ಮಾತುಪಲ್ಲಟ - ೨

ಮಾತುಪಲ್ಲಟ - ೨

♫♫♫ಮಾತುಪಲ್ಲಟ - ೨♫♫♫


♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥
ಮಾತುಪಲ್ಲಟ ಸರಣಿಯ ಎರಡನೇ ಹಾಡು ಬಾಡಿಗಾರ್ಡ್ (ಮಲೆಯಾಳ ಭಾಷೆ) ಚಿತ್ರದ್ದು. ಆ ಹಾಡಿನ ಕೊನೆಯಲ್ಲಿ 'ಅಗಲುತ್ತಿರುವ ಪ್ರೇಮಿಗಳು' ಎನ್ನುವಂಥ ಕಲ್ಪನೆಯಿದ್ದರೆ ಈ ಮಾತುಪಲ್ಲಟ ಕಥಾನಾಯಕಿ ಸಾಯುವಂಥ ಕಲ್ಪನೆಯಲ್ಲಿ ಕೊನೆಗೊಣ್ಡಿದೆ. ಹಿನ್ದಿನ ಮಾತುಪಲ್ಲಟದನ್ತೆ ಇಲ್ಲೂ ತನಿಗೆಯ್ಮೆಯದೇ ಮೇಲುಗೈಯಾಗಿದ್ದರೂ ಚರಣಗಳ ಸಾಹಿತ್ಯದ ನಾಲ್ಕರಲ್ಲೊನ್ದು ಭಾಗ ಅನುವಾದಿಸಿರುವ ಸಾಲುಗಳು.

ಸಂಗೀತ -  ಔಸೇಪಚ್ಚನ್♪,

ಮೂಲ ಸಾಹಿತ್ಯ - ಕೈದಪ್ರಂ ದಾಮೋದರನ್ ನಂಬೂದಿರಿ♪,
ಹಾಡುಗಾರರು : ಕಾರ್ತಿಕ್ ಮತ್ತು ಎಲಿಜಬೆತ್ ರಾಜು♪.
ವಿಡಿಯೋ : http://www.youtube.com/watch?v=nK1UsW-Fna4
♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥

♂ಪುಲರ್ ಮಂಜು ಮಂಜಿಮಯಿಲೂಡೆ | ಮಲರ್ ಮಂಜಲೇಱಿಯೇಱಿ | ಪೂತ್ತುಲಞೊರೀ ಕನ್ನಿವಸನ್ತಂ ತೇಡುವತೆನ್ದಾಣ್ ||
♀ಅೞಗಿನ್ಡೆ ವೆಣ್ಣಿಲಾ ಕಾಯಲ್ | ತಿರ ನೀನ್ದಿ ವನ್ನದಾರೋ | ಎನ್ಡೆ  ತೇನ್ ಕಿನಾಕಡವಿಲ್ ಅಡುಕ್ಕುವದ್ ಆರಾಣಾರಾಣ್ ||

♂ಪೇರಿಲ್ಲಾ ರಾಜ್ಯತ್ತೆ ರಾಜಕುಮಾರೀ |
♀ಅದಿರಿಲ್ಲಾ ರಾಜ್ಯತ್ತೆ ರಾಜಕುಮಾರಾ |
♂ಆರೋರುಂ ಕಾಣಾದೆನ್ ಅರಿಗೆ ವರಾಮೋ |
♀ಅರಿಗಿಲ್ ಞಾನ್ ವನ್ನಾಲಿನ್ನೆನ್ದು ತರುಂ ನೀ |
♂ಮಾರಿವಿಲ್ಲುಗಳಾಲೇ ಮಣಿಮಾಳಿಗೆ ಪಣಿಯುಂ ಞಾನ್ | ವಾರ್ ಮೇಘಮಾಲೆಯಿಲೂಡೆ ನಿನ್ನೆ ಕೊಣ್ಡು ಪೋಗುಂ |
♂ಪುಲರ್ ಮಂಜು || ♀ಅೞಗಿನ್ಡೆ  || ಪೇರಿಲ್ಲಾ ||

♂ಆ ಚಿರಿ ಕೇಟ್ಟಾಲ್ ಮುಳಂ ತಣ್ಡು ಉಣರುಂ ಪೋಲೆ |
♀ಆ ಮೊೞಿ ಕೇಟ್ಟಾಲ್ ಇಳಂ ತೇನ್ ಕಿನಿಯುಂ ಪೋಲೆ |
♂ನೀ ಪುಣರುಂಬೋಳ್ ಮನಸ್ಸಿಲ್ ಪೂಮೞ ಪೊೞಿಯುಂ |
♀ನೀ ಅಗಲುಂಬೋಳ್  ನಿಲಾವುಂ ನಿೞಲಿಲ್ ಮಱಯುಂ |
♂ನಿನ್ ನಿಱಮುಳ್ಳ ಕಿನಾಮೞಯಿಲ್ | ಆದಿರ ರಾವು ಮಯಂಗುಂಬೋಳ್ | ನಿನ್ಡೆ ಮೌನಮಿನ್ನ್ ಎೞುದುಗಯಲ್ಲೇ ಮನಸಮ್ಮತಂ || ಪೇರಿಲ್ಲಾ ||

