ನಿಲ್ಲು ನಿಲ್ ಗಣಿಗಾರ

ನಿಲ್ಲು ನಿಲ್ ಗಣಿಗಾರ

 

ನಿಲ್ಲು ನಿಲ್ ಗಣಿಗಾರ


ನಿಲ್ಲು ನಿಲ್ ಗಣಿಗಾರ ತಾಯೊಡಲ ಸಿಗಿಯದಿರು

ತಾಯಸ್ಥಿ ಮಾಂಸಗಳ ಮಾರಿ ಬದುಕದಿರು ||ಪ||

 

ಸಹ್ಯಾದ್ರಿ ವಿಂದ್ಯಾದ್ರಿ ಭೂತಳದ ಭಾಗ್ಯವಿದು

ನೋಡಿಲ್ಲಿ ನಗರಸಿರಿ ಜಾನಪದ ಮೂಲ

ಲೆಕ್ಕವಿಲ್ಲದ ಸಸ್ಯ ಸಂಕುಲಗಳುಳಿಯಲಿ

ವನ್ಯ ಜೀವಿಗಳನ್ನು ನೀ ಕೊಲ್ಲಬೇಡ ||೧||

 

ಉದರಭರಣಕೆ ನೂರು ಸಾವಿರದ ದಾರಿಯಿದೆ

ಹೆತ್ತವ್ವೆ ಮುತ್ತವ್ವೆಯರ ಮಾರಬಹುದೇ ?

ನಮ್ಮವ್ವೆ ನಮ್ಮನ್ನು ಹೆತ್ತವಳು ಭೂಮಾತೆ

ಎಲ್ಲರನು ಎಲ್ಲವನು ಹೊತ್ತವಳು ಮರೆತೆ ||೨||

 

ಹುಟ್ಟಿಸಿದ ಶಿವನೆಲ್ಲ ಜೀವಿಗಳ ಕಾಯುವನು

ಮರ್ಯಾದೆಯಿಂದಲೇ ಇರಿಸ ಬಯಸುವನು

ನೆಮ್ಮದಿಯ ಕೆಡಿಸದೆ ಸನುಮತದಿ ಬಾಳುವುದೇ

ಒಮ್ಮತದ ಮರ್ಯಾದೆ ಅದ ಮೀರಬಹುದೇ ||೩||

 

- ಸದಾನಂದ

Rating
No votes yet

Comments