ಕ್ಯಾಕರಿಸಿ ಉಗುಳುವ ಮುನ್ನ..

ಕ್ಯಾಕರಿಸಿ ಉಗುಳುವ ಮುನ್ನ..

“ಇಲ್ಲಿ ಉಗುಳಬಾರದು…! ” ಈ ಬೋರ್ಡ್ ಇದ್ದಲ್ಲಿ ಉಗುಳಬಾರದು ಅಲ್ವಾ…?. ಹಾಗೆಂದು ಬೋರ್ಡ್ ಇಲ್ಲ ಎಂದಲ್ಲೆಲ್ಲಾ ಉಗುಳಲೇ..ಬೇಕು ಎಂದಲ್ಲ! ಇದು ಸ್ಥಳಗಳ ವಿಷಯವಾಯಿತು,ಇಲ್ಲಿ ಅಲ್ಲಿ ಉಗುಳಬಾರದೆಂದು. ಚಲಿಸುತ್ತಿರುವ ವಾಹನಗಳಿಂದ ತಲೆ ಹೊರಗೆ ಹಾಕಿ ಕ್ಯಾಕರಿಸಿ ಉಗುಳುವುದಕ್ಕೆ ನಿಷೇಧ ಹಾಕೋದಾದ್ರು ಹೇಗೆ??

ಮೊನ್ನೆ ಬೈಕ್ ನಲ್ಲಿ ಸಂಚರಿಸುತ್ತಿರುವಾಗ ಬೆಂಗಳೂರು ಟ್ರಾಫಿಕ್ ಗೊತ್ತಿದೆ ತಾನೆ.. ವಾಹನ ಇಲ್ಲದೆ ರಸ್ತೆ  ಖಾಲಿ ಹೊಡೆಯೋದು ಕಾಣೋದೇ ಇಲ್ಲ. ಇಂಥ ರಸ್ತೆಯಲ್ಲಿ ಬೆಂಗಳೂರು ಸಿಟಿ ಬಸ್, ಅದರಲ್ಲಿ ಕೂತವರ್ಯಾರೋ ತಲೆ ಹೊರಗೆ ಹಾಕಿ ಕ್ಯಾಕರಿಸಿ ಉಗುಳಿದರು ನೋಡಿ.. ನಮ್ಗೆ ಅದರ ಅಭಿಷೇಕ!! ಗಲೀಜು, ಅಸಹ್ಯ ಅನಿಸ್ತಿದೆ ಅಲ್ವಾ? ಉಗಿದವರಿಗೆ ಏನೂ ಅನ್ಸಿರ್ಲಿಕ್ಕಿಲ್ಲ ಬಿಡಿ!. ಕತ್ತು ಹೊರಗಡೆ ಹಾಕದಿದ್ರೂ, ಅಟ್ಲೀಸ್ಟ್ ಕಣ್ಣಾದ್ರು ಹೊರಗೆ ಹಾದು ಹೋಗುವಾಗ ಕಾಣಿಸುವುದಿಲ್ವಾ  ವಾಹನಗಳು ಬರ್ತಿರೋದು ಪಾದ ಚಾರಿಗಳು ಓಡಾಡ್ತಿರೋಡು?!! ನಾಲಕ್ಕು ಬೈಯೋಣ ಅಂದ್ರೆ ರೆಡ್ ಹೋಗಿ ಗ್ರೀನ್ ಆಯ್ತು! ಆ ಬಸ್ ಎಲ್ಲೋ ತಪ್ಪಿಸಿಕೊಂಡಿತು.
*****

ಪಾಪ! ಪುಟ್ಟ ಹುಡುಗಿ ಶಾಲೆಗೆ ಹೋಗುತ್ತಿದ್ದಳು.. ಬಿಳಿಯ ರವಿಕೆ ,ನೀಲಿ ಲಂಗ. ಬೆಳ್ಳಗೆ ಹೊಳೆಯುತ್ತಿದ್ದ ಆ ರವಕೆ,ಉದ್ದನೆಯ ಲಂಗ ಪುಟ್ಟ ಹೆಜ್ಜೆ… ಅವಳನ್ನೇ ಗಮನಿಸ್ತಾ ಇದ್ದೆ.. ಅಷ್ಟು ಹೊತ್ತಿಗೆ ನನ್ನ ನೋಟಕ್ಕೆ ಅಡ್ಡವಾಗಿ ಅವಳ ಪಕ್ಕದಲ್ಲೇ ಬಸ್ ಪಾಸ್ ಆಯ್ತು. ನೋಡ್ತೀನಿ.. ಬಿಳಿ ರವಿಕೆಯಲ್ಲಿ ಪೂರ್ತಿಯಾಗಿ ರಕ್ತದ ಕಲೆಯಂತೆ ಕೆಂಪು ಬಣ್ಣ ಹರಡಿತ್ತು.. ಆ ಪುಟ್ಟ ಹುಡುಗಿಗಂತೂ ದುಃಖ ಉಕ್ಕಿ ಬಂದು, ಜೋರಾಗಿ ಅಳಲಾರಂಭಿಸಿತು. ಸ್ನೇಹಿತೆಯರಿಬ್ಬರು ಅಲ್ಲಿಗೆ ಬಂದು ಅವಳನ್ನು ಬಂದ ದಾರಿಯಲ್ಲೇ ತಿರುಗಿ ಕರ್ಕೊಂಡು ಹೋದ್ರು.. ಹೇಗಾಯಿತು ಆ ಕೆಂಪುಬಣ್ಣ? ಎಂದು ಯೋಚಿಸುವಾಗ ಅಲ್ಲೇ ಪಕ್ಕದಲ್ಲಿ ನಿಂತಿದ್ದವರಲ್ಲಿ ಒಬ್ಬರು ಚೆನ್ನಾಗಿ ಎಲೆ ಅಡಕೆ ಜಗಿದು ಪಕ್ಕದಲ್ಲೇ ಸ್ಟೈಲ್ ಆಗಿ ಬೀಡಿ ಎಳೆಯುವ ರೀತಿ ಎರಡು ಬೆರಳನ್ನಿಟ್ಟು ” ಪುಚಕ್” ಎಂದು ಉಗುಳಿದರು ನೋಡಿ.. ನೆಲವೆಲ್ಲಾ ಕೆಂಪು ಕೆಂಪು!! ಓಹ್ ಇನ್ನು  ಬಿಳಿಯ ರವಿಕೆ ಕೆಂಪಾಗದಿರುತ್ತದೆಯೇ??


ಈ ರೀತಿ ವಾಹನಗಳಿಂದ ಕ್ಯಾಕರಿಸಿ ಉಗಿಯುವುದಕ್ಕೆ ಕಡಿವಾಣ ಹಾಕೋದಾದ್ರೂ ಹೇಗೇ??!!


ನಲ್ಮೆಯಿಂದ

ದಿವ್ಯ

ಚಿತ್ರ ಕೃಪೆ: http://image.spreadshirt.net

Rating
No votes yet

Comments