♀ನೀಯಿಲ್ಲೆಂಗಿಲ್ ವಸನ್ತಂ ವೆಱುದೆ ವೆಱುದೆ | ನೀ ವರುಮೆಂಗಿಲ್ ಇರುಟ್ಟುಂ ಪೌರ್ಣಮಿ ಪೋಲೆ |
♂ಆ ಮಿೞಿ ರಣ್ಡಿಲ್ ಕಿನಾವಿನ್ ಪೂನ್ತೇನರುವಿ | ಆ ಚೊಡಿಯಿದಳಿಲ್ ತುಳುಂಬುಂ ಒರು ಕಿನ್ನಾರಂ |
♀ಒಟ್ರಕ್ಕಿವಿಡೆಯಿರಿಕ್ಕುಂಬೋಳ್ | ಓಲಕರಿವಳ ಇಳಕುಂಬೋಳ್ | ಪುೞಯಿಲೂಡೆ ನೀ ಮನ್ದಂ ಮನ್ದಂ ತೊೞಞೆತ್ತಿಯೋ ||
♂ಪೇರಿಲ್ಲಾ ರಾಜ್ಯತ್ತೆ ರಾಜಕುಮಾರೀ |
♀ಅದಿರಿಲ್ಲಾ ರಾಜ್ಯತ್ತೆ ರಾಜಕುಮಾರಾ |
♂ಪುಲರ್ ಮಂಜು || ♀ಅೞಗಿನ್ಡೆ  ||

♂ಪಿರಿಯುನ್ನ ಕೂಟ್ಟುಕಾರ್ ನಮ್ಮಳ್ | ಪಿರಿಯಾತ್ತ ನನ್ಮಯೋಡೆ | ನೊಮ್ಪರಙ್ಙಳುಂ ಪುಞ್ಚಿರಿಯಾಕುಂ ಯಾತ್ರಾಮೊೞಿಯೋಡೆ ||
♂ಕರಯಿಲ್ಲ ಕಣ್ಣುನೀರ್ ಪೋಲುಂ | ವಿಡಚೊಲ್ಲಿ ಯಾತ್ರಯಾಯಿ | ಎನ್ನುಂ ಓರ್ಮಗಳ್ ತೇಂಗುಂ ನಿಮಿಷಂ ನೆಂಜಿಲ್ ವಿದುಂಬುನ್ನು ||
ತನನಾನ ನಾನನಾ ನಾನಾ | ತನನಾನ ನಾನ ನಾನಾ |
ತಾನನಾನನಾ ತಾನನ ನಾನಾ | ತಾನನ ನಾನಾನಾ ||

♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥

ಮಾತುಪಲ್ಲಟ:

♂ಕಾರ್ಮೋಡದನ್ದದ ಸಾಲು | ಸಾಲಾಗಿ ಕರೆವ ಹಾಗೆ | ನನ್ನಲೊನ್ದು ಮಳೆಯನು ಕರೆದು ಇನ್ದು ನೀನಿಳೆಯೊಳಗಿಳಿದನ್ತೆ ||
♀ಇನಿದಾದ ಕವಿತೆಯ ಸೊಲ್ಲು | ಸೊಲ್ಲಲಾರದೆದೆಯ ಪಾಡು | ಸೇರಿದಂಥ ಪಿಸುಮಾತಿದು ಎನ್ನ ಕಿವಿಯೊಳಗಿಳಿದನ್ತೆ ||

♂ಹೊಸತೊನ್ದು ಲೋಕವನ್ನೇ ಇಳೆಗಿಳಿಯಿಸಿದವಳೇ |
♀ನನ್ನೊಳಗೂ ಬಯಕೆಗಳ ಒಡಲೊಡೆಯಿಸಿದವನೇ |
♂ಕೈಯನ್ನು ಹಿಡಿಯುತ್ತ ಬಳಿಯೇಕಿರಲೊಲ್ಲೆ |
♀ಬಳಿಯೇ ನಾನಿದ್ದರೆ ನೀನೆನಗೇನನು ತರಬಲ್ಲೆ |
♂ಮಳೆಬಿಲ್ಲಿನನ್ದದ ಗುಡಿಯ | ನಿನಗಾಗಿಯೇ ಕಟ್ಟುವೆನು | ಆಕಾಶ ಗೋಪುರ ಶಿಖರಗಳನ್ದದ ಕಳಶವ ಕೆತ್ತುವೆನು ||
♂ಕಾರ್ಮೋಡದನ್ದದ || ♀ಇನಿದಾದ || ಹೊಸತೊನ್ದು ||

