ಪ್ರೀತಿ
ಪ್ರೀತಿಯಲ್ಲಿ ನೀನು ಚಂದ್ರನಾಗಬೇಡ
ಬರುವುದಾದರೆ ಸೂರ್ಯನಾಗಿ ಬಾ
ನಾನದರ ಬಿಸುಪು ಮತ್ತು ಬೆಳಕನ್ನು
ಕತ್ತಲೆಯ ಕಾಡಿನೆಡೆಗೆ ಒಯ್ಯುವೆ.
ಪ್ರೀತಿಯಲ್ಲಿ ನೀನು ನದಿಯಾಗಬೇಡ
ಬರುವುದಾದರೆ ನೆರೆಯಾಗಿ ಬಾ
ನಾನದರ ಉತ್ಸಾಹವನ್ನ ಕೊಂಡೊಯ್ದು
ದುಃಖದ ಅಣೆಕಟ್ಟುಗಳನ್ನು ಒಡೆಯುವೆ.
ಪ್ರೀತಿಯಲ್ಲಿ ನೀನು ಹೂವಾಗಬೇಡ
ಬರುವುದಾದರೆ ಗುಡುಗಾಗಿ ಬಾ
ನಾನದರ ಅಬ್ಬರವನ್ನು ಎದೆಗಾನಿಸಿ
ರಣಕಹಳೆಯನ್ನು ಎಲ್ಲ ದಿಕ್ಕುಗಳಿಗೂ ಮೊಳಗಿಸುವೆ.
ಪ್ರೀತಿಯಲ್ಲಿ ನೀನು ಹಕ್ಕಿಯಾಗಬೇಡ
ಬರುವುದಾದರೆ ಬಿರುಗಾಳಿಯಾಗಿ ಬಾ
ನಾನದರ ಶಕ್ತಿಯನ್ನು ಎರವಲು ಪಡೆದು
ಪಾಪದರಮನೆಯ ಧ್ವಂಸ ಮಾಡುವೆ.
" ಈ ಚಂದ್ರ, ನದಿ, ಹೂವು, ನಕ್ಷತ್ರಗಳು, ಹಕ್ಕಿಗಳು
ಇವುಗಳ ಬಗ್ಗೆ ನಾವು ನಂತರ ವಿಚಾರಿಸೋಣ
ಆದರಿಂದು ಈ ಕತ್ತಲೆಯಲ್ಲಿ
ಕೊನೆಯ ಯುದ್ಧವೊಂದು ಬಾಕಿಯಿದೆ-
ನಮಗೀಗ ಒಲೆ ಹೊತ್ತಿಸಲು
ಒಂದಿಷ್ಟು ಬೆಂಕಿ ಬೇಕಾಗಿದೆ!"
(ಇದು ಬೆಂಗಾಲಿ ಕವಿ ಮುರಾರಿ ಮುಖ್ಯೋಪಾಧ್ಯಾಯರ ಆಂಗ್ಲ ಕವಿತೆ ' ಲವ್' ಕವಿತೆಯ ಭಾವಾನುವಾದ)
Rating
Comments
ಉ: ಪ್ರೀತಿ
In reply to ಉ: ಪ್ರೀತಿ by Shrikantkalkoti
ಉ: ಪ್ರೀತಿ
ಉ: ಪ್ರೀತಿ
ಉ: ಪ್ರೀತಿ
ಉ: ಪ್ರೀತಿ
ಉ: ಪ್ರೀತಿ