ಸೂಪರ್ ಕಥೆ - ಸಂಪದಿಗ ಮಿತ್ರರೆ ಮುಂದುವರೆಸಿ
ಬರಹ
ಒಂದು ದಟ್ಟವಾದ ಕಾಡು, ಕಾಡು ಮೃಗಗಳ ತಾಣ. ಅಲ್ಲಿ ಸಿಂಹನೇ ರಾಜ. ಇನಾನಿಮಸ್ ಆಗಿ ಆಯ್ಕೆಯಾಗಿದ್ದ. ಓಟಿಂಗ್ ಮಾಡೋಣ ಎಂದಿದ್ದಕ್ಕೆ ಹುಲಿಕಡೆಯವರಿಗೂ ಸಿಂಹನಿಗೂ ದೊಡ್ಡ ಹೊಡೆದಾಟವೇ ನಡೆದು ಹೋಗಿತ್ತು. ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದರು. ಇದ್ಯವುದಕ್ಕೂ ಜಗ್ಗದ ಸಿಂಹ ತನ್ನ ಅಧಿಪತ್ಯ ಸ್ಥಾಪಿಸಿದ್ದ. ಅವನು ಹೇಳಿದಂತೆಯೇ ನಡೆಯಬೇಕು. ದಿನ ನಿತ್ಯ ನಂದಿನಿ ಹೋಟೆಲ್ ನಿಂದ ಫುಡ್ ಸಪ್ಲೈ ಮಾಡಲಾಗುತ್ತಿತ್ತು. ಹೋಟೆಲ್ ಫುಡ್ ತಿಂದು ತಿಂದು ಗ್ಯಾಸ್ ಆಗಿ ಒಂದು ಜೆಲ್ಯೂಸಿಲ್ ಮತ್ತು ಒಮೇಜ್ ತೆಗೆದುಕೊಂಡು ಹಾಯಾಗಿ ಮಲಗಿದ್ದ.