♂ಆ ನಗೆಯಿನ್ದ ಕಲ್ಲೂ ಅರಳಿದ ಹಾಗೆ | ಆ ನುಡಿಯಿನ್ದ ಬಿದುರೂ ಕೊನರಿದ ಹಾಗೆ |
♀ನಿನ್ನ ಅಪ್ಪುಗೆಗೆ ಮನಸ್ಸಿನ್ದು ಹೂಮಳೆಯ ಕರೆಯಿತು | ನಿನ್ನ ಅಗಲಿಕೆಗೆ ಚಂದ್ರ ಮೋಡದಿ ಅವಿತನು |
♂ಬಣ್ಣದ ಕನಸಿನ ಲೋಕವನು | ದಾಟುತ ಈಸುತ ತೇಲುತಿರೆ | ನಿನ್ನ ಒಪ್ಪಿಗೆ ತೋರಲೊಲ್ಲದೆ ತುಟಿಯೆರಡರೊಳ್ - || ಹೊಸತೊನ್ದು ||

♀ನೀನಿಲ್ಲದಿರೆ ವಸನ್ತ ಬಾರದೆ ಇರಲಿ | ನೀ ಜೊತೆಗಿರಲು ಎನ್ದೂ ಹುಣ್ಣಿಮೆ ಬರಲಿ |
♂ಸವಿಮಾತಿದನು ನುಡಿಯುವ ತುಟಿಯೋ | ಸವಿಗನಸುಗಳ ಕಾಣುವ ಕಣ್ಣೋ |
♀ಬಣ್ಣದ ಕನಸಿನ ಲೋಕವನು | ದಾಟುತ ಈಸುತ ತೇಲುತಿರೆ |
ನಿನ್ನ ಒಪ್ಪಿಗೆ ತೋರಲೊಲ್ಲದೆ ಕಂಗಳೆರಡರೊಳ್ - ||
♀ಹೊಸತೊನ್ದು ಲೋಕವನ್ನೇ ಇಳೆಗಿಳಿಯಿಸಿದವನೇ |
♂ನನ್ನೊಳಗೂ ಬಯಕೆಗಳ ಒಡಲೊಡೆಯಿಸಿದವಳೇ |
♂ಕಾರ್ಮೋಡದನ್ದದ || ♀ಇನಿದಾದ ||

♂ಕಾರ್ಮೋಡದನ್ದದ ಸಾಲು | ಸಾಲಾಗಿ ಚೆದುರಿದನ್ತೆ | ನನ್ನನಿನ್ದು ಅಗಲುತ್ತ ಇಳೆಯ ತೊರೆದೆ ನೀನ್ ಎನ್ನೊಬ್ಬನನುಳಿಸಿ |
♂ದಡವ ಸೇರದೀ ನಾವೆ | ನಾವಿಕನೇ ಇರದೆ ಈಗ | ನಾವು ಇಬ್ಬರೂ ಸೇರಿದಂಥ ಆ ಬಾಳ್ವೆಯೇ ಕನಸೀಗ |
ಲಲಲಾಲ ಲಾಲಲಾ ಲಾಲಾ | ಲಲಲಾಲ ಲಾಲ ಲಾಲಾ |
ಲಾಲಲಾಲಲಾ ಲಾಲಲ ಲಾಲಾ ಲಾಲಲ ಲಾಲಾಲಾ |


♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥
ಮರುಪಲ್ಲಟ :

♂ಕಾರ್ಮೋಡದನ್ದದ ಸಾಲು | ಸಾಲಾಗಿ ಚೆದುರಿದನ್ತೆ | ನನ್ನನಿನ್ದು ಅಗಲುತ್ತ ಮಱೆಗೆ ಸರಿದೆ ನೀನ್ ಎನ್ನೊಬ್ಬನನುಳಿಸಿ |
♂ದಡವ ಸೇರದೀ ನಾವೆ | ನಾವಿಕನೇ ಇರದೆ ಈಗ | ನಾವು ಇಬ್ಬರೂ ಸೇರಿದಂಥ ಆ ಬಾಳ್ವೆಯೇ ಕನಸೀಗ |

 

♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥♥

Rating
No votes yet

Comments