ಆದಿ ಶಂಕರಚಾರ್ಯ / ಅಭಿನವ ಶಂಕರಚಾರ್ಯ ?!
ಆದಿ ಶಂಕರಚಾರ್ಯರೋ, ಅಭಿನವ ಶಂಕರಚಾರ್ಯರೋ? ಅವರ ಹುಟ್ಟು ಚಿದಂಬರಂ ನಲ್ಲಿಯೇ ಅಥವಾ ಕೇರಳದ ಕಲಾಡಿಯಲ್ಲಿಯೇ? ಅವರ ಹುಟ್ಟು ಕ್ರೈಸ್ತ ಪೂರ್ವದಲ್ಲಿ ಆದದ್ದೋ? ನಂತರವೋ, ಸತ್ತದ್ದು ಕಾಶ್ಮೀರದಲ್ಲಿಯೋ ಅಥವಾ ಕಂಚಿಯಲ್ಲಿಯೋ ಹೀಗೇ ಶಂಕರಚಾರ್ಯರ ಜೀವನವು ಅನೇಕ ವಿವಾದ / ವಿರೋಧಬಾಸಗಳಿಂದ ಕೂಡಿದ್ದರೂ ಆತನೊಬ್ಬ ಭಾರತ ಕಂಡ ಹಿಂದೂ ತತ್ವದ ದಾರ್ಶನಿಕ ಎನ್ನಲಡ್ಡಿಯಿಲ್ಲ. ಆತ ಅದ್ಭುತ ತತ್ವಜ್ಞಾನಿ, ಕವಿ, ಪ್ರಬುದ್ಧ ವಿದ್ವಾಂಸ, ಸನ್ಯಾಸಿ, ಅಷ್ಟೇ ನಿಗೂಢ ಹಾಗೂ ಹಿಂದೂ ಧರ್ಮದ ಸುಧಾರಕ. ಇಂತಹ ಹಲವು ವಿವಾದಾತ್ಮಕ ಗುಣಗಳಿಂದ ಪ್ರಸಿದ್ಧಗೊಂಡಿದ್ದ ಆತನ ವ್ಯಕ್ತಿತ್ವವನ್ನು ಊಹಿಸುವುದಾದರೆ, ಆತನೊಬ್ಬ ಧೀಮಂತ, ವೈಚಾರಿಕತೆಯೊಂದಿಗೆ ಮಹತ್ವಕಾಂಕ್ಷೆಯುಳ್ಳ ಯುವಕ, ಧೀರ ವಾಗ್ಮಿ, ಹಾಗೂ ತಾಳ್ಮೆಯ ತತ್ವಜ್ಞಾನಿ, ತನ್ನ ಜೀವನದ ವಿರೋಧಾಭಾಸಗಳೊಂದಿಗೆ ಹೋರಾಡಿದ ಹಿಂದೂ ಧರ್ಮದ ಹರಿಕಾರ;
The life of sankara makes a strong impression of contraries, he is a philosopher and a poet, a savant and a saint, a mystic and a religious reformer. Such diverse gifts did he possess that different images present themselves, if we try to recall his personality. One sees him in youth, on fire with intellectual ambition, a stiff and intrepid debator; another regards him as a shrewd political genius rather a patriot attempting to impress on the people a sense of unity; for a third, he is calm philosopher engaged in the single effort to expose the contradictions of life and thought with an unmatched incisiveness; for a fourth, he is the mystic who declares that we are all greater than we know. there have been few minds more universal than his. - Dr. Radhakrishana
ಶಂಕರಚಾರ್ಯರ ಜೀವನ ಚರಿತ್ರೆಯನ್ನು ಓದುತ್ತಿದ್ದೆ. ಅದರಲ್ಲಿ ಡಾ. ರಾಧಕೃಷ್ಣರವರು ಬರೆದ ಈ ಪ್ಯಾರ ಬಹಳ ಇಷ್ಟವಾಯಿತು. ಯಾರಾದರೂ ಇದನ್ನು ಅನುವಾದಿಸಿದರೆ ಎಲ್ಲರಿಗೂ ಅನುಕೂಲವಾಗುವುದು.