ಬೆಳದಿಂಗಳ ಚಂದಿರ
ಬರಹ
ಬೆಳದಿಂಗಳ ಚಂದಿರ
ಸೂರ್ಯ ಮುಳುಗುವ ಸಂಜೆ ಹೊತ್ತಿನಲಿ
ಮುಸ್ಸಂಜೆಯ ಮಬ್ಬಿನ ಬಾನಂಗಳದಲಿ
ತನ್ನ ಪಾಳಿಗಾಗಿ ಪೂರ್ಣಚಂದ್ರ ಬರುತ್ತಲಿದ್ದ
ನಸುಗೆಂಪ ಬಣ್ಣಕ್ಕೆ ತಿರುಗಿದ ನೇಸರ
ಆಗಸದ ಮೇಲೆಲ್ಲಾ ಕೆಂಪು ಬಣ್ಣವ ಚೆಲ್ಲಿ
ಬರುವ ಚಂದ್ರನಿಗೆ ಸ್ವಾಗತ ಕೋರುತ್ತಿದ್ದ
ನೇಸರನೆ ತಮ್ಮ ಯಜಮಾನನಂತೆ
ಆತ ಹೊರಡುತ್ತಲೇ ಅವನ ಹಿಂದೆಯೇ
ಹೊರಟವು ಹಕ್ಕಿಗಳು ಮರಳಿ ಗೂಡಿಗೆ
ಸಾಲು ಸಾಲಾಗಿ ಹೊರಟ ಹಕ್ಕಿಗಳು ಕೆಂಪು
ಆಗಸದಲಿ ತೋರಣವಾಗಿ, ಬರುವ ಚಂದಿರನ
ಸ್ವಾಗತಿಸಲು ಬಂದಂತೆ ತೋರುತ್ತೀತ್ತು
ನಿಧಾನವಾಗಿ ಕತ್ತಲೆಯು ಎಲ್ಲೆಡೆಯು ಆವರಿಸಿ
ಬೆಳದಿಂಗಳ ಚಂದಿರನು ಆಗಸವನು ಏರುತ್ತ
ತನ್ನ ಪ್ರಕಾಶದೊಂದಿಗೆ ಆಗಸವನೇ ಬೆಳಗುತ್ತಿದ್ದ
ನೋಡ ನೋಡುತ್ತಲೇ ತೆರೆಯಲಾರಂಭಿಸಿತು
ತನ್ನದೇ ಆದ ಇರುಳಿನ ಹೊಸ ಸುಂದರ ಜಗತ್ತು
ಆ ಬೆಳದಿಂಗಳ ರೂಪ ನನ್ನ ಬೆರಗುಗೊಳಿಸಿತ್ತು
- ತೇಜಸ್ವಿ.ಎ.ಸಿ