"LOVE" IN BANGALORE

"LOVE" IN BANGALORE

ಬರಹ

೧) ಈಗಿನ ಕಾಲದ  ಹೈ ಸ್ಕೂಲ್ ಓದುವ ಕೆಲ ವಿದ್ಯಾರ್ಥಿ ಗಳು ಪ್ರೀತಿ ಪ್ರೇಮ ಎಂಬ ಜಾಲದಲ್ಲಿ ಬೀಳ್ತಾರೆ, ಅದು ಅವರಿಗೆ ಒಂದು ಹೊಸ ಅನುಭವ, ಆಗ ಅವರಲ್ಲಿ ಏನೋ ಒಂದು ತರಹದ ಸಂತೋಷ, ಉತ್ಸಾಹ ..  ಒಬ್ಬರನ್ನೋಬರು ತುಂಬಾ ಪ್ರೀತಿಸುತ್ತಾರೆ ಆದ್ರೆ ಅದು ಎಲ್ಲಿಯ ವರೆಗೂ? ಬರೀ ಅವರ ಹೈ ಸ್ಕೂಲ್ ಮುಗಿಯೋ ವರೆಗೂ ಅಷ್ಟೇ. ಆಮೇಲೆ ಕಾಲೇಜು ಹೈಯರ್ ಸ್ಟಡೀಸ್ ಅಂತ ಮುಂದುವರಿತ ಹೋಗ್ತಾರೆ. ಹೈ ಸ್ಕೂಲ್ ಲವ್ ನ ಬ್ರೇಕ್ ಮಾಡೋಕೆ ಅವ್ರ್ಗೆ ಒಂದು ಒಳ್ಳೆಯ  ರೀಸನ್ ಅಂದ್ರೆ "ಆಗ ನಾನು ಇನ್ನು ಚಿಕ್ಕ ಹುಡುಗ/ಹುಡುಗಿ ಆಗಿದ್ದೆ. ಆ ವಯಸಲ್ಲಿ ನನಗೇನು ಅರ್ಥ ಆಗುತ್ತೆ" (ಮೋಸ್ಟ್ ಕಾಮನ್ಲಿ ಯುಸಡ್ ರೀಸನ್) . 

 

೨) ಹೈ ಸ್ಕೂಲ್ ಮುಗಿದ ಮೇಲೆ ಮುಂದಿನ ಹೆಜ್ಜೆ ಕಾಲೇಜು , ಮೊದಲನೇ ದಿನದ ಕಾಲೆಜಂತು ಎಲ್ಲರಿಗೂ ಹೆಚ್ಚಿನ ಸಂತೋಷ ಕೊಡುವಂತಹ ದಿನ. ಆಗಷ್ಟೆ ಸ್ಕೂಲ್ ಲೈಫ್ ಮುಗಿಸಿರುತ್ತಾರೆ ಕಾಲೇಜಿಗೆ ಬಂದ ಮೇಲೆ ನಾನು ಈಗ ದೊಡ್ಡವನು ಅಂತ ಅನ್ಕೊಬಿಡ್ತಾರೆ. ಕಾಲೇಜಿಗೆ ಹೋದಮೇಲೆ ಲವ್ ಮಾಡದೇ ಇರ್ತಾರಾ?? ಲವ್ ಅನ್ನೋದು ಒಂದು ಫ್ಯಾಶನ್ ಆಗೋಗ್ಬಿಟ್ಟಿದೆ. ಲವ್ ಮಾಡ್ತಿದೀನಿ ಅಂತ ಹೇಳಿದಾಗ... ಟ್ರೂ ಲವ್ವ ? ಅಥವಾ ಟೈಮ್ ಪಾಸ್ ಲವ್ವ ಅಂತ ಕೇಳ್ತಾರೆ! ಕಾಲೇಜಿನಲ್ಲಿ ಓದುವಾಗ , ನಾನು ನಿಜವಾದ ಪ್ರೀತಿ ನೆ ಮಾಡ್ತಿದೀನಿ ಅಂತಾರೆ. ಆದರೆ ಅದು ಎಷ್ಟು ದಿನ?? ಎರಡು ವರ್ಷ ಕಾಲೇಜು ಮುಗಿಯೋವರೆಗೂ ಅಷ್ಟೇ. ಆಗ ಅವರು ಕೊಡೋ ರೀಸನ್ ಏನ್ ಹೇಳಿ ? "ನಾನು (Attraction ) ಆಕರ್ಷಣೆ / ಇನ್ ಫಾಚುಎಶನ್ ನ ಲವ್ ಅಂತ ಅನ್ಕೊಂಡಿದ್ದೆ" ಎರಡು ವರ್ಷದ ಪ್ರೀತಿಯ ಅದ್ಯಯ ಅಲ್ಲಿಯೇ ಮುಗಿಸಿ ಮುಂದಿನ ವ್ಯಾಸಂಗದ ಪಯಣ ಶುರು ಮಾಡ್ತಾರೆ.

