ಅಚ್ಚಾಗುವ ಆಸೆ

ಅಚ್ಚಾಗುವ ಆಸೆ

 


ಅಕ್ಷರಗಳ ಹೊತ್ತು


ಮುತ್ತುಗಳ ಪೋಣಿಸಿ


ಭಾವಗಳ ಬಿತ್ತರಿಸಿ


ಹೊತ್ತಗೆಯಾಗುವ ಆಸೆ


 


ಮನಸಿಂದ ಮನಸಿಗೆ


ಕಟ್ಟೆ ಕಟ್ಟಿ


ಛಂದಃ ಅಲಂಕಾರ ಇಲ್ಲದ


ಸರಳ  ಅಂಗಿ ತೊಟ್ಟು


ಮಿನುಗುವ ಕಣ್ಣಲಿ


 ಇಣುಕುವ ಆಸೆ


 


ಕಂಡೂ ಕಾಣದಂತಿರುವ


ಜನರ ಎಬ್ಬಿಸಿ


 ತಳಮಳಗೊಳ್ಳುವ ಹೃದಯಕೆ


ತಂಪೆರಚಿ


ಶತೃವಿನಲ್ಲೂ ಸ್ನೇಹ


ಬೆಸೆಯುವ ಆಸೆ 


 


ಲಿಂಗ - ಜಾತಿಯ


ಹಂಗು ತೊರೆದು


ದ್ವೇಷ - ಅಸೂಯೆಯ


ಕಾಲ ಮರೆತು


ಸ್ನೇಹದ ದೀವಿಗೆಯಾಗಿ 


ಅಚ್ಚಾಗುವ ಆಸೆ.

Rating
No votes yet

Comments