡದಂಗೆ ಆಯ್ತು ಅಂತಾ ಮೊಬೈಲ್ ನ ಬೆಂಕಿಗೆ ಹಾಕದೆ ಕನಲಾ ಅಂದ. ಈಗ ಮೊಬೈಲ್ ಅಂದ್ರೆ ಸಾಕು. ಗೌಡಪ್ಪ ಅಂಗೇ ರೈಸ್ ಆಗ್ತಾನೆ. ಎಲ್ಲಲಾ ಮಚ್ಚು ಅಂತಾನೆ.
Comments
ಉ: ಮೊಬೈಲಾಯಣ - ಹಲೋ
ಉ: ಮೊಬೈಲಾಯಣ - ಹಲೋ
ಉ: ಮೊಬೈಲಾಯಣ - ಹಲೋ
In reply to ಉ: ಮೊಬೈಲಾಯಣ - ಹಲೋ by Indushree
ಉ: ಮೊಬೈಲಾಯಣ - ಹಲೋ
In reply to ಉ: ಮೊಬೈಲಾಯಣ - ಹಲೋ by prasannasp
ಉ: ಮೊಬೈಲಾಯಣ - ಹಲೋ
In reply to ಉ: ಮೊಬೈಲಾಯಣ - ಹಲೋ by suresh nadig
ಉ: ಮೊಬೈಲಾಯಣ - ಹಲೋ
ಉ: ಮೊಬೈಲಾಯಣ - ಹಲೋ
In reply to ಉ: ಮೊಬೈಲಾಯಣ - ಹಲೋ by kavinagaraj
ಉ: ಮೊಬೈಲಾಯಣ - ಹಲೋ
ಉ: ಮೊಬೈಲಾಯಣ - ಹಲೋ
In reply to ಉ: ಮೊಬೈಲಾಯಣ - ಹಲೋ by gopinatha
ಉ: ಮೊಬೈಲಾಯಣ - ಹಲೋ