ಗಡಿಯಾರವೆಂಬ ಕಾಲವೂ ಕುರ್ಚಿಯೆಂಬ ಕೆಲಸವೂ ವಯಸ್ಸಾಗುವುದನ್ನು ದಡ್ಡತನವೆನ್ನುತ್ತವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೯

ಗಡಿಯಾರವೆಂಬ ಕಾಲವೂ ಕುರ್ಚಿಯೆಂಬ ಕೆಲಸವೂ ವಯಸ್ಸಾಗುವುದನ್ನು ದಡ್ಡತನವೆನ್ನುತ್ತವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೯

(೧೫೧) ಆದರೆ ಯಾರೇ ಇಬ್ಬರ ದೇಹದೊಳಗಿ ಜೈವಿಕ ಗಡಿಯಾರವೂ ಪರಸ್ಪರ ಹೋಲಿಕೆಗೆ ಒಪ್ಪಲಾರವು! ಆದರೂ ಕೈಗಡಿಯಾರವು ಎಲ್ಲರ ದೇಹಗಳನ್ನು ಗ್ರೀನ್‍ವಿಚ್ ಕಾಲಮಾನದ ಪ್ರಕಾರ ಅಳೆಯುತ್ತದೆ. ಆದ್ದರಿಂದ ಗಡಿಯಾರಕ್ಕೂ ಕಾಲನಿಗೂ ಸಂಬಂಧವಿಲ್ಲ!


(೧೫೨) ಮಾಡುತ್ತಿರುವ ಕೆಲಸಕಾರ್ಯವನ್ನು ಸ್ಥಗಿತಗೊಳಿಸಲಿರುವ ಅತ್ಯಂತ ಆಕರ್ಷಕ ವಸ್ತು ಕುರ್ಚಿ! ಕುರ್ಚಿಯ ಮೇಲೆ ಕುಳಿತು ಕೆಲಸ ಮಾಡುವುದೇ ಒಂದು ವ್ಯಂಗ್ಯೋಕ್ತಿ!


(೧೫೩) ವಯಸ್ಸಾದಂತೆ ನಾವು ಹೆಚ್ಚು ಹೆಚ್ಚು ತಪ್ಪುಗಳನ್ನೆಸಗುತ್ತೇವೆ ಎಂಬ ಅರಿವು ಮೊಡಲು ನಮಗಿರುವ ಒಂದೇ ಅವಕಾಶವೆಂದರೆ -- ನಮಗೆ ವಯಸ್ಸಾಗುವುದು! ಅಕಾಲಿಕ ಮೃತ್ಯುವನ್ನಪ್ಪುವವರಿಗೆ ಇಂತಹ ದಿವ್ಯದರ್ಶನ ಲಭ್ಯವಾಗದು. ಆದ್ದರಿಂದ ಆತ್ಮಹತ್ಯೆ ಹಾಗೂ ಕೊಲೆಯು ನಿಷಿದ್ಧ. ನಿಮಗೆ ಯಾರ ಬಗ್ಗೆಯಾದರೂ ದ್ವೇಷವಿದ್ದಲ್ಲಿ ಅವರನ್ನು ಆತ್ಮಹತ್ನೆಗೆ ದೂಡದೆ ವಯಸ್ಸಾಗಲು ಬಿಡಿ. ಮತ್ತು ಸೇಡು ತೀರಿಸಿಕೊಳ್ಳಲು ನೀವೂ ಅಲ್ಲಿಯವರೆಗೂ ಕಾಯಿರಿ!


(೧೫೪) ನಾವು ಸೋಲುಗಳೊಂದಿಗೆ ಸಫಲವಾಗಿ ಬದುಕುವ ಉಪಾಯವನ್ನು ಪ್ರೌಢವ್ಯಕ್ತಿತ್ವವೆನ್ನುತ್ತೇವೆ!


(೧೫೫) ಜಗತ್ತಿನ ಯಾವ್ಯಾವ ಜಾಗಗಳಲ್ಲಿ ನಡೆದಾಡಲು ಮುಕ್ತ ಅವಕಾಶವಿಲ್ಲವೇಂಬುದನ್ನು ದೇಶವೊಂದು ತನ್ನ ಪ್ರಜೆಗಳಿಗೆ ವಿವರಿಸಿ ಹೇಳುವ ಸರಳೋಪಾಯವನ್ನು ಭೂನಕ್ಷೆ ಎನ್ನುತ್ತೇವೆ!

Rating
No votes yet

Comments