ಎಫ್.ಎಂ 22.2, ಮಸ್ತ್ ಮಜಾ ಮಾಡಬೇಡಿ.

ಎಫ್.ಎಂ 22.2, ಮಸ್ತ್ ಮಜಾ ಮಾಡಬೇಡಿ.

ವೀಕ್ಷಕರೆ ನಾನು ರಮ್ಯ 22.2 ಎಫ್.ಎಂನಿಂದ ಮಸ್ತ್ ಮಜಾ ಮಾಡಬೇಡಿ.ಆರೋಗ್ಯಕ್ಕೆ ಉತ್ತಮ. ದಿನಕ್ಕೆ ನೂರಾರು ಹಾಡು, ನೂರಾರು ಜೋಕ್ ಹಾಗೇ ಒಂದಿಷ್ಟು ಮಿರ್ಚ್ ಮಸಾಲ ಮತ್ತೆ ವಿಶೇಷ ಸಂದರ್ಶನಗಳು.

ಕಾಂಗ್ರೆಸ್ ಪಾದಯಾತ್ರೆಯಲ್ಲಿ ಜೋರಾಗಿ ನಡಿಗೆ. ಕೆಲವರಿಗೆ ಗಾಯ. ಕೆಲವರ ಜೇಬಿಗೆ ಕತ್ತರಿ. ಮುಖದಲ್ಲಿ ಬೆವರು.

"ಯಾರೋ ಯಾರೋ ಗೀಚಿ ಹೋದ. ಹಾಳು ಹಣೆಯ ಬರಹ"

ಮುಖ ಬೆವರಾಗಿದೆಯೇ ಪಾಂಡ್ಸ್ ಪೌಡರ್ ಬಳಸಿ ಸೌಂದರ್ಯ ವೃದ್ದಿಸಿಕೊಳ್ಳಿ

ಮಂಡಿ ಸವೆದಿದೆಯಾ ಅಮೃತಾಂಜನ್ ಬಳಸಿ. ಮಸ್ತ್ ಮಜಾ ಮಾಡಬೇಡಿ. ಆರೋಗ್ಯಕ್ಕೆ ಉತ್ತಮ

ಪಾದಯಾತ್ರೆಯಲ್ಲಿ ದೇಶಪಾಂಡೆ ಏನು ಮಾತಾಡಿದಾರೆ

ಅದು ಬಬಬಬಬಬಬಬ, ಆಮೇಲ ಬಬಬಬಬಬಬಬ ಅರ್ಥವಾಗಲಿಲ್ಲವೆ ಮತ್ತೆ ಸಂಜೆ 4ಕ್ಕೆ ಪ್ರಸಾರ ಮಾಡುತ್ತೇವೆ.

ಬಾಯಿ ಶುದ್ದವಾಗಿರಲು ಮಿಂಟ್ ಉಪಯೋಗಿಸಿ

ಪಾದಯಾತ್ರೆಯಲ್ಲಿ ಡೊಳ್ಳು ಕುಣಿತ,

"ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ...... ಮೇಲ್ಯಾವುದೋ"

ಈಗ ನಮ್ಮೊಂದಿಗೆ ಯಡಿಯೂರಪ್ಪ ಇದಾರೆ.

ಸರ್ ಹೇಳಿ, ಈ ಪಾದಯಾತ್ರೆ ಒಂದು ಷಡ್ಯಂತ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಾಮಾನ್ಯ. ಹಾಗಂತ ನಾವು ರೆಡ್ಡಿಗಳನ್ನು ಬಿಟ್ಟರೆ ಸರ್ಕಾರ ಅಧೋಗತಿ. ಕಾಂಗ್ರೆಸ್ ಮುಖಂಡರಿಗೆ ಡಯಾಬಿಟೀಸ್ ಜಾಸ್ತಿ ಇತ್ತಂತೆ ಅದಕ್ಕೆ ಪಾದಯಾತ್ರೆ ಮಾಡುತ್ತಾ ಇದಾರೆ. ಕೇಳಿದ್ರಲ್ಲಾ ಯಡಿಯೂರಪ್ಪನವರ ಮಾತು

ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ

ಉತ್ತಮ ನೀರಿಗಾಗಿ ಕಾವೇರಿಯನ್ನೇ ಬಳಸಿ

ಈಗ ನಮ್ಮೊಂದಿಗೆ ಅಂಬರೀಷ್ ಇದಾರೆ

ಸರ್ ಹೇಳಿ, ನೋಡ್ರಿ. ಇವತ್ತು ಕನ್ನಡ ಚಿತ್ರರಂಗಕ್ಕೆ ಹೊಸಬರು ಬಹಳ ಬರುತ್ತಾ ಇದಾರೆ. ಹಾಗೇ ದುಡ್ಡು ಹಾಕ್ತಾ ಇದಾರೆ. ಹೊಸ ನೀರು ಬಂದಾಗ ಹಳೇ ನೀರು ಹೋಗುತ್ತೆ. ಅದಕ್ಕೆ ನಾನು ಕಲಾವಿದರ ಸಂಘದ ಅಧ್ಯಕ್ಷನಾಗಿದ್ದೀನಿ.

ಕುಚಿಕ್ಕೂ ಕುಚಿಕ್ಕೂ ನಾನು ಚಟ್ಟಿ ದೋಸ್ತ್ ಕಣೋ ಕುಚ್ಚಿಕ್ಕೂ. ಏ ಈ ಹಾಡು ಬೇಡ. ಅಳು ಬರುತ್ತೆ.

ನಾನು ನೀನು ಒಂದಾದ ಮೇಲೆ. ಹಾ ಇದು ಚೆನ್ನಾಗಿದೆ.

ಈಗ ನಮ್ಮೊಂದಿಗೆ ಮುನ್ಸಿಪಾಲಿಟಿ ರಾಮ ಇದಾರೆ

ಹೇಳಿ ರಾಮ, ನಮಗೆ ಹೊಸಾ ಪರ್ಕೆ ಕೊಡಿಸ್ದೆ ಒಂದು ವರ್ಷ ಆಗೈತೆ. ಇನ್ನು ಊರು ಕಿಲೀನ್ ಮಾಡುವಾ ಅಂದ್ರೆ ಎಲ್ಲಿ ಅಂತಾ ಮಾಡುವಾ. ನೀವೇ ಹೇಳಿ.

ಅರೆರೆ ಗಿಳಿರಾಮ ಪಂಚಂರಂಗಿ ರಾಮ

ವೀಕ್ಷಕರೆ ಇಷ್ಟೊತ್ತನಕ ಕೇಳಿದ್ರಲ್ಲಾ. ನಮಗೆ ಊಟಕ್ಕೆ ಟೇಂ ಆತು. ಸಂಜೆ ಮ್ಯಾಕೆ ಸುರು ಮಾತ್ತೀವಿ. ಅಲ್ಲೀ ತನಕ ಕ್ಯಾಮೆ ನೋಡ್ಕೋ ಹೋಗಿ.

ಮಸ್ತ್ ಮಜಾ ಮಾಡಬೇಡಿ. ಆರೋಗ್ಯಕ್ಕೆ ಉತ್ತಮ.

Rating
No votes yet

Comments