ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆದರದ ಸ್ವಾಗತ...
ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾನಿಲಯದ Research Centre Vergelijkende Cultuurwetenschap (Comparative Science of Cultures) ನ ನಿರ್ದೇಶಕರಾಗಿರುವ ಹಾಗೂ ಬಾಲು ಎಂದು ಪರಿಚಿತರಾಗಿರುವ ಪ್ರೋ. ಬಾಲಗಂಗಾಧರ ಅವರ The Heathen in his Blindness…Asia the West and the Dynamics of Religion ಪ್ರಸ್ತುತ ಸಮಾಜ ವಿಜ್ಞಾನಗಳ ಚರ್ಚೆಯಲ್ಲಿ ಪ್ರಮುಖವಾಗಿ ಕಂಡುಬರುವ ಕೃತಿಯಾಗಿದೆ . ಕರ್ನಾಟಕದ ಸಮಾಜಶಾಸ್ತ್ರೀಯ ಬೌದ್ಧಿಕ ವಲಯದಲ್ಲೂ ಕೂಡ ಈ ಪುಸ್ತಕವು ಗಂಭೀರವಾಗಿ ಚರ್ಚೆಗೊಳಗಾಗುತ್ತಿರುವ ಕೃತಿ. ಬಾಲು ಅವರ ಚಿಂತನೆಗಳು ಕನ್ನಡಿಗರಿಗೂ ಪರಿಚಯವಾಗಲಿ ಇಲ್ಲೂ ಕೂಡ ಒಳ್ಳೆಯ ಚರ್ಚೆಗಳು ನಡೆಯಲಿ ಎಂಬ ಉದ್ದೇಶ ಹೊತ್ತು ಮೂಲ ಆಂಗ್ಲ ಭಾಷೆಯಲ್ಲಿರುವ ಕೃತಿಯನ್ನು “ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ ಎಂಬ ಶೀರ್ಷಿಕೆಯ ಅಡಿ ಕನ್ನಡಕ್ಕೆ ಅನುವಾದಿಸಲಾಗಿದೆ. . ಕನ್ನಡಕ್ಕೆ ಅನುವಾದಿಸಿ ಪರಿಚಯಿಸುವ ಕಾರ್ಯವನ್ನು ಕುವೆಂಪು ವಿಶ್ವವಿದ್ಯಾನಿಲದಲ್ಲಿನ ಸ್ಥಳೀಯ ಸಂಸ್ಕೃತಿಗಳ ಅದ್ಯಯನ ಕೆಂದ್ರದ ನಿರ್ದೇಶಕರಾಗಿರುವ ಪ್ರೊ. ರಾಜಾರಾಮ ಹೆಗಡೆಯವರು ಮಾಡಿದ್ದಾರೆ.
ಇದರ ಬಿಡುಗಡೆ ಸಮಾರಂಭ ೨೯-೦೮-೨೦೧೦ ರವಿವಾರ ಬೆಳಗ್ಗೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಸಭಾಂಗಣದಲ್ಲಿ ನಡೆಯಲಿದೆ. ಖ್ಯಾತ ಸಾಹಿತಿ ಶ್ರೀ ರವಿ ಬೆಳಗೆರೆಯವರು ಕೃತಿಯನ್ನು ಬಿಡುಗಡೆ ಮಾಡಲಿರುವರು. ಪ್ರಸ್ತಾವಿಕವಾಗಿ ಅನುವಾದಕ ರಾಜರಾಮ ಹೆಗಡೆ ಮಾತನಾಡುವರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಸಿವರಾಮ ಕಷ್ಣನ್ ಪುಸ್ತಕವನ್ನು ಪರಿಚಯಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಪದಿಗರೆಲ್ಲರಿಗೂ ಆದರದ ಸ್ವಾಗತ.
ಪ್ರೀತಿಯಿಂದ ಬನ್ನಿ :)
ಸ್ಥಳೀಯ ಸಂಸ್ಕೃತಿಗಳ ಅದ್ಯಯನ ಕೆಂದ್ರ
ಕುವೆಂಪು ವಿಶ್ವವಿದ್ಯಾನಿಲಯ
ಶಂಕರಘಟ್ಟ ೫೭೭ ೪೫೧
ಹೆಚ್ಚಿನ ಮಾಹಿತಿಗಾಗಿ ಬರೆಯಿರಿ
cslcku@gmail.com