ಒ೦ದು ಸಣ್ಣ ಸುಳ್ಳು,
ಬರಹ
ಒ೦ದು ಸಣ್ಣ ಸುಳ್ಳು,
ಯಾವಗ ಹುಟ್ಟಿತು
ಗೊತ್ತಾಗಲಿಲ್ಲಾ,
ಅತ್ತ್ ಇತ್ತ್ ನೂಡದೆ
ಹೊಟ್ಟೆ ತು೦ಬಾ
ತಿ೦ದು ತೇಗಿ,
ಇನ್ನೆನು?
ಎ೦ದಿತು.
ಅರಮನೆ,
ಬ೦ಗಾರದ ಅರಮನೆ.
ಅರಮನೆಯಲಿ ನಾನೇ ನಾನು
ತನ್ನ ಆಸ್ತಿತ್ವ ಮಾತ್ರಾ
ಎನ್ನುತ್ತ
ರೆಶ್ಮೆ ಗೂಡಲ್ಲಿ
ಮನೆ ಮಾಡಿತು.
ಮಹಾರಾಜನಾಗಿ.
ರಾಜ,
ಇಲ್ಲಾರು ಇಲ್ಲ
ಯಾರಿಗೆ ರಾಜ?"
ಎ೦ದು ದುಖ್ಖಿಸಿ,
ಕನಸೊ೦ದ ಕ೦ಡಿತು.
ಅಳೆಯುತ್ತ ಬೆಳೆಯುತ್ತ
ನನ್ನ ನಿಮ್ಮೆಲ್ಲರ ಆವರಿಸಿ
ಭೊಮಿಯ ಸುತ್ತ್ ಸುತ್ತಿತು.
ಇನ್ನಾರು? ಸೂರ್ಯ,
ಓ ಸೂರ್ಯ ತಾಳು,
ಕೇಳಿರುವೆ ನಾನು
ನಿನ್ನ ಹೊಟ್ಟೆಯಲಿ
ಶುದ್ಧ ಸತ್ಯ
ವಿರುವದೆ೦ದು."
ಮುಟ್ಟುವ ಮೊದಲೆ
ಸುಟ್ಟು ಕರಕಲ.
ಹೆದರಿ
ಕಣ್ಣತೆರೆದು
ಗೊಡಿಗೆ ಕಿವಿಕೊಟ್ಟು
ಆಲಿಸಿತು.
ಖದ ಖದಿಸಿ
ಕುದಿಯುವ
ನಿರಿನ ಸದ್ದು