ನಾವು, ಮಕ್ಕಳು, ನಮ್ಮ ಸಮಾಜ ಮತ್ತು ಭವಿಷ್ಯ
ನಾವು, ಮಕ್ಕಳು, ನಮ್ಮ ಸಮಾಜ, ಮತ್ತು ಭವಿಷ್ಯ
ನಮ್ಮ ಈಗಿನ ಯುವ ಜನಾಂಗದ ಎಲ್ಲಾ ರೀತಿಯ ಸಮಸ್ಯೆಗಳಲ್ಲಿ ನಾವೂ ಬಾಗಿ. ಅವರ ಸೋಲು ಗೆಲುವುಗಳಲ್ಲಿ , ನಮ್ಮ ಕೊಡುಗೆ ಅಪಾರ. ಅವರ ದೊಡ್ಡಮಟ್ಟದ ಯಶಸ್ಸು ನಮ್ಮ ಜೀವನದ ಗುರಿ ಮತ್ತು ಉದ್ದೇಶ. ಆದರೆ ಎಲ್ಲೋ ಒಂದು ಕಡೆ ನಮ್ಮ ಮಕ್ಕಳು ಎಂಬ ಮಮಕಾರದ ದಾರಿಯಲ್ಲಿ ನಮ್ಮ ಬೇಕು ಬೇಡಗಳನ್ನು ತ್ಯಾಗ ಮಾಡಿರುತ್ತೇವೆ.
ಮಕ್ಕಳೇ ಸರ್ವಸ್ವ ಅಂತ ಅವರು ತಮ್ಮ ಕಾಲಿನ ಮೇಲೆ ನಿಲ್ಲುವ ತನಕ ಹಾದಿಯಲ್ಲಿರುವ ಕಲ್ಲು ಮುಳ್ಳುಗಳನ್ನು ತೆಗೆಯುವುದೇ ನಮ್ಮ ಕೆಲಸವಾಗಿರುತ್ತದೆ. ನಾವು ಕಷ್ಟ ಪಟ್ಟ ಹಾಗೆ ಮಕ್ಕಳು ಕಷ್ಟ ಪಡಬಾರದು ಎನ್ನುವ ಧ್ಯೇಯ ಬೇರೆ.ಇದರಿಂದ ಎಲ್ಲಾ ತರಹದ ಸ್ವಾತಂತ್ರ್ಯದ ಕೀಲಿ ಕೈ ಮಕ್ಕಳಿಗೆ ಕೊಟ್ಟು ನಂತರ ಕೈ ಕೈ ಹಿಸುಕಿಕೊಂಡವರೆಷ್ಟೋ ಮಂದಿ.
ಇವಕ್ಕೆಲ್ಲಾ ಮುಖ್ಯ ಕಾರಣ ನಾವು ಮಕ್ಕಳನ್ನು ಬೆಳೆಸುವ ರೀತಿಯೇ?
ಇಂದು ನಗರ ಜೀವನ ಕುಂಡ ಕೃಷಿಯಾಗಿದೆ
ಒಂದು ಪಕ್ಷ ದೊಡ್ಡ ಅವಿಭಕ್ತ ಕುಟುಂಬ ವಿದ್ದರೂ ನಾನಾ ನೆಪವೊಡ್ಡಿ ಹೊರಬಂದು ನಾವು ನಮ್ಮ ಮಕ್ಕಳು ಎಂದು ಸ್ವಾರ್ಥ ಹಠ ಅಸೂಯೆ ಮುಂತಾದ ಅವಗುಣಗಳನ್ನು ಮಕ್ಕಳಲ್ಲಿ ಪರೋಕ್ಷವಾಗಿ ಬೆಳೆಸಲು ಕಾರಣರಾಗುತ್ತಿದ್ದೇವೆ.
ಒಟ್ಟು ಕುಟುಂಬ ಹಾಗಿರಲಿ, ಕೊನೆಯ ಪಕ್ಷ ಅಜ್ಜ ಅಜ್ಜಿಯರ ಸಾನಿಧ್ಯವಾದರೂ ದೊರಕಿಸಿಕೊಡುವ ಮನಸ್ಸು ಮಾಡುತ್ತೇವೆಯೇ, ಅದೂ ಇಲ್ಲ, ಅವರೆಲ್ಲಾ ನಮ್ಮ ಸುಖಕ್ಕೆ ಅಡ್ಡಿ ಕೂಳಿಗೆ ದಂಡ ಎಂದು ಮನದಟ್ಟು ಮಾಡಿಸಿ ದೂರವಿರಿಸಿ ಒಂಟಿ ಒಂಟಿಯಾಗಿ ಬೆಳೆಯುವಮಕ್ಕಳು ಬೆಳೆಯುತ್ತಾ ಸಮಸ್ಯೆಯಾಗದೇ ಇನ್ನೆನಾಗಲು ಸಾಧ್ಯ..? ಇದು ಹೀಗೇ ಮುಂದುವರಿದರೆ ನಮ್ಮ ಸಮಾಜದ ಮುಂದಿನ ಭವಿಷ್ಯ..?
ಎಷ್ಟೋ ಕಡೆ ಮಕ್ಕಳು ತಂದೆತಾಯಿಗಳ ಜತೆ ಭಾವನಾತ್ಮಕ ಸಂಭಂಧ ಹೊಂದಿಲ್ಲ
ಕೌಟುಂಬಿಕ ವಿಘಟನೆಯಾಗಲು ಕಾರಣ ಭಾವನಾತ್ಮಕ ಬಿರುಕುಗಳೇ
ಈ ದಿಸೆಯಲ್ಲಿ ನಾವು ಯೋಚಿಸಿದರೆ ನಮ್ಮ ನಮ್ಮ ತಪ್ಪು ನಮಗೆ ಅರಿವಾಗುತ್ತದೆಯೇ?
ಇಂತಹ ನಮ್ಮ ಸಮಾಜದ ಮುಂದಿನ ಭವಿಷ್ಯ ಏನು?
ನಮ್ಮ ಈಗಿನ ಕರ್ತವ್ಯ ಏನಿರಬೇಕು?
ಉತ್ತಮ ಸಮಾಜದ ಭವಿಷ್ಯಕ್ಕಾಗಿ ನಾವೇನು ಮಾಡಬೇಕು?
ಅಥವಾ ನಾವು ಸರಿ ದಾರಿಯಲ್ಲೇ ಹೋಗುತಿರುವೆವೇ? ಇಂತಹ ಹೆದರಿಕೆ ಅನಗತ್ಯವೇ?
ಗೆಳೆಯರೇ ಈಗಿನ ಇಂದಿನ ಚರ್ಚೆಯಿದು,
ನಿಮ್ಮ ನಿಲುವು ಏನು?