ಪ್ರತಿಕ್ರಿಯೆ ಎಲ್ಲಿರಬೇಕು ಎನ್ನುವ ಬಗ್ಗೆ?

ಪ್ರತಿಕ್ರಿಯೆ ಎಲ್ಲಿರಬೇಕು ಎನ್ನುವ ಬಗ್ಗೆ?

ನಾನು ಕಂಡುಕೊಂಡಂತೆ, ಸಂಪದದಲ್ಲಿ ಪ್ರತಿಕ್ರಿಯೆಗಳನ್ನು ಸೇರಿಸುವಾಗ, ನಮ್ಮ ಪ್ರತಿಕ್ರಿಯೆ ಯಾರಿಗಾಗಿ, ಯಾವ ಬರಹಕ್ಕಾಗಿ ಮತ್ತು ಯಾರ ಪ್ರತಿಕ್ರಿಯೆಗಾಗಿ ಅನ್ನುವುದನ್ನು ಸ್ಪಷ್ಟ ಪಡಿಸದೇ ಹೋದರೆ ಅಪಾರ್ಥವಾಗುವುದಲ್ಲದೇ, ಅಸಂಬದ್ಧ ಎನಿಸುವುದೂ ಇದೆ.

ಒಂದು ಬರಹದ ಬಗ್ಗೆ ಅಥವಾ ಮೂಲ ಬರಹಗಾರನ ಅನಿಸಿಕೆಗಳಿಗೆ ಪ್ರತಿಕ್ರಿಯೆ ನೀಡುವಾಗ, ಮೂಲ ಬರಹದ ಕೊನೆಯಲ್ಲಿ ಇರುವ "ಹೊಸ ಪ್ರತಿಕ್ರಿಯೆ ಸೇರಿಸಿ" ಎನ್ನುವ ಸೌಲಭ್ಯವನ್ನೂ ಹಾಗೂ ಅನ್ಯ ಸಂಪದಿಗರ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ ನೀಡಬೇಕೇನಿಸಿದಾಗ, ಅಂತಹ ಪ್ರತಿಕ್ರಿಯೆಯ ಕೊನೆಯಲ್ಲಿ ಇರುವ  "ಇದಕ್ಕೆ ಪ್ರತಿಕ್ರಿಯೆ ಸೇರಿಸಿ" ಎನ್ನುವ ಸೌಲಭ್ಯವನ್ನೂ, ಬಳಸಿಕೊಂಡರೆ ಈ ಸಮಸ್ಯೆಯನ್ನು ತಡೆಯಬಹುದು ಎಂದು ನನ್ನ ಅನಿಸಿಕೆ.

ಈ ನಿಯಮವನ್ನು ಪಾಲಿಸಿದರೆ, ಯಾರನ್ನೇ ಆಗಲಿ ಸಂಬೋಧಿಸಬೇಕಾದ ಪ್ರಮೇಯವೂ ಇರುವುದಿಲ್ಲ, ಎಂದು ನನ್ನೆಣಿಕೆ.

- ಆಸು ಹೆಗ್ಡೆ

Rating
No votes yet

Comments