"ಎಂದಿರನ್"
ಕನ್ನಡ ಚಲನಚಿತ್ರ ರಂಗದಿಂದ ತಮಿಳಿನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಅಲ್ಲಿನ ಚಿತ್ರ ರಸಿಕರ ಸೂಪರ್ ಸ್ಟಾರ್ ರಜನಿಕಾಂತ್ ರವರ ಮತ್ತೊಂದು ಅದ್ದೂರಿ ಚಿತ್ರ "ಎಂದಿರನ್" ಸದ್ಯದಲ್ಲೇ ತೆರೆ ಮೇಲೆ ಬರಲಿದ್ದು ಎಲ್ಲರಲ್ಲೂ ರಂಜಿಸಲಿದೆ.
ಸನ್ ಪಿಕ್ಚರ್ಸ್ ರವರ, ಶಂಕರ್ ನಿರ್ದೇಶನ, ರೆಹಮಾನ್ ಸಂಗೀತ,ಐಶ್ವರ್ಯ ರೈ ಸೇರಿದಂತೆ ಹಲವರ ದೊಡ್ಡ ತಾರಾಗಣದ ಚಿತ್ರ ಸಿದ್ದವಾಗಿದೆ. ಸುಮಾರು ಎರಡು ವರ್ಷಗಳ ಕಾಲ ವಿವಿಧ ದೇಶಗಳಲ್ಲಿ ಷೂಟಿಂಗ್ ನಡೆದಿದೆ.
165 ಕೋಟಿ ರೂಪಾಯಿಗಳು ಖರ್ಚಾಗಿದೆ. ಹಾಲಿವುಡ್ ಸ್ಟುಡಿಯೋಗಳಲ್ಲಿ ರೀ ರೆಕಾರ್ಡಿಂಗ್ ಹಾಗೇ ಅಲ್ಲಿನ ಕಲಾವಿದರನ್ನು ಬಳಸಿ ಸ್ಟಂಟ್ ಮಾಡಲಾಗಿದೆ. ಒಟ್ಟಾರೆಯಾಗಿ ಹಾಲಿವುಡ್ ಮಾದರಿಯಲ್ಲೇ ಚಿತ್ರ ಬಂದಿದೆ ಎನ್ನುವುದು ನಿರ್ದೇಶಕ ಶಂಕರವರ ಅಭಿಪ್ರಾಯ. ಇಂಡಿಯನ್, ಮುದಲವನ್, ಕಾದಲನ್, ಅನಿಯನ್, ಶಿವಾಜಿಯಂತಹ ಅದ್ದೂರಿ ಚಿತ್ರ ನೀಡಿರುವ ಶಂಕರ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಕ್ಲೈಮಾಕ್ಸ್ ಸೆಟ್ಗೆ ನೂರಾರು ಕೋಟಿ ವ್ಯಯಿಸಿದ್ದಾರೆ. ಇದರಲ್ಲಿ ನೂರಾರು ರೊಬೋಟ್ ಗಳೊಂದಿಗೆ ರಜನಿ ಹೊಡೆದಾಡುವ ದೃಶ್ಯ. ತಮಿಳುನಾಡಿನ ವೆಲ್ಲೂರು ಹಾಗೂ ಚೆನ್ನೈನಲ್ಲಿ ಸೆಟ್ ಹಾಕಲಾಗಿದೆ. ಇದಕ್ಕೆಂದೇ ಹಣ್ಣು,ತರಕಾರಿ ತಿನ್ನುವ ಮೂಲಕ 5ಕೆಜಿ ಭಾರ ಇಳಿಸಿದ್ದಾರಂತೆ. ಚಿತ್ರೀಕರಣ ಮುಗಿದ ನಂತರ ಐಶ್ವರ್ಯಾ ನಿರ್ದೇಶಕ ಮತ್ತು ರಜನಿಕಾಂತ್್ರ ಪಾದಗಳಿಗೆ ಎರಗಿದ್ದು, ಒಂದೆಡೆ ಆಶ್ಚರ್ಯ ಹಾಗೂ ಆಕೆಯ ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸಿದೆಯಂತೆ. ಇದೀಗ ಆಕೆಯನ್ನು ತಮಿಳಿನ ಚಿತ್ರರಂಗದ ಒಬ್ಬ ಸದಸ್ಯೆಯಾಗಿ ಸ್ವೀಕರಿಸಲಾಗಿದೆಯಂತೆ. ಈಗಾಗಲೆ ತಮಿಳು ನಾಡಿನಲ್ಲಿ ಇದರ ಬಗ್ಗೆ ದೊಡ್ಡ ಆಂದೋಲನವೇ ನಡಿಯುತ್ತಿದೆ. ಎಲ್ಲೆಂದರಲ್ಲಿ ರಜನಿಯ ಕಟೌಟ್ ಗಳು, ಬ್ಯಾನರ್ ಗಳದ್ದೇ ಭರಾಟೆ. ಹೀಗಾಗಿ ಚಿತ್ರ ಬಿಡುಗಡೆಯಾಗುವ ತಿಂಗಳು ಮುನ್ನ ನಂತರ ಬೇರೆ ಚಿತ್ರಗಳನ್ನು ಬಿಡುಗಡೆ ಮಾಡದಿದ್ದರೆ ಒಳ್ಳೆಯದು ಎನ್ನುವುದು ಅಲ್ಲಿನ ನಿರ್ಮಾಪಕರ ಅಭಿಪ್ರಾಯವಾಗಿದೆ. ಹಾಡಿನ ಸಿಡಿಯನ್ನು ಮಲೇಷಿಯಾದಲ್ಲಿ ಬಿಡುಗಡೆ ಮಾಡಲಾಯಿತು. ಇದೀಗ ಸಿಡಿಗಳು ಬಿಸಿ ಕೇಕ್ ನಂತೆ ಖರ್ಚಾಗುತ್ತಿದೆ. ಮಲೇಷಿಯಾ, ಸಿಂಗಪೂರ್, ಜಪಾನ್ ದೇಶಗಳಲ್ಲೂ ಭಾರೀ ಪ್ರಚಾರ ಪಡೆದಿದ್ದು. ಒಂದು ಭಾರತೀಯ ಸಿನಿಮಾ ಇಷ್ಟರ ಮಟ್ಟಿಗೆ ಜನರಲ್ಲಿ ಕುತೂಹಲ ಹುಟ್ಟಿಸುತ್ತದೆ ಎಂದರೆ ಆಶ್ಚರ್ಯ ಪಡಲೇಬೇಕು. ಅದರಲ್ಲೂ ಒಬ್ಬ ಕನ್ನಡಿಗ ಪ್ರಪಂಚದಾದ್ಯಂತ ಕೀರ್ತಿ ಪಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಬಾಬಾ ಹುಟ್ಟಿಸಿದ ಭರಾಟೆಯೇ ಇದೂ ಹುಟ್ಟಿಸಿದೆ. ಆದರೆ ಅದರಂತೆ ಪ್ರೇಕ್ಷಕನಿಗೆ ನಿರಾಸೆ ಹುಟ್ಟಿಸದಿದ್ದರೆ ಸಾಕು.
ಚಿತ್ರ ಕೃಪರ - ಅಂತರ್ ಜಾಲದಿಂದ ಪಡೆದಿದ್ದು.
Comments
ಉ: "ಎಂದಿರನ್"
ಉ: "ಎಂದಿರನ್"
ಉ: "ಎಂದಿರನ್"