 

೩) ಕಾಲೇಜು ಮುಗಿದ ನಂತರ ಡಿಗ್ರಿ ಸೇರ್ತಾರೆ .. ಪಿ.ಯು.ಸಿ. ಅಲ್ಲಿ ಸ್ವಲ್ಪ ಕಾಲೇಜು ಬಂಕ್ ಮಾಡೋಕೆ ಹೆದರಿ ಮಾಡಿರೋದಿಲ್ಲ , ಡಿಗ್ರಿ ಅಲ್ಲಿ ಬಂಕ್ ಮಾಡಿ ಫಿಲಂ ಕಾಫೀ ಡೇ ಅಂತ ಲವೆರ್ಸ್ ಜೊತೆ ಸುತ್ತಡ್ತಾರೆ, ಆ ಒಂದು ಸಂಧರ್ಬದಲ್ಲಿ ಅವರ ಅಂತರಥ್ಮೆಕ್ಕೆ ಗೊತ್ತಿರುತ್ತೆ ಅವರು ನಿಜವಾದ ಪ್ರೀತಿ ಮಾಡುತ್ತ ಇರೋಲ್ಲ ಅಂತ ಆದರೆ ಮುಂದೆ ಮಾತ್ರ ಇಬ್ರು ಹೇಳ್ಕೊಲೋದಿಲ್ಲ. ಇಬ್ಬರದು ನಾಟಕದ ಪ್ರೀತಿ ನೆ, ಮೂರು / ನಾಲ್ಕು ವರ್ಷ ಆಗುತ್ತೆ ಒಬ್ಬರ  ಮೇಲೆ ಒಬ್ಬರಿಗೆ ಆಸಕ್ತಿ ಕೂಡ ಕಡಮೆ ಆಗಿರುತ್ತೆ , so ಅವರಿಗೆ ಬ್ರೇಕ್ ಅಪ್ ಆಗೋದು ಈಜಿ ಆಗುತ್ತೆ, ಆಗ ಇಲ್ಲ ಸಲ್ಲ ದ ಜಗಳವಾಡಿ ಬೆಕಂತನೆ ಬ್ರೇಕ್ ಹಾಕ್ತಾರೆ. 

 

೪) ಕಾಲೇಜಿನ ಲೈಫ್ ಮುಗೀತು , ಕೆಲಸಕ್ಕೆ ಹೋಗ್ತಾರೆ , ಅಲ್ಲಿ ಯಾರೂ ಇಷ್ಟ ಆಗ್ತಾರೆ ಮತ್ತೆ ಪ್ರೀತಿ ಹುಟ್ಟುತ್ತೆ, ಆದರೆ ಆ ಪ್ರೀತಿ ಮದುವೆ ವರೆಗೂ ಹೋಗೋದೇ ಇಲ್ಲ. ತುಂಬಾ ಅಪರೂಪ. ಪ್ರೀತಿ ಮಾಡಿ ಲಾಸ್ಟ್ ಅಲ್ಲಿ"ಮನೇಲಿ ಒಪ್ತ ಇಲ್ಲ ನೀನು ಬೇರೆ ಅವರ್ನ ಮದುವೆ ಅಗ್ಬಿಡು ನನಗೆ ನೀನು ಚೆನ್ನಾಗಿರೋದು ಮುಖ್ಯ" ಅಂತ ಹೇಳಿ ಎಸ್ಕಪ್ ಆಗ್ತಾರೆ . :)