ಪರಿಪೂರ್ಣ ದಿನ
ಎಂದು ರಕ್ತದ ಹನಿಗಳು ಬೇಶಿನ್ನಿನ್ನಲ್ಲಿ
ಮತ್ತು ರಸ್ತೆ ಇಕ್ಕೆಲಗಳಲ್ಲಿ ಕಾಣದೋ
ಅಂದು ನನಗೆ ನೆಮ್ಮದಿಯ ನಿದ್ದೆ
ರಸ್ತೆಗಳಲ್ಲಿ ನಾ ತಲೆಯೆತ್ತಿ ನಡೆಯುವೆ
ನನ್ನ ಪುನರ್ಜೀವನದ ಹೆಮ್ಮೆಯಲಿ
ನಾ ರಸ್ತೆಗಳಲಿ ನಡೆಯುವುದೆಂದರೆ
ನನಗಾಗ ಬಂದೂಕಿನ ನಳಿಕೆಗೆ
ಗುರಿಯಾಗುವ ಭಯವಿರದು
ಅಲ್ಲಿ ಇಲ್ಲಿ ಎಲ್ಲೆಲ್ಲಿ ಹರಡಿತ್ತು ಕತ್ತಲೆ
ಬಂದೂಕು ಒಂದೇ ಕಾರಣ
ಗುಂಡು ಉಗುಳುವ ಅದಿಲ್ಲದಿರೆ
ನನಗೆ ಯಾವುದರ ಆತಂಕವಿರದು
ಆಗ ಎಲ್ಲರಿಗೂ ಅವರವರ ಕೆಲಸ
ಅವರೆಲ್ಲರೂ ಹಣವಂತರಲ್ಲ
ಆದರೆ ಅವರಿಗೆ ಮನೆಯಿದೆ
ತಿನ್ನಲು ಕೂಳು ಇದೆ,
ಅದೆಂದರೆ ಅವರಿಗದು ಕೋಟಿ ಕೋಟಿ
ನನಗೆ ದೊರೆಯುತ್ತದೆ
ನಗುಮೊಗದ ಸ್ವಾಗತ
ದಿನಗಳು ಉಸಿರಾಡುತ್ತವೆ
ರಾತ್ರಿ ನಿದ್ದೆ ಬರುತ್ತದೆ
ಶಬ್ದಗಳೇ ಇಲ್ಲ, ಕೆಲವೊಮ್ಮೆ ಹಾರ್ನುಗಳು
ಆಗೊಮ್ಮೆ ಈಗೊಮ್ಮೆ ಗುಡುಗು ಸಿಡಿಲು
ಪರಿಪೂರ್ಣ ದಿನವೆಂದರೆ ಚೆಂಬೆಳಕಿನಲಿ
ನಾವು ಈ ರಸ್ತೆಗಳಲಿ ನಡೆಯುತ್ತಾ
ನನ್ನ ನಿದ್ದೆಗೆಡಿಸಿದ್ದ ಕರಾಳ ರಾತ್ರಿಗಳ
ನಿನ್ನೆಯ ಅಚ್ಚರಿ ಎಂದು ನಿರಾಳನಾಗುವುದು
ನನ್ನದೇ ಆಂಗ್ಲ ಕವನ 'A Perfect Day' ಅನುವಾದ.
ಮೂಲ ಕವಿತೆಗೆ ಇಲ್ಲಿ ಭೇಟಿ ನೀಡಿ
http://santhosh-acharya.blogspot.com/2010/08/perfect-day.html
Comments
ಉ: ಪರಿಪೂರ್ಣ ದಿನ
In reply to ಉ: ಪರಿಪೂರ್ಣ ದಿನ by raghusp
ಉ: ಪರಿಪೂರ್ಣ ದಿನ
ಉ: ಪರಿಪೂರ್ಣ ದಿನ
In reply to ಉ: ಪರಿಪೂರ್ಣ ದಿನ by ksraghavendranavada
ಉ: ಪರಿಪೂರ್ಣ ದಿನ
In reply to ಉ: ಪರಿಪೂರ್ಣ ದಿನ by santhosh_87
ಉ: ಪರಿಪೂರ್ಣ ದಿನ
ಉ: ಪರಿಪೂರ್ಣ ದಿನ
In reply to ಉ: ಪರಿಪೂರ್ಣ ದಿನ by gopinatha
ಉ: ಪರಿಪೂರ್ಣ ದಿನ
ಉ: ಪರಿಪೂರ್ಣ ದಿನ
ಉ: ಪರಿಪೂರ್ಣ ದಿನ
ಉ: ಪರಿಪೂರ್ಣ ದಿನ
ಉ: ಪರಿಪೂರ್ಣ ದಿನ
ಉ: ಪರಿಪೂರ್ಣ ದಿನ
ಉ: ಪರಿಪೂರ್ಣ ದಿನ
ಉ: ಪರಿಪೂರ್ಣ ದಿನ
ಉ: ಪರಿಪೂರ್ಣ ದಿನ