ಕೆಎಎಸ್(ಪ್ರಿಲಿಮ್ಸ್) ಫಲಿತಾಂಶ ಪ್ರಕಟ
ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರ್ಸ್ ಗ್ರೂಪ್ ಎ&ಬಿ ಸೇವೆಗಳಲ್ಲಿನ 268 ಹುದ್ದೆಗಳ ನೇಮಕಕ್ಕೆ2010ರ ಜೂನ್ 6ರಂದು ನಡೆಸಿದ ಕೆಎಎಸ್(ಪ್ರಿಲಿಮ್ಸ್) ಪರೀಕ್ಷೆಗೆ ಹಾಜರಾದವರಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗ ಆಗಸ್ಟ್ 12ರಂದು ಪ್ರಕಟಿಸಲಾಗಿದೆ. ಆದರೆ, ಈ ಕುರಿತು ಇಲ್ಲಿಯವರೆಗೆ ಮಾಧ್ಯಮಗಳಲ್ಲಿ ಯಾವುದೇ ಸುದ್ದಿ ಪ್ರಕಟವಾಗದಿರುವುದರಿಂದ ಫಲಿತಾಂಶ ನಿರೀಕ್ಷಿಸುತ್ತಿರುವವರು ಇನ್ನೂ ನಿರೀಕ್ಷೆಯಲ್ಲೇ ಉಳಿಯಬೇಕಾಗಿದೆ. ಇನ್ನಾದರೂ ಆಯೋಗ ಅಧಿಕೃತ ಪ್ರಕಟಣೆಯನ್ನು ಮಾಧ್ಯಮಗಳ ಮೂಲಕ ಪ್ರಕಟಿಸಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಈ ಸುದ್ದಿ ಇಲ್ಲಿನ ಬ್ಲಾಗ್ ಓದುಗರಿಗೆ ಮಾತ್ರ. ಫಲಿತಾಂಶಗಳನ್ನು ಇಲ್ಲಿ ನೋಡಬಹುದು:http://kpsc.kar.nic.in/results.htm
Rating