ಕನಸು ಕರಗದಿರಲಿ
ಕಾಯುವಿಕೆ ಕಾತರದ ಮೂರು
ನಿಷ್ಕರುಣ ವರುಷಗಳಲ್ಲಿ
ಕಣ್ಣಲಿನ ಕನಸು
ಕರಗದಿರಲಿ ಗೆಳತಿ.
ಪ್ರೀತಿ ಜೋಳಿಗೆಯ ಹಿಡಿದು ನಿಂತ
ಒಂಟಿ ಸೂರ್ಯ ನಾನು
ಮಡಿಲ ತಂಪನೆರೆದು ಕಾಯುವೆಯಾ?
ನಂಬಿಕೆಯ ಹಾಯಿ ದೋಣಿ
ಮುಳುಗದಿರಲಿ ಅನುಮಾನದ ಸುಳಿಯಲ್ಲಿ
ಎದೆಗೂಡಿನಲ್ಲಿ ಢವಗುಟ್ಟುವ
ಪುಟ್ಟ ಹೃದಯ ಸೋಲದಿರಲಿ
ದಿನದ ಅವೇ ಜಂಜಡಗಳಲ್ಲಿ
ಕಮರದಿರಲಿ ನೆನಪುಗಳು.
ನಡೆದ ಹಾದಿಯ ಗುಂಟ ಬಿಟ್ಟು
ನಡೆದವರ ಕರಿ ನೆರಳು
ಜೊತೆ ನಡೆವ ನಿನ್ನ
ಭರವಸೆ ಎಂದೂ ಸುಳ್ಳಾಗದಿರಲಿ.
Rating
Comments
ಉ: ಕನಸು ಕರಗದಿರಲಿ
ಉ: ಕನಸು ಕರಗದಿರಲಿ
ಉ: ಕನಸು ಕರಗದಿರಲಿ
ಉ: ಕನಸು ಕರಗದಿರಲಿ
ಉ: ಕನಸು ಕರಗದಿರಲಿ