ಸ್ವತಂತ್ರ ದಿನಾಚರಣೆ - ಆಗಸ್ಟ್ ೧೫

ಸ್ವತಂತ್ರ ದಿನಾಚರಣೆ - ಆಗಸ್ಟ್ ೧೫

ಬರಹ

ಆಗಸ್ಟ್ ೧೫ - ಸ್ವತಂತ್ರ ದಿನಾಚರಣೆ .. ೬೪ ನೆ ಸ್ವಾತಂತ್ರೋತ್ಸವದ ಅಂಗ ವಾಗಿ ವಿಶೇಷ ಕಾರ್ಯ ಕ್ರಮಗಳು ಟಿವಿ ಅಲ್ಲಿ ನೋಡಲು ತುಂಬಾ ಸಂತೋಷ ಆಗುತ್ತೆ. ನಾವೆಲ್ಲಾ ಸ್ಕೂಲ್ ಗೆ ಹೋಗಬೇಕಾದಾಗ ಬೆಳೆಗ್ಗ್ನ ಜಾವ ವೈಟ್ ಯುನಿಫಾರ್ಮ್ ಹಾಕಿ ಕೊಂಡು ಸ್ಚೂಲಿನ ಆವರಣದ ಸುತ್ತ procession ಹೋಗಬೇಕಾದರೆ ಎಲ್ಲರೂ ನಮ್ಮನೆ ನೋಡೋದನ್ನ ಕಂಡು ಏನೋ ಒಂದು ತರಹದ ಕುಶಿ ಕುತೂಹಲ ನಮಗೆ. ಈಗ ಅಂತ ದಿನಗಳು ಮತ್ತೆ ಸಿಗುವುದು ತುಂಬಾ ಕಷ್ಟ. ಕೆಲ ತಂದೆ ತಾಯಿ ಗಳು ಮಕ್ಕಳಿಗೆ ಇದರ ಬಗ್ಗೆ ಉತ್ಸಾಹ ಮೂಡಿಸುವ ಬದಲಿಗೆ ನಿರ್ರುತ್ಸಹ ಮಾಡುತ್ತಾರೆ. ಹೇಗೆಂದರೆ ತುಂಬಾ ಮಕ್ಕಳು ಈ ರೀತಿ ದಿನಾಚರಣೆ ಇದ್ದಾಗ ಶಾಲೆ ಗೆ ಹೋಗೋದೇ ಇಲ್ಲ ಇದರಲ್ಲಿ ಅರ್ದ ತಪ್ಪು ಅವರ ಪೋಷಕರದ್ದೆ. " ಅಯ್ಯ ಬಿಡು ಏನ್ ಹೋಗ್ತಿಯ ಅರ್ರಮಗಿ ಮನೇಲಿ ಆಟ ಆಡಿಕೊಂಡುಇರು ಅಥವಾ ಊರಿಗೆ ಹೋಗಿ ಬರೋಣ " ಈ ರೀತಿ ಮಕ್ಕಳ ಮನಸನ್ನು ಬದಲಿಸುತ್ತಾರೆ. ಈ ರೀತಿ ಮಾಡುವಲ್ಲಿ ಮಕ್ಕಳಿಗೆ ಆಸಕ್ತಿ ಕಡಿಮೆ ಆಗುತ್ತೆ. ಪೋಷಕರು ಹೇಗೆ ಅವರ ಮಕ್ಕಳು ಹಾಡಲ್ಲಿ ಓದಿನಲ್ಲಿ ಡಾನ್ಸ್ ಅಲ್ಲಿ ಮುಂದಿರಬೇಕು ಅಂತ ಬಯಸುತ್ತಾರೋ ಹಾಗೆ ದೇಶದ ಬಗ್ಗೆ ಗೌರವ ಬರುವ ಹಾಗೆ ಮಡ್ಬೇಕದ್ದದ್ದು ಪೋಷಕರ ಕೆಲಸ. ಮಕ್ಕಳಿಗೆ ಯಾವುದು ಸರಿ ಯಾವುದು ತಪ್ಪು ಅನ್ನೋದು ಗೊತ್ತಿರುವುದಿಲ್ಲ ಪೋಷಕರು ಯಾವುದನ್ನ ಹೇಳಿಕೊಡ್ತಾರೋ ಅದುನ್ನೇ ಮಕ್ಕಳು ಕಲಿಯೋದು. ಕೆಲ ಚಿಕ್ಕ ಮಕ್ಕಳು ಭಾರತದ ಬಾವುಟ ವನ್ನು ಇಟ್ಟಿಕೊಂಡು ಆಟ ಅಡ್ತಿರತ್ತಾರೆ, ಆಗಸ್ಟ್ ೧೫ ಅಂತು ಕೆಲ ಮೋರಿ ಗಳ ಹತ್ತಿರ ಬೀದಿ ಯಲ್ಲಿ ರಸ್ತೆ ಯಲ್ಲಿ ಬಾವುಟ ಗಳು ಬೀಳಿಸಿ ಹೋಗಿರ್ತಾರೆ. ಅಂತ ಸಂಧರ್ಬದಲ್ಲಿ ಯಾರೇ ಆಗಿರಲಿ ಅವರಿಗೆ ಬುದ್ದಿ ಹೇಳುವುದರಲ್ಲಿ ತಪ್ಪಿಲ್ಲ. ನಮ್ಮ ದೇಶದ ಬಗ್ಗೆ ನಾವು ತಿಳಿ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಬೀದಿ ಅಲ್ಲಿ ಬಾವುಟ ಗಳು ಬಿದ್ದಿದರು ಕೆಲವರು ನೋಡಿಕೊಂಡು ಹಾಗೆ ಹೋಗ್ತಾರೆ, ಅದೇ ರೀತಿ ಬೀದಿ ಯಲ್ಲಿ ದೇವರ ಫೋಟೋ ಬಿದ್ದಿದ್ರೆ ನೀವು ಹಾಗೆ ಹೋಗ್ತಿರ?? ಬಾಯಲ್ಲಿ ಭಾರತಾಂಬೆ ನಮ್ಮ ತಾಯಿ ಹಾಗೆ ಹೀಗೆ ಅಂತ ಹೇಳೋದಷ್ಟೇ ಅಲ್ಲ ಅದಕ್ಕೆ ತಕ್ಕಂತ ಗೌರವ ನಮ್ಮ ಕೈಲಿ ಆದಷ್ಟು ನಾವು ಕೊಡಬೇಕು. ನಾವು ಓದಿಲ್ಲ ತಿಳಿದಿಲ್ಲ ನಮಗೆ ಗೊತ್ತಾಗೋದಿಲ್ಲ ಅಂತ ಹೇಳೋದ್ರಲ್ಲಿ ಅರ್ಥಾನೆ ಇಲ್ಲಅಂತ ನನ್ನ ಅನಿಸಿಕೆ. ನನಗೆ ಈ ಬರಹ ತೃಪ್ತಿಕರವಾಗಿ ಬಂದಿಲ್ಲ ಏನಾದರು ತಪ್ಪಿದ್ದರೆ ಕ್ಷಮೆ ಇರಲಿ. :)