ಬಿಡುವಿನ ವೇಳೆಯಲ್ಲಿ ಹೆಗ್ಗೋಡಿಗೆ ಹೋದಾಗ
ನಿನ್ನೆ ಗುರುವಾರ ಸ್ವಲ್ಪ ಬಿಡುವು ಮಾಡಿಕೊಂಡು ಹೆಗ್ಗೋಡಿಗೆ ಹೊರಟಾಗ ಮದ್ಯಾಹ್ನ ಒಂದು ಗಂಟೆ. ಗೆಳೆಯ ಪುರುಷೋತ್ತಮ ತಲವಾಟ ಅವರು ನೀನಾಸಮ್ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಪ್ರಸಾದನ ತರಗತಿ ನಡೆಸಲೆಂದು ಹೋಗುವವರಿದ್ದರು ಅವರ ಬೈಕ್ ನಲ್ಲಿ ಹಿಂಬದಿ ಸವಾರನಾಗಿ ಹೋಗುವಾಗಲೇ ಹಾದಿ ಮಧ್ಯದಲ್ಲಿ ಅಪರೂಪದ ಗೋಸುಂಬೆ ಅಥವಾ ಗೋದಿನಾಗವೊಂದು ದೇಹವನ್ನು ಎತ್ತರಕ್ಕೆ ಉಬ್ಬಿಸಿ ಬಾಲವನ್ನು ಚಕ್ಕುಲಿಯಂತೆ ಸುತ್ತಿಕೊಂಡು ಇರುವುದು ಕಂಡಿತು ಬೈಕ್ ನಿಲ್ಲಿಸಿ ನೋಡುವ ಹತ್ತಿರ ಹೋಗಿ ನೋಡುವಾಗ ಅದು ನಮ್ಮನ್ನು ನೋಡಿದ್ದೇ ನಮ್ಮಮೇಲೆರಗುವಂತೆ ಗರ್ ಕೂಗುತ್ತ ಬಾಲ
ನಿಮಿರಿಕೊಂಡು ನಮ್ಮನ್ನು ನೋಡಲು ಶುರು ಹಚ್ಚಿಕೊಂಡಿತು. ಆದರೂ ಬಿಡದೆ ಅದರ ಕೆಲವು ಫೋಟೋಗಳನ್ನು ನನಗೆ ಬಂದಂತೆ ಕ್ಲಿಕ್ಕಿಸಿಕೊಂಡೆ. ನೋಡು ನೋಡುವಷ್ಟರಲ್ಲಿಯೇ ಕಂಡು ಹಾದಿಯಲ್ಲಿ ಹೋಗುವ ರಥಿಕರೆಲ್ಲ ನಿಂತು ತಮ್ಮ ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆಯಲು ಪ್ರಾರಂಭಿಸಿದರು, ಅದು ಕಚ್ಚುತ್ತದೆ. ಅದನ್ನು ಸಾಯಿಸಬೇಕು ಇತ್ಯಾದಿಯಾಗಿ ಮಾತನಾಡುತ್ತಾ, ಅದನ್ನು ಕೋಲು ಕಡ್ಡಿಗಳಿಂದ ಮುಟ್ಟಲು ಪ್ರಾರಂಭಿಸಿದ
ರು. ಅಷ್ಟರ
ಲ್ಲಿ ನಾವು ಅದು ಕಚ್ಚುವುದಿಲ್ಲ, ಪಾಪದ ಪ್ರಾಣಿ ಎಂದು ನಾವು ಪಂಡಿತರಂತೆ ಹೇಳಿ ಅವರನ್ನು ನಂಬಿಸಿದೆವು. ಹಾಗೆ ಅದು ಡಾಂಬರು ರಸ್ತೆಯ ಪಕ್ಕಕ್ಕೆ ಸರಿಯಲು ಪ್ರಯತ್ನಿಸುತ್ತಿತ್ತು ಒಂದು ಕಾಲಿಗೆ ಪೆಟ್ಟಾಗಿತ್ತೆನಿಸುತ್ತಿದೆ ಸ್ವಲ್ಪ ಕುಂಟುತ್ತಿತ್ತು.
ನಂತರ ಹೆಗ್ಗೋಡಿಗೆ ಹೋದ ನಂತರ
ಅಲ್ಲಿಯ ರಂಗ ಶಿಕ್ಷಣ ಕೇಂದ್ರದ ಪ್ರಸಾದನ ತರಗತಿಯನ್ನು ನೋಡುವ ಅವಕಾಶವೂ ಸಿಕ್ಕಿತು. ತರಬೇತು ದಾರ ಪುರುಷೋತ್ತಮ ತಲವಾಟ
ಪ್ರಾತ್ಯಕ್ಷಿಕೆ ನಡೆಸಿ
ದ
ನಂತರ ವಿದ್ಯಾರ್ಥ ಗಳು
ತಮ್ಮ ಕಲ್ಪನೆಗೆ ತಕ್ಕಂತೆ ಒಬ್ಬರು ಮತ್ತೊಬ್ಬರ ಮುಖಕ್ಕೆ ಬಣ್ಣ ಹಚ್ಚಿ ಅಭ್ಯಾಸದಲ್ಲಿ ತೊಡಗಿದ್ದಾಗ ಒಬ್ಬೊಬ್ಬರೂ ಮತ್ತೊಬ್ಬರಾಗಿ ಪರಿವರ್ತನೆ ಗೊಂಡುದನ್ನು ಅಲ್ಲಿನ ಕೆಲವು ಸನ್ನಿವೇಶಗಳ ಫೋಟೋ ತೆಗೆದು ಇಲ್ಲಿ ಇರಿಸುತ್ತಿದ್ದೇನೆ.
Comments
ಉ: ಬಿಡುವಿನ ವೇಳೆಯಲ್ಲಿ ಹೆಗ್ಗೋಡಿಗೆ ಹೋದಾಗ
ಉ: ಬಿಡುವಿನ ವೇಳೆಯಲ್ಲಿ ಹೆಗ್ಗೋಡಿಗೆ ಹೋದಾಗ
ಉ: ಬಿಡುವಿನ ವೇಳೆಯಲ್ಲಿ ಹೆಗ್ಗೋಡಿಗೆ ಹೋದಾಗ
ಉ: ಬಿಡುವಿನ ವೇಳೆಯಲ್ಲಿ ಹೆಗ್ಗೋಡಿಗೆ ಹೋದಾಗ
In reply to ಉ: ಬಿಡುವಿನ ವೇಳೆಯಲ್ಲಿ ಹೆಗ್ಗೋಡಿಗೆ ಹೋದಾಗ by kavinagaraj
ಉ: ಬಿಡುವಿನ ವೇಳೆಯಲ್ಲಿ ಹೆಗ್ಗೋಡಿಗೆ ಹೋದಾಗ
In reply to ಉ: ಬಿಡುವಿನ ವೇಳೆಯಲ್ಲಿ ಹೆಗ್ಗೋಡಿಗೆ ಹೋದಾಗ by komal kumar1231
ಉ: ಬಿಡುವಿನ ವೇಳೆಯಲ್ಲಿ ಹೆಗ್ಗೋಡಿಗೆ ಹೋದಾಗ